ಹೀಗೆ ಮಾಡಿ
ಹಬೆಯಲ್ಲಿ ಬೇಯಿಸುವುದು (Steaming): ಇದು ಅತ್ಯುತ್ತಮ ವಿಧಾನ. ಇದರಲ್ಲಿ ಪೋಷಕಾಂಶಗಳು ಹೆಚ್ಚಾಗಿ ನಷ್ಟವಾಗುವುದಿಲ್ಲ ಮತ್ತು ತರಕಾರಿಯ ರುಚಿ ಉಳಿಯುತ್ತದೆ.
ಫ್ರೈ ಮಾಡೋದು(Sauté & Stir-fry): ಕಡಿಮೆ ಎಣ್ಣೆ ಬಳಸಿ ಫ್ರೈ ಮಾಡುವುದು ಒಳ್ಳೆಯದು, ಆದರೆ ಎಣ್ಣೆಯ ಪ್ರಮಾಣದ ಮೇಲೆ ಗಮನವಿರಲಿ.
ಗ್ರಿಲ್ಲಿಂಗ್ (Grilling): ತರಕಾರಿಗಳ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಇದು ಉತ್ತಮ ಆಯ್ಕೆ.
ಬೇಕಿಂಗ್ ಮತ್ತು ರೋಸ್ಟಿಂಗ್ (Baking & Roasting): ಒಣ ಶಾಖದಲ್ಲಿ ಬೇಯಿಸುವುದರಿಂದ ತರಕಾರಿಗಳಲ್ಲಿನ ಸಿಹಿ ಹೆಚ್ಚುತ್ತದೆ ಮತ್ತು ರುಚಿಯಾಗಿರುತ್ತದೆ.
ಪ್ರೆಶರ್ ಕುಕಿಂಗ್ (Pressure Cooking): ಇದು ವೇಗವಾಗಿ ಬೇಯುವುದರಿಂದ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ. ಆದರೆ ಸ್ಲೋ ಕುಕಿಂಗ್ (Slow Cooking) ನಲ್ಲಿ ನೀರಿನಲ್ಲಿ ಕರಗುವ ವಿಟಮಿನ್‌ಗಳು ಕಡಿಮೆಯಾಗಬಹುದು.