ಬೋರಿಕ್ ಪುಡಿ ಮತ್ತು ಸಕ್ಕರೆಯ ಮಿಶ್ರಣ
ಸ್ವಲ್ಪ ಬೋರಿಕ್ ಪೌಡರ್ ತೆಗೆದುಕೊಂಡು ಅದಕ್ಕೆ ಸಕ್ಕರೆ ಸೇರಿಸಿ. ಜಿರಳೆಗಳು ಸಕ್ಕರೆಯ ಸಿಹಿ ವಾಸನೆಗೆ ಆಕರ್ಷಿತವಾಗುತ್ತವೆ ಮತ್ತು ಬೋರಿಕ್ ಪೌಡರ್ ಅವುಗಳನ್ನು ಕೊಲ್ಲುತ್ತದೆ. ಈ ಮಿಶ್ರಣವನ್ನು ಜಿರಳೆಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ, ಅಡುಗೆಮನೆ, ಸಿಂಕ್ ಅಡಿಯಲ್ಲಿ, ಮನೆಯ ಮೂಲೆಗಳಲ್ಲಿ, ಇತ್ಯಾದಿಗಳಲ್ಲಿ ಇರಿಸಿ. ಇದು ಮಕ್ಕಳು ಮತ್ತು ಸಾಕುಪ್ರಾಣಿಗಳ ವ್ಯಾಪ್ತಿಯಿಂದ ದೂರವಿರಬೇಕು ಎಂಬುದನ್ನು ನೆನಪಿನಲ್ಲಿಡಿ.