Chanakya Niti: ಸಿಂಹ ತನ್ನ ಮರಿಯ ಮೇಲೆ ದಾಳಿ ಮಾಡಿದ್ದೇಕೆ? ಶತ್ರುವಿಗಿಂತ ಕೋಪದ ವಿನಾಶ ನೂರು ಪಟ್ಟು ಹೆಚ್ಚು!

Published : Oct 04, 2026, 05:02 PM IST

Chanakya niti on anger management: ಶತ್ರುಗಳು ಮಾಡುವ ಹಾನಿಗಿಂತ ಒಂದು ಕ್ಷಣದ ನಮ್ಮ ಅಂಧ ಕೋಪ ಮಾಡುವ ವಿನಾಶವೇ ನೂರು ಪಟ್ಟು ಹೆಚ್ಚು! ಗಾಯಗೊಂಡ ಸಿಂಹ ತನ್ನದೇ ಮಗುವಿನ ಮೇಲೆ ದಾಳಿ ಮಾಡಿದ ಕಣ್ಣೀರ ಕಥೆ ಮತ್ತು ಕ್ರೋಧವನ್ನು ಗೆಲ್ಲುವ ಬಗ್ಗೆ ಚಾಣಕ್ಯ ನೀತಿ ಹೇಳುವ ಕಟು ಸತ್ಯ ಇಲ್ಲಿದೆ...

PREV
16
ಚಾಣಕ್ಯರು ಹೇಳಿದ ಸಾರ್ವಕಾಲಿಕ ಎಚ್ಚರಿಕೆಯ ಮಾತು

ಚಾಣಕ್ಯರು ಹೇಳಿದ ಸಾರ್ವಕಾಲಿಕ ಎಚ್ಚರಿಕೆಯ ಮಾತು
ಒಂದು ಕ್ಷಣದ ಅಂಧ ಕೋಪದಲ್ಲಿ ಮನುಷ್ಯ ತೆಗೆದುಕೊಳ್ಳುವ ನಿರ್ಧಾರ ಇಡೀ ಜೀವನವನ್ನೇ ನರಕವಾಗಿಸಬಹುದು! ಬೇಟೆಗಾರನ ಬಾಣದಿಂದ ಗಾಯಗೊಂಡ ಸಿಂಹ ತನ್ನದೇ ಮರಿಯ ಮೇಲೆ ಪಂಜಾ ಬೀಸಿದ ಕಣ್ಣೀರ ಕಥೆ ಮತ್ತು ಕ್ರೋಧದ ಬಗ್ಗೆ ಆಚಾರ್ಯ ಚಾಣಕ್ಯರು ಹೇಳಿದ ಸಾರ್ವಕಾಲಿಕ ಎಚ್ಚರಿಕೆಯ ಮಾತುಗಳು ಇಲ್ಲಿವೆ ನೋಡಿ…

26
ಸಿಂಹ ಮತ್ತು ಮರಿಯ ಕಣ್ಣೀರ ಕಥೆ

ಸಿಂಹ ಮತ್ತು ಮರಿಯ ಕಣ್ಣೀರ ಕಥೆ
ಕಾಡಿನಲ್ಲಿ ಬೇಟೆಗಾರನೊಬ್ಬ ಹೊಡೆದ ಬಾಣ ಸಿಂಹದ ಹೆಗಲನ್ನು ಸೀಳಿ ಹೋಯಿತು. ನೋವು ಮತ್ತು ತೀವ್ರ ಸಿಟ್ಟಿನಿಂದ ಉರಿಯುತ್ತಿದ್ದ ಸಿಂಹ ತನ್ನ ಗುಹೆಗೆ ಮರಳಿತು. ಆ ಕ್ಷಣದಲ್ಲಿ ಸಿಂಹದ ಪುಟ್ಟ ಮರಿ ತನ್ನ ತಂದೆಯನ್ನು ಕಂಡು ಖುಷಿಯಿಂದ ಓಡಿಬಂತು. ಆದರೆ, ವಿಪರೀತ ಕೋಪದಲ್ಲಿದ್ದ ಸಿಂಹ, ಮರಿಯನ್ನು ಶತ್ರುವೆಂದು ಭಾವಿಸಿ ಒಂದೇ ಪೆಟ್ಟಿಗೆ ಪಂಜಾದಿಂದ ಅಪ್ಪಳಿಸಿತು. ಮರಿ ರಕ್ತಸಿಕ್ತವಾಗಿ ನೆಲಕ್ಕೆ ಬಿತ್ತು.

ಕೆಲವೇ ಕ್ಷಣಗಳಲ್ಲಿ ಸಿಂಹದ ಕೋಪ ತಣ್ಣಗಾದಾಗ, ತಾನು ಹೊಡೆದು ಕೆಡವಿದ್ದು ತನ್ನದೇ ಮುದ್ದು ಮಗುವನ್ನು ಎಂದು ಅರಿವಾಯಿತು. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು!

36
ಈ ಕಥೆ ಕಲಿಸುವ ಕಟು ಸತ್ಯ

ಈ ಕಥೆ ಕಲಿಸುವ ಕಟು ಸತ್ಯ
ಜೀವನದಲ್ಲಿ ನಮಗೆ ಹೊರಗಿನ ಶತ್ರು ಮಾಡುವ ಹಾನಿಗಿಂತ, ನಮ್ಮೊಳಗಿರುವ ಅನಿಯಂತ್ರಿತ ಕೋಪ ಮಾಡುವ ಹಾನಿಯೇ ನೂರು ಪಟ್ಟು ಹೆಚ್ಚು ಅಪಾಯಕಾರಿ!

46
ಚಾಣಕ್ಯರ ಶ್ಲೋಕ ಮತ್ತು ಸಂದೇಶ

ಚಾಣಕ್ಯರ ಶ್ಲೋಕ ಮತ್ತು ಸಂದೇಶ
“ಕ್ರೋಧೋ ವೈವಸ್ವತೋ ರಾಜಾ ತೃಷ್ಣಾ ವೈತರಣೀ ನದೀ...”
(ಅಂದರೆ: ಅಂಧ ಕೋಪ ಮತ್ತು ನಿಯಂತ್ರಣವಿಲ್ಲದ ಭಾವನೆಗಳೇ ಮನುಷ್ಯನ ಅತಿ ದೊಡ್ಡ ಶತ್ರು. ಸಂಯಮ ಮತ್ತು ವಿವೇಕವೇ ಆತನ ನಿಜವಾದ ಶಕ್ತಿ).

56
ಜೀವನಪೂರ್ತಿ ನೋವುಣ್ಣುತ್ತಾರೆ

ಜೀವನಪೂರ್ತಿ ನೋವುಣ್ಣುತ್ತಾರೆ
ಇಂದಿನ ದಿನಗಳಲ್ಲೂ ಅಷ್ಟೇ, ಜನರು ಕೋಪ ಅಥವಾ ಆವೇಶದಲ್ಲಿ ಜೀವಮಾನವಿಡೀ ಪಶ್ಚಾತ್ತಾಪ ಪಡುವಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಒಂದೇ ಒಂದು ಕ್ಷಣದ ಸಿಟ್ಟಿನಲ್ಲಿ ಸುಂದರ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ, ಒಳ್ಳೆಯ ಕೆಲಸವನ್ನು ಬಿಡುತ್ತಾರೆ, ಅಥವಾ ಬಾಯಿಗೆ ಬಂದಂತೆ ಮಾತನಾಡಿ ಜೀವನಪೂರ್ತಿ ನೋವುಣ್ಣುತ್ತಾರೆ.

66
ಮೌನವಾಗಿರುವುದೇ ಅತಿ ದೊಡ್ಡ ವಿವೇಕ

ಮೌನವಾಗಿರುವುದೇ ಅತಿ ದೊಡ್ಡ ವಿವೇಕ
ಆಚಾರ್ಯ ಚಾಣಕ್ಯರು ಹೇಳುವಂತೆ "ಯಾರು ತನ್ನ ಕ್ರೋಧವನ್ನು ಗೆಲ್ಲುತ್ತಾನೋ, ಆತನನ್ನು ಜಗತ್ತಿನ ಯಾವುದೇ ಶತ್ರುವೂ ಎಂದಿಗೂ ಸೋಲಿಸಲು ಸಾಧ್ಯವಿಲ್ಲ." ಸಿಟ್ಟು ಬಂದಾಗ ಪ್ರತಿಕ್ರಿಯಿಸದೆ ಮೌನವಾಗಿರುವುದೇ ಅತಿ ದೊಡ್ಡ ವಿವೇಕ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories