41 ಕೋಟಿ ಉಳಿತಾಯ ಮಾಡಿ 35 ವರ್ಷಕ್ಕೇ ನಿವೃತ್ತಿಯಾಗ್ತೀನಿ ಎಂದಿದ್ದ ಗೂಗಲ್‌ ಟೆಕ್ಕಿಗೆ ದೊಡ್ಡ ಶಾಕ್!

First Published | Sep 18, 2023, 5:29 PM IST

ಗೂಗಲ್‌ನ 22 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ 41 ಕೋಟಿ ಹಣ ಉಳಿತಾಯ ಮಾಡಿ 35 ಕ್ಕೇ ನಿವೃತ್ತಿಯಾಗ್ತೀನಿ ಎಂದಿದ್ದ. ಆದರೆ, ಈ ಯುವ ಟೆಕ್ಕಿ ತನಗಾದ ಆಘಾತದ ಬಗ್ಗೆಯೂ ಇತ್ತೀಚೆಗೆ ಬಹಿರಂಗಪಡಿಸಿದ್ದಾನೆ. 

ಗೂಗಲ್‌ನ 22 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ Ethan Nguonly 35 ವರ್ಷಕ್ಕೇ ನಿವೃತ್ತಿಯಾಗ್ತೇನೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ. ಇತ್ತೀಚೆಗೆ ಕೆಲಸದ ಒತ್ತಡ, ಕುಟುಂಬಕ್ಕೆ ಹೆಚ್ಚು ಸಮಯ ಕೊಡದಿರುವಂತಹ ಪರಿಸ್ಥಿತಿ ಹೆಚ್ಚಾಗ್ತಿರೋ ಹಿನ್ನೆಲೆ ಅವರ ಈ ಹೇಳಿಕೆ ಹೆಚ್ಚು ವೈರಲ್‌ ಆಗಿತ್ತು. ಅಲ್ಲದೆ, 22 ರ ಹರೆಯ 41 ಕೋಟಿ ಉಳಿತಾಯ ಮಾಡ್ತೀನಿ ಎಂದಿದ್ದು ಸಹ ಹೆಚ್ಚು ಸುದ್ದಿಯಾಗಿತ್ತು. ಆದರೆ, 22ರ ಹರೆಯದ ಈ ಗೂಗಲ್‌ ಟೆಕ್ಕಿಗೆ ಈಗ ಶಾಕ್‌ ಎದುರಾಗಿದೆ. 
 

22 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ Ethan Nguonly ಇತ್ತೀಚೆಗೆ ತನ್ನ ದೊಡ್ಡ ಆರ್ಥಿಕ ತಪ್ಪಿನ ಬಗ್ಗೆ ಬಹಿರಂಗಪಡಿಸಿದ್ದಾನೆ. ಕ್ರಿಪ್ಟೋ ಮಾರ್ಜಿನ್‌ನಲ್ಲಿ ಹೂಡಿಕೆ ಮಾಡುವ ಮೂಲಕ ತಾನು ಸುಮಾರು 67 ಲಕ್ಷ ರೂ. ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ ಅಂದರೆ ಎರವಲು ಪಡೆದ ಹಣವನ್ನು ಕ್ರಿಪ್ಟೋಕರೆನ್ಸಿ ಖರೀದಿಸಲು ಬಳಸುವುದು ಎಂದು ಸಿಎನ್‌ಬಿಸಿ ಮೇಕ್ ಇಟ್ ವರದಿ ಮಾಡಿದೆ.
 

Tap to resize

ಅಮೆರಿಕದ ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸಿಸುವ ಯುವ ಟೆಕ್ಕಿಯು ಹದಿಹರೆಯದವನಾಗುವ ಮೊದಲು ತನ್ನ ಪೋಷಕರ ಸಹಾಯದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದನು. ಅವನ ಹೂಡಿಕೆ ಬಂಡವಾಳವು 1 ಕೋಟಿ ರೂ. ಗಿಂತ ಹೆಚ್ಚಿನ ನಿವೃತ್ತಿ ಮತ್ತು ಬ್ರೋಕರೇಜ್ ಖಾತೆಗಳು ಹಾಗೂ ಎರಡು ಮನೆಗಳನ್ನು ಒಳಗೊಂಡಿದೆ.

ಆದರೆ, ನವೆಂಬರ್ 2021 ಮತ್ತು ಜೂನ್ 2022 ರ ನಡುವೆ ಕ್ರಿಪ್ಟೋದಲ್ಲಿ 67 ಲಕ್ಷ ರೂ. ಕಳೆದುಕೊಂಡಿದ್ದೇನೆ ಎಂದು ಟೆಕ್ಕಿ ಹಂಚಿಕೊಂಡಿದ್ದಾರೆ. ಈ ನಷ್ಟವು ಅವನ ಮೂಲ ಹೂಡಿಕೆಯ 24 ಲಕ್ಷ ರೂ. ಮತ್ತು ಅಂದಾಜು ₹ 41 ಲಕ್ಷ ಅವಾಸ್ತವಿಕ ಲಾಭಗಳನ್ನು ಒಳಗೊಂಡಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಈ ನಷ್ಟಕ್ಕೂ ಮೊದಲೇ ಸುಮಾರು ₹ 33 ಲಕ್ಷವನ್ನು ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಲ್ಲಿ ಹೂಡಿಕೆ ಮಾಡಿದ್ದೆ. ಬಳಿಕ, ಶಿಬಾ ಇನು ಮತ್ತು ಡಾಗ್‌ಕಾಯಿನ್‌ನಂತಹ ಆಲ್ಟ್‌ಕಾಯಿನ್‌ಗಳಲ್ಲಿ ಬಳಸಿದ ಕೆಲವು ನೂರು ಡಾಲರ್‌ಗಳನ್ನು ಸಹ ಹೊಂದಿದ್ದೆ. ಆದರೆ ಬಿಟ್‌ಕಾಯಿನ್‌ನ ಬೆಲೆ ಕುಸಿಯುತ್ತಿದ್ದಂತೆ, ಸುಮಾರು ₹ 12 ಲಕ್ಷ ಮೌಲ್ಯದ ಹೆಚ್ಚಿನದನ್ನು ಖರೀದಿಸಲು ನಿರ್ಧರಿಸಿದೆ. ಅದೂ ಮಾರ್ಜಿನ್‌ನಲ್ಲಿ. 

 ಬಿಟ್‌ಕಾಯಿನ್‌ನ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದರಿಂದ ತನಗೆ 42 ಲಕ್ಷ ರೂ. ಲಾಭ ಆಗಿತ್ತು ಎಂದೂ 22 ವರ್ಷ ವಯಸ್ಸಿನ ಟೆಕ್ಕಿ ಮಾಧ್ಯಮಕ್ಕೆ ತಿಳಿಸಿದ್ದಾನೆ. ಆದರೆ 2021 ರ ಕೊನೆಯಲ್ಲಿ ಕ್ರಿಪ್ಟೋ ಮಾರುಕಟ್ಟೆಯು ಒಂದು ತಿರುವು ಪಡೆದುಕೊಂಡಿತು ಮತ್ತು 2022 ರ ಬೇಸಿಗೆಯ ಹೊತ್ತಿಗೆ ಬಿಟ್‌ಕಾಯಿನ್‌ನ ಬೆಲೆ ಶೇಕಡಾ 70 ಕ್ಕಿಂತ ಹೆಚ್ಚು ಕುಸಿಯಿತು. "ನಾನು ಅಗತ್ಯವಾಗಿ ಹೊಂದಿರದ ಸ್ವಲ್ಪ ಹಣದಿಂದ ಹೂಡಿಕೆ ಮಾಡುತ್ತಿದ್ದೆ. "ಕ್ರಿಪ್ಟೋ ಮಾರುಕಟ್ಟೆಯು ವ್ಯತಿರಿಕ್ತವಾದ ನಂತರ, ನನ್ನ ನಷ್ಟ ಹೆಚ್ಚಾಯಿತು’’ ಎಂದು 22ರ ಹರೆಯದ ಗೂಗಲ್‌ ಟೆಕ್ಕಿ ತಿಳಿಸಿದ್ದಾನೆ. 

ಆದರೂ, ನಾನು ಇನ್ನೂ ಕ್ರಿಪ್ಟೋಕರೆನ್ಸಿಗಳನ್ನು ನಂಬುತ್ತೇನೆ. ಅದರೆ, ತನ್ನ ₹ 67 ಲಕ್ಷದ ತಪ್ಪಿನಿಂದ ಕಲಿತ ದೊಡ್ಡ ಪಾಠವೆಂದರೆ "ನಿಮ್ಮಲ್ಲಿರುವ ಹಣವನ್ನು ಮಾತ್ರ ಹೂಡಿಕೆ ಮಾಡಿ ಮತ್ತು ತುಂಬಾ ಊಹಾತ್ಮಕ ಹೂಡಿಕೆ ಮಾಡಬೇಡಿ" ಎಂದು 22ರ ಹರೆಯದ ಗೂಗಲ್‌ ಟೆಕ್ಕಿ ತಿಳಿಸಿದ್ದಾನೆ. 

Latest Videos

click me!