ಕಲೆಯಿಂದ ಹಿಡಿದು ಸಿಂಕ್ ದುರ್ವಾಸನೆ ತೊಲಗಿಸುವ ತನಕ.. ಉಪ್ಪನ್ನ ಹೀಗೆಲ್ಲಾ ಬಳಸಬಹುದು

Published : Jul 29, 2026, 03:54 PM IST

Salt cleaning hacks: ಉಪ್ಪನ್ನು ಕೇವಲ ಅಡುಗೆ ರುಚಿಗಷ್ಟೇ ಬಳಸುತ್ತಿದ್ದೀರಾ? ಆದರೆ ರಾಸಾಯನಿಕಗಳಿಲ್ಲದೆ ಮನೆಯನ್ನು ಸುಲಭವಾಗಿ ಮತ್ತು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು ಉಪ್ಪು ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬ ಬಗ್ಗೆ ಗೊತ್ತಾ?.

PREV
16
ಉಪ್ಪಿನ ಉಪಯೋಗಗಳು

ಉಪ್ಪಿನ ಉಪಯೋಗಗಳು
ಅಡುಗೆಗೆ ರುಚಿ ನೀಡುವ ಉಪ್ಪು ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ರಾಸಾಯನಿಕ ಮುಕ್ತವಾಗಿ ಮನೆಯನ್ನು ಸ್ವಚ್ಛವಾಗಿಡಲು ಒಂದು ಅದ್ಭುತ 'ಕ್ಲೀನಿಂಗ್ ಏಜೆಂಟ್' ಆಗಿ ಕೆಲಸ ಮಾಡುತ್ತದೆ. ಅಂದಹಾಗೆ ಉಪ್ಪಿನ ಈ ಸ್ಮಾರ್ಟ್ ಉಪಯೋಗಗಳ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?.

26
ಇರುವೆಗಳ ಕಾಟಕ್ಕೆ ರಾಮಬಾಣ

ಇರುವೆಗಳ ಕಾಟಕ್ಕೆ ರಾಮಬಾಣ
ಮನೆಯಲ್ಲಿ ಅಥವಾ ಅಡುಗೆ ಮನೆಯ ಮೂಲೆಗಳಲ್ಲಿ ಇರುವೆಗಳ ಕಾಟ ಹೆಚ್ಚಿದ್ದರೆ ರಾಸಾಯನಿಕ ಸ್ಪ್ರೇ ಬಳಸುವ ಅಗತ್ಯವಿಲ್ಲ. ಇರುವೆಗಳು ಓಡಾಡುವ ಜಾಗದಲ್ಲಿ ಸ್ವಲ್ಪ ಉಪ್ಪನ್ನು ಚಿಮುಕಿಸಿ ಅಥವಾ ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ಒರೆಸುವುದರಿಂದ ಇರುವೆಗಳು ತಕ್ಷಣ ಓಡಿಹೋಗುತ್ತವೆ.

36
ಟೀ, ಕಾಫಿ ಕಲೆಗಳ ನಿವಾರಣೆ

ಟೀ, ಕಾಫಿ ಕಲೆಗಳ ನಿವಾರಣೆ
ಕಪ್‌ ಅಥವಾ ಗ್ಲಾಸ್‌ಗಳ ಮೇಲಿರುವ ಕಾಫಿ-ಟೀ ಕಲೆಗಳು ಸೋಪಿನಿಂದ ತೊಳೆದರೂ ಸುಲಭವಾಗಿ ಹೋಗುವುದಿಲ್ಲ. ಅಂತಹ ಸಮಯದಲ್ಲಿ ಸ್ವಲ್ಪ ಉಪ್ಪು ಹಾಕಿ ಸ್ಪಂಜ್‌ನಿಂದ ಉಜ್ಜಿದರೆ, ಆ ಮೊಂಡು ಕಲೆಗಳು ಮಾಯವಾಗಿ ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ.

46
ಪಾತ್ರೆಗಳ ಜಿಡ್ಡು ಮತ್ತು ಸೀದ ಕಲೆಗಳಿಗೆ ಮುಕ್ತಿ

ಪಾತ್ರೆಗಳ ಜಿಡ್ಡು ಮತ್ತು ಸೀದ ಕಲೆಗಳಿಗೆ ಮುಕ್ತಿ
ಅಡುಗೆ ಮಾಡುವಾಗ ಪಾತ್ರೆ ಸೀದು ಹೋದರೆ ಅಥವಾ ಅತಿಯಾದ ಜಿಡ್ಡು ಅಂಟಿಕೊಂಡಿದ್ದರೆ, ಆ ಪಾತ್ರೆಗೆ ಉಪ್ಪು ಮತ್ತು ನೀರು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ನಂತರ ತೊಳೆದರೆ ಜಿಡ್ಡು ಸುಲಭವಾಗಿ ಬಿಡುತ್ತದೆ.

56
ಹಣ್ಣು ಮತ್ತು ತರಕಾರಿಗಳ ಶುದ್ಧತೆ

ಹಣ್ಣು ಮತ್ತು ತರಕಾರಿಗಳ ಶುದ್ಧತೆ
ಮಾರುಕಟ್ಟೆಯಿಂದ ತಂದ ತರಕಾರಿ ಮತ್ತು ಹಣ್ಣುಗಳ ಮೇಲಿರುವ ಕ್ರಿಮಿನಾಶಕ ಹಾಗೂ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಉಪ್ಪು ನೀರು ಅತ್ಯುತ್ತಮ. ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಒಂದು ಹಿಡಿ ಉಪ್ಪು ಹಾಕಿ, 10-15 ನಿಮಿಷ ಹಣ್ಣು-ತರಕಾರಿಗಳನ್ನು ನೆನೆಸಿಡಿ. ನಂತರ ಶುದ್ಧ ನೀರಿನಿಂದ ತೊಳೆದರೆ ಅವುಗಳು ಸಂಪೂರ್ಣವಾಗಿ ಸ್ವಚ್ಛವಾಗುತ್ತವೆ.

66
ಸಿಂಕ್ ದುರ್ವಾಸನೆ ತಡೆಯಲು

ಸಿಂಕ್ ದುರ್ವಾಸನೆ ತಡೆಯಲು
ಸಿಂಕ್ ಪೈಪ್‌ಗಳಲ್ಲಿ ಜಿಡ್ಡು ತುಂಬಿಕೊಂಡು ವಾಸನೆ ಬರುತ್ತಿದ್ದರೆ, ಬಿಸಿ ನೀರಿನಲ್ಲಿ ಉಪ್ಪು ಬೆರೆಸಿ ಪೈಪ್‌ಗೆ ಸುರಿಯಿರಿ. ಇದು ಜಿಡ್ಡನ್ನು ಕರಗಿಸಿ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories