ರಾತ್ರಿ ಮಿಕ್ಕ ಅನ್ನದಲ್ಲಿ ಚಿತ್ರಾನ್ನ ಮಾಡಿ ಬೇಜಾರಾಗಿದ್ರೆ ರುಚಿಯಾದ ಈ ರೆಸಿಪಿ ಟ್ರೈ ಮಾಡಿ

Published : May 29, 2026, 02:37 PM IST

rice kurkure tikki : ರಾತ್ರಿ ಉಳಿದ ಅನ್ನವನ್ನು ಏನು ಮಾಡೋದು? ಮಹಿಳೆಯರನ್ನು ಕಾಡುವ ಪ್ರಶ್ನೆ ಇದು. ಬರೀ ಚಿತ್ರಾನ್ನ ಮಾತ್ರವಲ್ಲ ನೀವು ಉಳಿದ ಅನ್ನದಲ್ಲಿ ಸುಲಭವಾಗಿ ಕುರ್ಕುರೇ ಟಿಕ್ಕಿ ತಯಾರಿಸ್ಬಹುದು. 

PREV
14
ಉಳಿದ ಅನ್ನದಲ್ಲಿ ಕುರ್ಕುರೆ ಟಿಕ್ಕಿ

ಕುರ್ಕುರೆ ಟಿಕ್ಕಿ ಮಾಡಲು ಬೇಕಾಗುವ ಪದಾರ್ಥ, ಒಂದು ಕಪ್ ಅನ್ನ. ಒಂದು ಕಪ್ ಬೇಯಿಸಿದ ಆಲೂಗಡ್ಡೆ, ಒಂದು ಕಪ್ ಬ್ರೆಡ್ ಪುಡಿ. ಶುಂಠಿ – ಹಸಿಮೆಣಸಿನ ಪೇಸ್ಟ್ ಒಂದುವರೆ ಚಮಚ. ಕಾಲು ಚಮಚ ಅರಿಶಿನದ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ, ಒಂದು ಚಮಚ ಚಾಟ್ ಮಸಾಲೆ, ಒಂದು ಚಮಚ ಕಶ್ಮಿರಿ ಕೆಂಪು ಮೆಣಸಿನ ಪುಡಿ, ಒಂದು ಚಮಚ ಉಪ್ಪು. ಒಂದೆರಡು ಚಮಚ ಕತ್ತರಿಸಿ ಕೊತ್ತಂಬರಿ ಸೊಪ್ಪು.

24
ಕುರ್ಕುರೆ ಟಿಕ್ಕಿ ಮಾಡುವ ವಿಧಾನ

ಕುರ್ಕುರೆ ಟಿಕ್ಕಿ ಮಾಡಲು ನೀವು ಮೊದಲು ಒಂದು ಬೌಲ್ ಗೆ ಅನ್ನವನ್ನು ಹಾಕಿ. ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತ್ರ ಅದಕ್ಕೆ ಆಲೂಗಡ್ಡೆ, ಬ್ರೆಡ್ ಪುಡಿ, ಶುಂಠಿ – ಹಸಿಮೆಣಸಿನ ಪೇಸ್ಟ್, ಮೊಸರು, ಅರಿಶಿನ, ಕೊತ್ತಂಬರಿ ಪುಡಿ, ಚಾಟ್ ಮಸಾಲೆ, ಕಾಶ್ಮಿರಿ ಕೆಂಪು ಮೆಣಸಿನ ಪುಡಿ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಮಿಶ್ರಣವನ್ನು ಸಣ್ಣ ಉಂಡೆಯಾಗಿ ಮಾಡಿ ಅದಕ್ಕೆ ಟಿಕ್ಕಿ ಆಕಾರ ನೀಡಿ. ಮಿಶ್ರಣವನ್ನು ತಯಾರಿಸುವಾಗ ಕೈಗೆ ಸ್ವಲ್ಪ ಆಯಿಲ್ ಹಚ್ಚಿಕೊಂಡರೆ ಮಿಶ್ರಣ ನಿಮ್ಮ ಕೈಗೆ ಹಿಡಿಯುವುದಿಲ್ಲ.

34
ಟಿಕ್ಕಿ ರೆಡಿ

ಇನ್ನೊಂದು ಬಾಣೆಲೆಗೆ ಮೂರ್ನಾಲ್ಕು ಚಮಚ ಎಣ್ಣೆಯನ್ನು ಹಾಕಿ. ಗ್ಯಾಸ್ ಆನ್ ಮಾಡಿ. ಇದನ್ನು ಡೀಪ್ ಫ್ರೈ ಮಾಡ್ಬೇಡಿ. ಬಾಣೆಲೆಗೆ ಮೂರ್ನಾಲ್ಕು ಟಿಕ್ಕಿಯನ್ನು ಹಾಕಿ ಚೆನ್ನಾಗಿ ಬೇಯಿಸಿ. ನೀವು ಬಯಸಿದ್ರೆ ಡೀಪ್ ಫ್ರೈ ಕೂಡ ಮಾಡಬಹುದು. ಎಣ್ಣೆಯಲ್ಲಿ ಟಿಕ್ಕಿ ಬ್ರೌನ್ ಕಲರ್ ಆಗುವವರೆಗೆ ಬಾಣೆಲೆಯಲ್ಲಿರಲಿ. ಮಧ್ಯಮ ಉರಿಯಲ್ಲಿ ಇದನ್ನು ಫ್ರೈ ಮಾಡಿದ್ರೆ ಟಿಕ್ಕಿ ಸರಿಯಾಗಿ ಬೇಯುವುದಲ್ಲದೆ ಕ್ರಿಸ್ಪಿ ಆಗುತ್ತದೆ. ಹೊರಗೆ ಕ್ರಿಸ್ಪಿ ಹಾಗೂ ಒಳಗೆ ಸಾಫ್ಟ್ ಆಗುವಂತೆ ಇದನ್ನು ಬೇಯಿಸಿ.

44
ಚಾಟ್ ತಯಾರಿಸೋದು ಹೇಗೆ?

ನೀವು ಕುರ್ಕುರೆ ಟಿಕ್ಕಿಯನ್ನು ಹಾಗೇ ಸರ್ವ್ ಮಾಡಬಹುದು. ಇನ್ನಷ್ಟು ರುಚಿಬೇಕು ಅನ್ನೋರು ಚಾಟ್ ತಯಾರಿಸಿ ಸರ್ವ್ ಮಾಡಿ. ಚಾಟ್ ತಯಾರಿಸಲು ಒಂದು ಚಮಚ ಕಪ್ಪು ಉಪ್ಪು, ಒಂದು ಚಮಚ ಜೀರಿಗೆ ಪುಡಿ, ಅರ್ಥ ಚಮಚ ಪುದೀನಾ ಪುಡಿ, ಅರ್ಥ ಚಮಚ ಕೊತ್ತಂಬರಿ ಪುಡಿ, ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಚಮಚ ಚಿಲ್ಲಿ ಫ್ಲೆಕ್ಸ್ ಸೇರಿಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಒಂದು ಪ್ಲೇಟ್ ಗೆ ಟಿಕ್ಕಿ ಹಾಕಿ, ಅದರ ಮೇಲೆ ಮೊಸರನ್ನು ಹಾಕಿ. ಮೊಸರಿಗೆ ನೀವು ಒಂದು ಚಮಚ ಸಕ್ಕರೆ ಹಾಗೂ ಒಂದು ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಅದರ ರುಚಿ ಡಬಲ್ ಆಗುತ್ತೆ. ಮೊಸರು ಹಾಕಿದ ಮೇಲೆ ಟಿಕ್ಕಿಗೆ ತಯಾರಿಸಿ ಚಾಟ್ ಮಸಾಲೆ ಹಾಕಿ. ನಿಮ್ಮ ಬಳಿ ಹಸಿರು ಚಟ್ನಿ ಹಾಗೂ ಸ್ವೀಟ್ ಚಟ್ನಿ ಇದ್ರೆ ಅದನ್ನು ಹಾಕಿ ಸರ್ವ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories