Pickle Storing Method: ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಯನ್ನು ಹೆಚ್ಚು ದಿನಗಳವರೆಗೆ ಸ್ಟೋರ್ ಮಾಡಲು ಕೆಲವು ಸಲಹೆಗಳನ್ನು ಈ ಲೇಖನ ಒಳಗೊಂಡಿದೆ. ಉಪ್ಪಿನಕಾಯಿ ಹಾಳಾಗದಂತೆ ತಡೆಯಲು ಸರಿಯಾದ ಡಬ್ಬಗಳು, ಶುಷ್ಕ ಜಾಗದಲ್ಲಿ ಸಂಗ್ರಹಿಸುವುದು ಮತ್ತು ಇತರ ಸಲಹೆಗಳನ್ನು ತಿಳಿಸಲಾಗಿದೆ.
ಅಡುಗೆ ರುಚಿ ಇಲ್ಲದಿದ್ರೂ, ಪಕ್ಕದಲ್ಲೊಂದು ಉಪ್ಪಿನಕಾಯಿ ಅಂದ್ರೆ ಊಟ ಮಾಡಿ ಮುಗಿಸಬಹುದು. ಕೆಲವರಿಗೆ ಉಪ್ಪಿನಕಾಯಿ ಇಲ್ಲದೇ ಊಟವೇ ಸೇರಲ್ಲ. ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆಯ ಉಪ್ಪಿನಕಾಯಿಗಳು ಸಿಗುತ್ತವೆ. ಆದ್ರೆ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ನೀಡುವ ರುಚಿಯನ್ನು ಅಂಗಡಿಯಲ್ಲಿ ಸಿಗುವ ಉಪ್ಪಿನಕಾಯಿ ನೀಡಲ್ಲ.
27
ಉಪ್ಪಿನಕಾಯಿ ಸಂಗ್ರಹಿಸುವ ವಿಧಾನ
ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ತುಂಬಾ ದಿನ ಸ್ಟೋರ್ ಮಾಡಲು ಆಗಲ್ಲ ಬಹುತೇಕರ ಬೇಸರಕ್ಕೆ ಕಾರಣ. ಎಷ್ಟೇ ಮುಂಜಾಗ್ರತ ಕ್ರಮ ತೆಗೆದುಕೊಂಡರೂ ಒಂದೆರೆಡು ತಿಂಗಳಿಗೆಲ್ಲಾ ಉಪ್ಪಿನಕಾಯಿ ಹಾಳಾಗುತ್ತದೆ. ತಯಾರಿಸಿರುವ ಉಪ್ಪಿನಕಾಯಿ ಸಂಗ್ರಹ ಮಾಡೋದು ಸಹ ಒಂದು ಕಲೆಯಾಗಿದೆ. ಕೆಲ ವಿಧಾನಗಳನ್ನು ಬಳಸಿ ಉಪ್ಪಿನಕಾಯಿ ಸ್ಟೋರ್ ಮಾಡಿದ್ರೆ ವರ್ಷವಾದ್ರೂ ಹಾಳಾಗಲ್ಲ. ಸಾಂಪ್ರದಾಯಿಕ ಶೈಲಿಯಲ್ಲಿ ಉಪ್ಪಿನಕಾಯಿ ಸ್ಟೋರ್ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.
37
ಸಲಹೆ 1: ಬಾಯಿ ಅಗಲವಿರೋ ಡಬ್ಬ
ಉಪ್ಪಿನಕಾಯಿ ಸಂಗ್ರಹಿಸಲು ಯಾವಾಗಲೂ ಬಾಯಿ ಅಗಲ ಇರೋ ಡಬ್ಬಗಳನ್ನು ಉಪಯೋಗಿಸಬೇಕು. ದೀರ್ಘಕಾಲ ಸ್ಟೋರ್ ಮಾಡಬೇಕಿದ್ರೆ ಡಬ್ಬಿ ತುಂಬಾ ಉಪ್ಪಿನಕಾಯಿ ತುಂಬಿಸಿ. ಇದರಿಂದ ಡಬ್ಬಿಯೊಳಗೆ ಗಾಳಿಯಾಡಲ್ಲ. ಡಬ್ಬಿಯೊಳಗೆ ಗಾಳಿಯಾದ್ರೆ ಉಪ್ಪಿನಕಾಯಿ ಬೇಗ ಕೆಡುತ್ತದೆ. ಉಪ್ಪಿನಕಾಯಿ ತಯಾರಿಸುವಾಗಲೂ ಯಾವುದೇ ಕಾರಣಕ್ಕೂ ನೀರು ಸೇರಿಸಬಾರದು. ಕೊಂಚ ನೀರು ಸೇರಿದ್ರೂ ಒಂದೆರಡು ತಿಂಗಳಿಗೆ ಉಪ್ಪಿನಕಾಯಿ ಹಾಳಾಗಲು ಆರಂಭವಾಗುತ್ತದೆ.
ಉಪ್ಪಿನಕಾಯಿ ಡಬ್ಬದ ಮುಚ್ಚಳ ಲೋಹದ್ದಾಗಿರಬಾರದು. ಲೋಹದ ಮುಚ್ಚಳವಿದ್ರೆ ಅದು ಉಪ್ಪಿನಕಾಯಿಯಲ್ಲಿನ ಹುಳಿ ಮತ್ತು ಉಪ್ಪಿನಂಶದೊಂದಿಗೆ ಬೆರೆಯುತ್ತದೆ. ಡಬ್ಬ ಮುಚ್ಚಿದ್ದರೂ ಉಪ್ಪಿನಕಾಯಿ ಹಾಳಾಗುತ್ತದೆ. ಉಪ್ಪಿನಕಾಯಿ ತೆಗೆದುಕೊಳ್ಳುವಾಗಲೂ ಲೋಹದ ಚಮಚ ಬಳಸಬೇಡಿ. ಪ್ಲಾಸ್ಟಿಕ್ ಚಮಚ ಬಳಸಬಹುದು. ಉಪ್ಪಿನಕಾಯಿ ತೆಗೆದುಕೊಳ್ಳುವ ಚಮಚ ನೀರಿನಿಂದ ಕೂಡಿರಬಾರದು.
57
ಸಲಹೆ 3: ಡಬ್ಬಿ ಶುಷ್ಕವಾಗಿರಲಿ
ಉಪ್ಪಿನಕಾಯಿ ಸಂಗ್ರಹಿಸುವ ಮುನ್ನ ಡಬ್ಬಿಯನ್ನು ಮೊದಲು ಚೆನ್ನಾಗಿ ತೊಳೆದು ಒಣಗಿಸಿ, ಶುದ್ಧ ಮಾಡಿಕೊಳ್ಳಬೇಕು. ಕೊನೆಗೆ ಬಿಸಿನೀರಿನಿಂದಲೂ ಒಮ್ಮೆ ಡಬ್ಬವನ್ನು ತೊಳೆಯಬೇಕು. ನಂತರ ನೀರಿನಂಶ ಸಂಪೂರ್ಣವಾಗಿ ಹೋಗಿದ್ರೆ ಎಂಬುವುದು ಖಾತ್ರಿ ಮಾಡಿಕೊಂಡ ನಂತರವೇ ಉಪ್ಪಿನಕಾಯಿ ತುಂಬಿಸಬೇಕು. ನಿಮಗೆ ಡೌಟ್ ಇದ್ರೆ ಒವೆನ್‌ನಲ್ಲಿರಿಸಿ ಡಬ್ಬಿಯನ್ನು ಒಣಗಿಸಿಕೊಳ್ಳಿ. ಡಬ್ಬಿಯ ಒಳಭಾಗವನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಒಣಗಿಸಿ.
67
ಸಲಹೆ 4: ಶುಷ್ಕ ಜಾಗದಲ್ಲಿಡಿ
ಉಪ್ಪಿನಕಾಯಿ ತುಂಬಿರೋ ಡಬ್ಬಿಯನ್ನು ತೇವ ಇರುವ ಜಾಗದಲ್ಲಿ ಇರಿಸಬೇಡಿ. ಒಣಗಿದ ಅಥವಾ ಬಿಸಿಲು ಬೀಳುವ ಜಾಗದಲ್ಲಿ ಉಪ್ಪಿನಕಾಯಿ ಡಬ್ಬಿಯನ್ನು ಇರಿಸಬೇಕು. ಡಬ್ಬ ಇರಿಸುವ ಜಾಗ ಯಾವಾಗಲೂ ಶುಷ್ಕವಾಗಿರಬೇಕು. ಈ ಒಂದು ಸಲಹೆ ಉಪ್ಪಿನಕಾಯಿ ಹೆಚ್ಚು ದಿನ ಕೆಡದಿರೋಕೆ ಸಹಾಯ ಮಾಡುತ್ತದೆ.
77
ಸಲಹೆ 5: ಚಿಕ್ಕ ಚಿಕ್ಕ ಡಬ್ಬಿಗಳಲ್ಲಿ ಸಂಗ್ರಹ
ಒಂದೇ ಸಮಯಕ್ಕೆ ಹೆಚ್ಚು ಉಪ್ಪಿನಕಾಯಿ ತಯಾರಿಸಿದ್ರೆ ಎಲ್ಲವನ್ನೂ ಒಂದೇ ಡಬ್ಬದಲ್ಲಿ ತುಂಬಿಸಬೇಡಿ. ಕೆಲವು ದಿನಗಳಿಗೆ ಬೇಕಾಗುವಷ್ಟು ಉಪ್ಪಿನಕಾಯಿಯನ್ನು ಬೇರೆ ಚಿಕ್ಕ ಡಬ್ಬಿಯಲ್ಲಿ ತುಂಬಿಸಿ. ದೊಡ್ಡ ಡಬ್ಬಿಯಿಂದಲೇ ಉಪ್ಪಿನಕಾಯಿ ತೆಗೆದರೆ ಅದು ಬೇಗ ಕೆಡಬಹುದು. ಡಬ್ಬಿಯ ಮುಚ್ಚಳ ಸಡಿಲವಾಗಿದ್ರೆ ಬಟ್ಟೆ ಕಟ್ಟಿ ಮುಚ್ಚಳ ಮುಚ್ಚಿದ್ರೆ ಗಾಳಿಯಾಡಲ್ಲ.