ಕಾರ್ಡ್‌ಬೋರ್ಡ್, ಕ್ಲೇ ಬಳಸಿ ಫ್ರಿಡ್ಜ್‌ಗೆ ಮಾಡಿ ಸುಂದರವಾದ ಯೂನಿಕ್ ಮ್ಯಾಗ್ನೆಟ್ಸ್

Published : May 04, 2026, 04:41 PM IST

ನಿಮಗೂ ಫ್ರಿಡ್ಜ್ ಮೇಲೆ ಅಲಂಕಾರಿಕ ಮ್ಯಾಗ್ನೆಟ್‌ಗಳನ್ನು ಅಂಟಿಸೋದು ಇಷ್ಟನಾ? ಹಾಗಿದ್ರೆ, ಈ ಬಾರಿ ಅಂಗಡಿಯಿಂದ ತರುವ ಬದಲು, ಮನೆಯಲ್ಲೇ ಸುಲಭವಾಗಿ, ಅಗ್ಗವಾಗಿ ಮತ್ತು ಮಜವಾಗಿ ಫ್ರಿಡ್ಜ್ ಮ್ಯಾಗ್ನೆಟ್ ತಯಾರಿಸಬಹುದು. ಇದೊಂದು ಸೂಪರ್ DIY ಪ್ರಾಜೆಕ್ಟ್.

PREV
15
ಹೇಗೆ ಮಾಡುವುದು ಫ್ರಿಡ್ಜ್ ಮ್ಯಾಗ್ನೆಟ್?

ಫ್ರಿಡ್ಜ್ ಮ್ಯಾಗ್ನೆಟ್ ಮಾಡೋದು ತುಂಬಾ ಸುಲಭ. ಇದಕ್ಕೆ ಬೇಕಾಗಿರೋದು ಸಣ್ಣ ಮ್ಯಾಗ್ನೆಟ್‌ಗಳು, ಕಾರ್ಡ್‌ಬೋರ್ಡ್, ಗ್ಲೂ, ಬಣ್ಣಗಳು, ಕ್ಲೇ (ಜಿಗುಟು ಮಣ್ಣು), ಅಲಂಕಾರಕ್ಕೆ ಕಲ್ಲು, ಮುತ್ತು, ಗ್ಲಿಟರ್. ಇವುಗಳನ್ನು ಬಳಸಿ ನೀವು ಸುಂದರವಾದ ಫ್ರಿಡ್ಜ್ ಮ್ಯಾಗ್ನೆಟ್ ತಯಾರಿಸಬಹುದು. ಫೋಟೋದಲ್ಲಿರುವಂತೆ ಕ್ಲೇ ಬಳಸಿ ಕೂಡಾ ಮ್ಯಾಗ್ನೆಟ್ ರೆಡಿ ಮಾಡಬಹುದು.

25
ಹಣ್ಣಿನ ಆಕಾರದ ಫ್ರಿಡ್ಜ್ ಮ್ಯಾಗ್ನೆಟ್

ಫ್ರಿಡ್ಜ್ ಮೇಲೆ ಈ ತರಹದ ಕ್ಯೂಟ್ ಹಣ್ಣಿನ ಆಕಾರದ ಮ್ಯಾಗ್ನೆಟ್‌ಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇದಕ್ಕಾಗಿ, ಕಾರ್ಡ್‌ಬೋರ್ಡ್‌ನಿಂದ ಹಣ್ಣಿನ ಸ್ಲೈಸ್‌ ಆಕಾರದಲ್ಲಿ ಕತ್ತರಿಸಿ. ನಂತರ ಕಲ್ಲಂಗಡಿ, ಕಿತ್ತಳೆ ಅಥವಾ ನಿಂಬೆಹಣ್ಣಿನ ಸ್ಲೈಸ್‌ನಂತೆ ಬೇರೆ ಬೇರೆ ಬಣ್ಣ ಹಚ್ಚಿ. ಇದರ ಹಿಂದೆ ಮ್ಯಾಗ್ನೆಟ್ ಅಂಟಿಸಿ ಫ್ರಿಡ್ಜ್ ಮೇಲೆ ಇಡಿ.

35
ಕೋಟ್ಸ್ ಇರುವ ಫ್ರಿಡ್ಜ್ ಮ್ಯಾಗ್ನೆಟ್

ನೀವು ಫ್ರಿಡ್ಜ್ ಮ್ಯಾಗ್ನೆಟ್ ಮೇಲೆ ಕೋಟ್ಸ್ ಇರುವ ಡಿಸೈನ್‌ಗಳನ್ನು ಕೂಡ ಮಾಡಬಹುದು. ಕಾರ್ಡ್‌ಬೋರ್ಡ್ ಅನ್ನು ವೃತ್ತ, ಚೌಕ ಅಥವಾ ಬೇರೆ ಬೇರೆ ಆಕಾರದಲ್ಲಿ ಕತ್ತರಿಸಿ. ಅದರ ಮೇಲೆ ಮೋಲ್ಡಿಂಗ್ ಕ್ಲೇ ಬಳಸಿ ಡಿಸೈನ್ ಮಾಡಿ. ಜೊತೆಗೆ, ನಿಮ್ಮಿಷ್ಟದ ಫುಡ್ ಕೋಟ್ಸ್ ಅನ್ನು ಅದರ ಮೇಲೆ ಬರೆಯಿರಿ.

45
ಲಿಪ್ಪನ್ ಆರ್ಟ್ ಫ್ರಿಡ್ಜ್ ಮ್ಯಾಗ್ನೆಟ್

ಲಿಪ್ಪನ್ ಆರ್ಟ್ ಬಳಸಿ ಕೂಡಾ ನೀವು ಫ್ರಿಡ್ಜ್ ಮ್ಯಾಗ್ನೆಟ್ ತಯಾರಿಸಬಹುದು. ಇದಕ್ಕಾಗಿ, ಕಾರ್ಡ್‌ಬೋರ್ಡ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿ ಅದರ ಹಿಂದೆ ಮ್ಯಾಗ್ನೆಟ್ ಅಂಟಿಸಿ. ಬೇಸ್ ಕಲರ್‌ಗಾಗಿ ಹಳದಿ, ಕೇಸರಿ ಬಣ್ಣ ಬಳಸಿ. ನಂತರ ಕಪ್ಪು ಬಣ್ಣದಿಂದ ಡ್ಯಾನ್ಸ್ ಮಾಡುತ್ತಿರುವ ಲಿಪ್ಪನ್ ಕಲಾಕೃತಿಗಳನ್ನು ಬಿಡಿಸಿ. ಈಗ ಕ್ಯೂಟ್ ಫ್ರಿಡ್ಜ್ ಮ್ಯಾಗ್ನೆಟ್ ರೆಡಿ.

55
ಫೋಟೋ ಫ್ರಿಡ್ಜ್ ಮ್ಯಾಗ್ನೆಟ್

ನಿಮಗೆ ಕಸ್ಟಮೈಸ್ಡ್ ಫ್ರಿಡ್ಜ್ ಮ್ಯಾಗ್ನೆಟ್ ಬೇಕಿದ್ದರೆ, ಮಿನಿ ಫೋಟೋ ಮ್ಯಾಗ್ನೆಟ್ ತಯಾರಿಸಬಹುದು. ಇದಕ್ಕಾಗಿ, ವೃತ್ತಾಕಾರದಲ್ಲಿ ಕತ್ತರಿಸಿ ಅದರಲ್ಲಿ ನಿಮ್ಮ ಫ್ಯಾಮಿಲಿ ಫೋಟೋ ಅಂಟಿಸಿ. ಅದರ ಮೇಲೆ ಕ್ರಿಯೇಟಿವ್ ಆಗಿ ಆರ್ಟ್ ಮಾಡಿ. ಹಿಂದೆ ಮ್ಯಾಗ್ನೆಟ್ ಅಂಟಿಸಿ ಫ್ರಿಡ್ಜ್ ಮೇಲೆ ಇಡಿ. ನೀವು ಹೂವಿನಂತಹ ಡಿಸೈನ್‌ಗಳನ್ನು ಕೂಡ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories