ಕೊತ್ತಂಬರಿ ಸೊಪ್ಪು ವಾರಪೂರ್ತಿ ಫ್ರೆಶ್ ಆಗಿರ್ಬೇಕೆಂದ್ರೆ ಇಲ್ಲಿದೆ ಸೂಪರ್ ಟಿಪ್ಸ್

Published : Apr 27, 2026, 02:02 PM IST

ಮನೆಗೆ ತಂದ ಕೊತ್ತಂಬರಿ ಸೊಪ್ಪು ಎರಡು ದಿನವೂ ತಾಜಾ ಇರೋದಿಲ್ಲ. ಅದನ್ನು ಫ್ರಿಜ್ ನಲ್ಲಿಟ್ರೂ ಮೂರನೇ ದಿನ ಕೊತ್ತಂಬರಿ ಸೊಪ್ಪನ್ನು ಕಸಕ್ಕೆ ಹಾಕ್ಬೇಕು. ಒಂದು ಕೊಳೆಯುತ್ತೆ ಇಲ್ಲ ಒಣಗುತ್ತೆ. ಕೊತ್ತಂಬರಿ ಸೊಪ್ಪು 10 ದಿನ ತಾಜಾ ಆಗಿರಬೇಕು ಅಂದ್ರೆ ಸಿಂಪಲ್ ಟ್ರಿಕ್ಸ್ ತಿಳಿದ್ಕೊಳ್ಳಿ. 

PREV
16
ಹೂವಿನಂತೆ ಟ್ರೀಟ್ ಮಾಡಿ

ನಾವು ಮಾರ್ಕೆಟ್ ನಿಂದ ಕೊತ್ತಂಬರಿ ಸೊಪ್ಪನ್ನು ತಂದು, ಅದನ್ನು ಒಂದು ಬಾಕ್ಸ್ ಅಥವಾ ಕವರ್ ನಲ್ಲಿ ತುಂಬಿ ಫ್ರಿಜ್ ನಲ್ಲಿ ಇಡ್ತೇವೆ. ಹೀಗೆ ಮಾಡೋ ಬದಲು ಕೊತ್ತಂಬರಿ ಸೊಪ್ಪನ್ನು ಹೂವಿಡುವಂತೆ ಇಡಿ. ಮೊದಲು ಕೊತ್ತಂಬರಿ ಸೊಪ್ಪಿನ ಬೇರುಗಳನ್ನು ಕತ್ತರಿಸಿ. ನಂತ್ರ ಒಂದು ಜಾರ್ ಗೆ ಸೊಪ್ಪನ್ನು ಹಾಕಿ. ಗ್ಲಾಸ್ ಜಾರಿಗೆ ಸ್ವಲ್ಪ ನೀರು ಹಾಕಿ, ಸೊಪ್ಪನ್ನು ಹೂವಿನಂತೆ ನಿಲ್ಲಿಸಿ. ಸೊಪ್ಪಿನ ಮೇಲ್ಭಾಗಕ್ಕೆ ಸಡಿಲವಾದ ಪ್ಲಾಸ್ಟಿಕ್ ಕವರ್ ಹಾಕಿ ಫ್ರಿಜ್ ನಲ್ಲಿ ಇಡಿ. ಹೀಗೆ ಮಾಡಿದ್ರೆ ಕೊತ್ತಂಬರಿ ಸೊಪ್ಪು 10 ದಿನಗಳ ಕಾಲ ತಾಜಾ ಆಗಿರುತ್ತೆ.

26
ಅರಿಶಿನ

ಕೊಳಕು ಹಾಗೂ ಬ್ಯಾಕ್ಟೀರಿಯಾ ಇರುವ ಕೊತ್ತಂಬರಿ ಸೊಪ್ಪು ಬೇಗ ಹಾಳಾಗುತ್ತೆ. ನೀವು ಒಂದು ಬೌಲ್ ಗೆ ನೀರನ್ನು ಹಾಕಿ, ಅದಕ್ಕೆ ಅರಿಶಿನ ಮತ್ತು ಚಿಟಕಿ ಉಪ್ಪನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ನೆನೆಹಾಕಿ. ಐದು ನಿಮಿಷ ಬಿಟ್ಟು ಕೊತ್ತಂಬರಿ ಸೊಪ್ಪನ್ನು ನೀರಿನಿಂದ ತೆಗೆದು ಸ್ಟೋರಿ ಮಾಡಿ. ಸ್ಟೋರ್ ಮಾಡುವ ಮೊದಲು ಕೊತ್ತಂಬರಿ ಸೊಪ್ಪು ಸರಿಯಾಗಿ ಒಣಗಿದ್ಯಾ ಚೆಕ್ ಮಾಡ್ಕೊಳ್ಳಿ. ಅದ್ರಲ್ಲಿ ನೀರಿನಂಶ ಇದ್ರೆ ಸೊಪ್ಪು ಕೊಳೆಯುತ್ತದೆ. ಅರಿಶಿನ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲ್ಸ ಮಾಡುತ್ತದೆ.

36
ಪೇಪರ್ ಟವೆಲ್

ಒಂದು ಏರ್ಟೈಟ್ ಗ್ಲಾಸ್ ಬಾಕ್ಸ್ ತೆಗೆದುಕೊಳ್ಳಿ. ಅದರ ಕೆಳಗೆ ಪೇಪರ್ ಟವೆಲ್ ಹಾಕಿ. ನಂತ್ರ ಸ್ವಚ್ಛಗೊಳಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಅದರ ಮೇಲೆ ಮತ್ತೆ ಪೇಪರ್ ಟವೆಲ್ ಹಾಕಿ ಮುಚ್ಚಳ ಮುಚ್ಚಿ. ಹೀಗೆ ಮಾಡಿದ್ರೆ ಸೊಪ್ಪು ವಾರಗಟ್ಟಲೆ ಫ್ರೆಶ್ ಆಗಿರುತ್ತದೆ.

46
ಪ್ಲಾಸ್ಟಿಕ್ ಬಾಟಲ್

ಕೊತ್ತಂಬರಿ ಸೊಪ್ಪನ್ನು ತಕ್ಷಣ ತೊಳೆಯಲು ಟೈಂ ಇಲ್ಲ ಎನ್ನುವವರು ಪ್ಲಾಸ್ಟಿಕ್ ಬಾಟಲಿ ಹ್ಯಾಕ್ಸ್ ಬಳಸಬಹುದು. ಒಂದು ಒಣಗಿದ ನೀರಿನ ಬಾಟಲಿ ತೆಗೆದುಕೊಳ್ಳಿ. ಅದ್ರ ಮಧ್ಯ ಭಾಗಕ್ಕೆ ಕತ್ತರಿಸಿ. ಅದರೊಳಗೆ ಒಣಗಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತ್ರ ಟೇಪ್ ನಿಂದ ಅದನ್ನು ಜೋಡಿಸಿ ಅಥವಾ ಹಾಗೆಯೇ ಒಂದರ ಒಳಗೊಂದನ್ನು ಹಾಕಿ ಫ್ರಿಜ್ ನಲ್ಲಿಡಿ. ಇದು ಸೊಪ್ಪಿನ ಮೇಲೆ ಬೇರೆ ತರಕಾರಿ ಬಿದ್ದು ಹಾಳಾಗೋದನ್ನು ತಪ್ಪಿಸುತ್ತದೆ. ಕೊತ್ತಂಬರಿ ಸೊಪ್ಪು ತಾಜಾ ಇರಲು ಸಹಾಯ ಮಾಡುತ್ತದೆ.

56
ಸ್ಟೀಲ್ ಡಬ್ಬ

ನೀವು ಕೊತ್ತಂಬರಿ ಹಾಳಾಗದಂತೆ ಇಡಲು ಸ್ಟೀಲ್ ಡಬ್ಬ ಕೂಡ ಬಳಸಬಹುದು. ಒಣಗಿರುವ ಸ್ಟೀಲ್ ಡಬ್ಬದ ಕೆಳಗೆ ಕಾಟನ್ ಬಟ್ಟೆಯನ್ನು ಹಾಕಿ, ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಇಟ್ಟು ಬಾಕ್ಸ್ ಮುಚ್ಚಳ ಮುಚ್ಚಿ. ಸ್ಟೀಲ್, ಕೂಲ್ನೆಸ್ ಮೆಂಟೇನ್ ಮಾಡೋದ್ರಿಂದ ಕೊತ್ತಂಬರಿ ಹಾಳಾಗೋದಿಲ್ಲ.

66
ಜಿಪ್ಲಾಕ್

ನೀವು ಕೊತ್ತಂಬರಿ ಸೊಪ್ಪನ್ನು ಜಿಪ್ ಲಾಕ್ ಕವರ್ ನಲ್ಲೂ ಇಡಬಹುದು. ಕೊತ್ತಂಬರಿ ಕಾಂಡವನ್ನು ಸ್ವಲ್ಪ ತೇವವಾಗಿರುವ ಕಾಟನ್ ಬಟ್ಟೆಯಲ್ಲಿ ಸುತ್ತಿ ಅದನ್ನು ಜಿಪ್ ಲಾಕ್ ಕವರ್ ನಲ್ಲಿ ಇಡಿ. ನಂತ್ರ ಅದಕ್ಕೆ ಸ್ವಲ್ಪ ಗಾಳಿ ತುಂಬಿ ಲಾಕ್ ಮಾಡಿ. ಇದು ಗ್ರೀನ್ ಹೌಸ್ ನಂತೆ ಕೆಲಸ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories