ಇತ್ತೀಚೆಗೆ ರೆಡಿಟ್ (Reddit) ವೆಬ್‌ಸೈಟ್‌ನಲ್ಲಿ ಒಂದು ಪೋಸ್ಟ್ ಜನಮೆಚ್ಚುಗೆ ಗಳಿಸಿದೆ. "I didn’t like Bangalore all at once. It slowly grew on me." ಎಂಬ ಸಾಲಿನಿಂದ ಆರಂಭವಾಗುವ ಈ ಪೋಸ್ಟ್ ಕನ್ನಡಿಗರು ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಅನೇಕರ ಹೃದಯ ತಟ್ಟಿದೆ. ಬಳಕೆದಾರರು ತಮ್ಮ ಅನುಭವವನ್ನು ತುಂಬಾ ನ್ಯಾಚುರಲ್ಲಾಗಿ ಆದರೆ ಭಾವಪೂರ್ಣವಾಗಿ ಹಂಚಿಕೊಂಡಿದ್ದಾರೆ. ಅವರು ಬೆಂಗಳೂರಿಗೆ ಹೊಸದಾಗಿ ಬಂದು, ಈ ನಗರದ ಜೊತೆ ಸಂಬಂಧ ಹೇಗೆ ನಿಧಾನವಾಗಿ ಬೆಳೆಯಿತು ಎಂಬುದು ಸದ್ಯದ ಟಾಪಿಕ್.
25
ಒಂದೇ ತರಹದ ಜನರ ನಗರವಲ್ಲ
ಬಳಕೆದಾರರನ್ನು ಮೆಚ್ಚಿಸಿದ ಮೊದಲ ಸಂಗತಿಯೆಂದರೆ ಬೆಂಗಳೂರಿನ ಹವಾಮಾನ. ಬೇಸಿಗೆಯಲ್ಲೂ ಬೆಳಗ್ಗೆ ಎದ್ದು ತಣ್ಣನೆಯ ಗಾಳಿ ಮೂಸಿದ ಅನುಭವ ಹೊಸದಾಗಿತ್ತು. ನಂತರ ಅವರು ಗಮನಿಸಿದದ್ದು, ಬೆಂಗಳೂರು ಒಂದೇ ತರಹದ ಜನರ ನಗರವಲ್ಲ. ಇಲ್ಲಿ ಉತ್ತರ ಭಾರತದವರು, ದಕ್ಷಿಣದವರು, ಪೂರ್ವ, ಪಶ್ಚಿಮ ಎಲ್ಲ ರಾಜ್ಯಗಳಿಂದ ಬಂದವರು ಇಲ್ಲಿ ಸೇರಿದ್ದಾರೆ.
35
ಶೇರ್ ಮಾಡಿದ city's contrast life
ಅವರು ಹೇಳಿದಂತೆಯೇ ಈ ನಗರದಲ್ಲಿ ಜೀವನ ವಿಭಿನ್ನ ಶೈಲಿಯಲ್ಲಿ ಸಾಗುತ್ತದೆ. ಒಂದು ದಿನ ಬಸವನಗುಡಿಯ ಹಳೆ ಕಾಫಿ ಹೋಟೆಲ್‌ನಲ್ಲಿ ಫಿಲ್ಟರ್ ಕಾಫಿ ಕುಡಿಯಬಹುದು.ಇನ್ನೊಂದು ದಿನ ಇಂದಿರಾನಗರದ ರೂಫ್ಟಾಪ್ ಬ್ರೂವರಿಯಲ್ಲಿ ಚಿಲ್ ಆಗೋ ಅನುಭವ. ಇಲ್ಲಿನ ವೈವಿಧ್ಯಮಯ ಸಂಸ್ಕೃತಿ ಎಚ್ಚರಗೊಳಿಸುತ್ತದೆ. ಇದಲ್ಲದೆ, ಅವರು ಇಷ್ಟಪಟ್ಟ ಸಣ್ಣ ಅನುಭವಗಳೂ ಇವೆ – ಕಬ್ಬನ್ ಪಾರ್ಕ್‌ನಲ್ಲಿ ನಡಿಗೆ, ಸ್ಟ್ಯಾಂಡ್‌ಅಪ್ ಕಾಮಿಡಿ ಶೋ ವೀಕ್ಷಣೆ, ಅಥವಾ ಕೂರ್ಗ್, ಚಿಕ್ಕಮಗಳೂರು, ನಂದಿ ಬೆಟ್ಟಗಳಿಗೆ ವೀಕೆಂಡ್ ಟ್ರಿಪ್.
45
ಸಮಸ್ಯೆಗಳನ್ನೂ ಮುಚ್ಚಿ ಹಾಕಿಲ್ಲ
ಹಾಗೆ ನೋಡಿದರೆ ಅವರು ನಗರದಲ್ಲಿ ಇರುವ ಸಮಸ್ಯೆಗಳನ್ನೂ ಮುಚ್ಚಿ ಹಾಕಿಲ್ಲ.. ಟ್ರಾಫಿಕ್ ತುಂಬಾ, ಬಾಡಿಗೆ ಹೆಚ್ಚು. ಆದರೂ ಅವರು ಅಂತಿಮವಾಗಿ ಹೇಳುವುದು "If you can adjust a bit, this city gives you peaceful mornings, busy workdays, and fun nights."
55
ಪ್ರೀತಿಯ ನೆನಪುಗಳ ನಗರ
ಈ ರೆಡಿಟ್ ಪೋಸ್ಟ್ ಒರ್ವ ವ್ಯಕ್ತಿಗತ ಅನಿಸಿಕೆ ಮಾತ್ರವಲ್ಲ, ನೂರಾರು ಜನರ ಹೃದಯದ ಧ್ವನಿ ಕೂಡ ಹೌದು. ಬಹುಶಃ ಇದೇ ಬೆಂಗಳೂರಿನ ನಿಜವಾದ ಮ್ಯಾಜಿಕ್. ಕೊನೆಯದಾಗಿ ಹೇಳುವುದಾದರೆ ಬೆಂಗಳೂರು: ಪ್ರೀತಿಯ ನೆನಪುಗಳ ನಗರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.