ಅಡುಗೆ ಮನೆಯಲ್ಲಿ ಸಕ್ಕರೆ ಡಬ್ಬದ ಮುಚ್ಚಲು ಸ್ವಲ್ಪ ಸಡಿಲವಾದ್ರೂ ಇರುವೆ ಮುತ್ತೋದು ಗ್ಯಾರಂಟಿ. ಬಿಸಿ ಹೆಚ್ಚಾದಂತೆ ಇಲ್ಲ ಆರ್ದ್ರತೆ ಹೆಚ್ಚಾದಂತೆ ಇರುವೆಗಳು ದಾಳಿ ನಡೆಸುತ್ವೆ. ಸಕ್ಕರೆ ಡಬ್ಬಕ್ಕೆ ಇರುವ ಬಂದ್ರೆ ಕಥೆ ಮುಗಿದಂತೆ. ಸಕ್ಕರೆ ಡಬ್ಬದ ಬಳಿ ಇರುವೆ ಬರಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಅಡುಗೆ ಮನೆಯಲ್ಲಿ ಎಲ್ಲೇ ಸಿಹಿ ಇದ್ರೂ ಇರುವೆಗಳು ದಾಳಿ ನಡೆಸುತ್ವೆ. ಸಕ್ಕರೆ ಡಬ್ಬ ಅವರ ಫೆವರೆಟ್. ಪದೇ ಪದೇ ಸಕ್ಕರೆ ಡಬ್ಬವನ್ನು ಕ್ಲೀನ್ ಮಾಡಿದ್ರೂ ಇರುವೆ ಓಡಿಸೋದು ಕಷ್ಟ. ನಿಮ್ಮ ಮನೆಯಲ್ಲೂ ಇರುವೆ ಕಾಟ ಹೆಚ್ಚಾಗಿದ್ರೆ ಸರಳ ಮನೆ ಮದ್ದನ್ನು ಫಾಲೋ ಮಾಡಿ. ಇರುವೆ ಸಕ್ಕರೆ ಡಬ್ಬದ ಕಡೆ ತಿರುಗಿಯೂ ನೋಡೋದಿಲ್ಲ.
26
ಲವಂಗ
ಸಕ್ಕರೆ ಡಬ್ಬಕ್ಕೆ ಇರುವೆ ಬರಬಾರದು ಅಂದ್ರೆ ನೀವು ಲವಂಗ ಬಳಸಬಹುದು. ಲವಂಗವನ್ನು ಸಕ್ಕರೆ ಡಬ್ಬದಲ್ಲಿಟ್ರೆ ಮುಗೀತು. ಇರುವೆ ದಾಳಿಯನ್ನು ತಪ್ಪಿಸಬಹುದು. ನೀವು ಸಕ್ಕರೆ ಡಬ್ಬಕ್ಕೆ ನೇರವಾಗಿ ಐದಾರು ಲವಂಗ ಹಾಕ್ಬಹುದು. ಇದು ಬೇಡ ಎನ್ನುವವರು ಒಂದು ಶುದ್ಧ ಬಟ್ಟೆಯಲ್ಲಿ ನಾಲ್ಕೈದು ಲವಂಗವನ್ನು ಕಟ್ಟಿ. ಅದನ್ನು ಸಕ್ಕರೆ ಡಬ್ಬದಲ್ಲಿ ಹಾಕಿಡಿ.
36
ಲವಂಗ ಹೇಗೆ ಕೆಲ್ಸ ಮಾಡುತ್ತೆ?
ಇರುವೆಗಳು ಬಲವಾದ ವಾಸನೆಯನ್ನು ಇಷ್ಟಪಡೋದಿಲ್ಲ. ಲವಂಗದ ವಾಸನೆಯನ್ನು ಸಹಿಸೋದು ಕಷ್ಟ. ಲವಂಗದಲ್ಲಿ ಯುಜೆನಾಲ್ ಎಂಬ ನೈಸರ್ಗಿಕ ಸಂಯುಕ್ತವಿದೆ. ಲವಂಗದ ವಾಸನೆ ನಮಗೆ ಇಷ್ಟವಾಗುತ್ತೆ. ಆದ್ರೆ ಇರುವೆಯಂತ ಸಣ್ಣ ಕೀಟಗಳು ಇದನ್ನು ಇಷ್ಟಪಡೋದಿಲ್ಲ. ಹಾಗಾಗಿ ಅವು ಈ ವಾಸನೆಯಿಂದ ದೂರ ಹೋಗಲು ಬಯಸುತ್ವೆ.
ಮೊದಲು ಸಕ್ಕರೆ ಡಬ್ಬವನ್ನು ಸ್ವಚ್ಛಗೊಳಿಸಿ. ಅದರಲ್ಲಿ ನೀರಿಲ್ಲದಂತೆ ನೋಡಿಕೊಳ್ಳಿ. ನೀರಿನ ಅಂಶವಿದ್ರೆ ಸಕ್ಕರೆ ಅಲ್ಲಿ ಅಂಟಿಕೊಳ್ಳುತ್ತದೆ. ನಂತ್ರ ಒಂದು ಬಟ್ಟೆಯಲ್ಲಿ ಲವಂಗ ಕಟ್ಟಿ ಅದನ್ನು ಡಬ್ಬದಲ್ಲಿ ಇಡಿ. ಲವಂಗದ ವಾಸನೆ ಹೊರಗೆ ಬರುವಂತಿರಬೇಕು. ಆದ್ರೆ ಸಕ್ಕರೆಗೆ ಲವಂಗ ಮಿಕ್ಸ್ ಆಗ್ಬಾರದು. ನಾಲ್ಕರಿಂದ ಐದು ವಾರಕ್ಕೆ ಒಮ್ಮೆ ಈ ಲವಂಗವನ್ನು ಬದಲಿಸಿ.
56
ಇದನ್ನೂ ಬಳಸಿ ನೋಡಿ
ನಿಮ್ಮ ಮನೆಯಲ್ಲಿ ಲವಂಗ ಇಲ್ಲ ಎಂದಾದ್ರೆ ಇಲ್ಲ ಲವಂಗದ ವಾಸನೆ ಬೇಡ ಎನ್ನುವವರು ಮನೆಯಲ್ಲಿರುವ ಬೇರೆ ವಸ್ತುಗಳನ್ನು ಬಳಸಬಹುದು. ನೀವು ಬೇವಿನ ಎಲೆ ಅಥವಾ ದಾಲ್ಚಿನಿಯನ್ನು ಬಳಸಬಹುದು. ಬೇವಿನ ಎಲೆ ಹಾಗೂ ದಾಲ್ಚಿನಿ ವಾಸನೆಯನ್ನು ಕೂಡ ಇರುವೆಗಳು ಇಷ್ಟಪಡೋದಿಲ್ಲ. ನೀವು ಇವುಗಳನ್ನು ಸಕ್ಕರೆ ಡಬ್ಬಕ್ಕೆ ಹಾಕುವ ಮುನ್ನ ಕೆಲವೊಂದು ಎಚ್ಚರಿಕೆವಹಿಸಬೇಕು. ಸಕ್ಕರೆಗೆ ಈ ಪದಾರ್ಥ ಚೆಲ್ಲದಂತೆ ನೋಡಿಕೊಳ್ಳಬೇಕು.
66
ಇರುವೆ ಕಾಟ ಹೀಗೆ ತಪ್ಪಿಸಿ
ಸಕ್ಕರೆ ಡಬ್ಬ ಬಿಟ್ಟು ಮನೆಯ ಉಳಿದ ಜಾಗಕ್ಕೂ ಇರುವೆಗಳು ಬರುತ್ವೆ ಅಂದ್ರೆ ನೀವು ವಿನೆಗರ್ ಬಳಕೆ ಮಾಡಿ. ಇರುವೆ ಬರುವ ಜಾಗಕ್ಕೆ ನೀವು ವಿನೆಗರ್ ಸ್ಪ್ರೇ ಮಾಡಿದ್ರೆ ಇರುವೆ ಬರೋದಿಲ್ಲ. ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಸ್ಪ್ರೇ ಮಾಡಬೇಕು. ನೀವು ಕಾಳುಮೆಣಸನ್ನು ಕೂಡ ಬಳಸಬಹುದು. ಇರುವೆ ಹಿಂಡಿರುವ ಜಾಗಕ್ಕೆ ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ. ನಿಂಬೆ ಸಿಪ್ಪೆಯನ್ನು ಇರುವೆ ಬರುವ ಜಾಗದಲ್ಲಿಟ್ರೂ ಹುಳಿ ಪರಿಮಳಕ್ಕೆ ಇರುವೆ ಮನೆಗೆ ಬರೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.