ಫ್ರಿಡ್ಜ್‌ನಲ್ಲಿ ಪೇಪರ್ ರೋಲ್ ಇರಿಸೋ ಸೂಪರ್ ಟ್ರಿಕ್ಸ್; ಕಠಿಣ ಕೆಲಸ ಈಗ ತುಂಬಾ ಸರಳ

Published : Nov 14, 2026, 12:13 PM IST

ಪ್ರತಿದಿನ ಫ್ರಿಡ್ಜ್ ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಆದರೆ ಫ್ರಿಡ್ಜ್ ಬಾಗಿಲಲ್ಲಿ ಟಿಶ್ಯೂ ಅಥವಾ ರೋಲ್ ಪೇಪರ್ ಇಡುವುದರಿಂದ ತೇವಾಂಶ ಮತ್ತು ಚೆಲ್ಲಿದ ಆಹಾರವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದು ಫ್ರಿಡ್ಜ್ ಅನ್ನು ದುರ್ವಾಸನೆಯಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ.

PREV
15
ಫ್ರಿಡ್ಜ್ ಕ್ಲೀನ್

ಪ್ರತಿದಿನವೂ ಫ್ರಿಡ್ಜ್ ಕ್ಲೀನ್ ಮಾಡೋದು ಆಗದ ಕೆಲಸ. ಫ್ರಿಡ್ಜ್ ಕ್ಲೀನಿಂಗ್ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಈ ಕೆಲಸವನ್ನು ಬಹುತೇಕರು ವಾರಂತ್ಯದಲ್ಲಿಟ್ಟುಕೊಳ್ಳುತ್ತಾರೆ. ಹಾಗೆಯೇ ಫ್ರಿಡ್ಜ್‌ನಲ್ಲಿಟ್ಟ ಆಹಾರ ಸಾಮಾಗ್ರಿಗಳು ಚೆಲ್ಲಿ ಗಲೀಜು ಆಗುತ್ತಿರುತ್ತದೆ. ಇದರಿಂದ ಫ್ರಿಡ್ಜ್ ಕೆಟ್ಟ ವಾಸನೆಗೆ ಕಾರಣವಾಗಬಹುದು.

25
ಟಿಶ್ಯೂ ಪೇಪರ್ ಐಡಿಯಾ

ಪ್ರತಿಬಾರಿಯೂ ಫ್ರಿಡ್ಜ್‌ನಲ್ಲಿ ಮೊಸರು, ಹಾಲು, ಅಡುಗೆ ಪದಾರ್ಥಗಳು ಚೆಲ್ಲಿದಾಗ ಶುಚಿಗೊಳಿಸಲು ಕ್ಲೀನ್ ಬಟ್ಟೆ ಬಟ್ಟೆ ಬೇಕಾಗುತ್ತದೆ. ಕೆಲವೊಮ್ಮೆ ಬಟ್ಟೆ ಸಿಗದಿದ್ದ ಸಂದರ್ಭದಲ್ಲಿ ಹಾಗೆಯೇ ಬಿಟ್ಟುಬಿಡುತ್ತವೆ. ಇಂದು ಅದಕ್ಕಾಗಿ ಫ್ರಿಡ್ಜ್ ಡೋರ್ ಬಳಿ ಟಿಶ್ಯೂ ಪೇಪರ್ ಇರಿಸೋದು ಸೂಪರ್ ಐಡಿಯಾ ಆಗಿದೆ. ಈ ಒಂದು ಹ್ಯಾಕ್ ನಿಮ್ಮ ಫ್ರಿಡ್ಜ್ ಕ್ಲೀನ್ ಆಗಿರುವಂತೆ ನೋಡಿಕೊಳ್ಳುತ್ತದೆ.

35
ರೋಲ್ ಪೇಪರ್

ಫ್ರಿಡ್ಜ್ ಡೋರ್ ಬಳಿಯ ಚಿಕ್ಕಮೂಲೆಯಲ್ಲಿ ರೋಲ್‌ ಪೇಪರ್ ಇಡಲು ಸಾಕಾಗುತ್ತದೆ. ಸ್ವಲ್ಪ ಜಾಗ ತೆಗೆದುಕೊಂಡರೂ ಇದು ಹೆಚ್ಚಿನ ಸಹಾಯವನ್ನು ಮಾಡುತ್ತದೆ. ಈ ರೋಲ್ ಪೇಪರ್, ಫ್ರಿಡ್ಜ್‌ನಲ್ಲಿ ಪದೇ ಪದೇ ಸಂಗ್ರಹವಾಗುವ ತೇವಾಂಶ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಕ್ಲೀನ್ ಮಾಡುವ ಸಂದರ್ಭದಲ್ಲಿ ಬಟ್ಟೆ ಸಿಗದಿದ್ದಾಗ ಈ ರೋಲ್ ಪೇಪರ್ ಸಹಾಯಕ್ಕೆ ಬರುತ್ತದೆ.

45
ರೋಲ್ ಪೇಪರ್ ಎಲ್ಲಿಡಬೇಕು?

ರೋಲ್‌ ಪೇಪರ್ ನೀರು ಬೀಳದ ಅಥವಾ ತೇವಾಂಶ ಸಂಗ್ರಹವಾಗುವ ಸ್ಥಳದಲ್ಲಿರಿಸಬೇಕು. ಫ್ರಿಡ್ಜ್ ಡೋರ್ ಇದಕ್ಕೆ ಸೂಕ್ತಸ್ಥಳವಾಗಿದೆ. ರೋಲ್ ಪೇಪರ್ ಸಿಗದಿದ್ರೆ ಟಿಶ್ಯೂ ಪೇಪರ್ ಬಾಕ್ಸ್‌ನನ್ನು ಫ್ರಿಡ್ಜ್ ಮೇಲಿಟ್ಟುಕೊಳ್ಳಬಹುದು. ಕೆಲವರು ಆಹಾರ ಪಾತ್ರೆ, ತರಕಾರಿ ಅಥವಾ ರೆಫ್ರಿಜರೇಟರ್‌ನಲ್ಲಿರುವ ಇತರ ವಸ್ತುಗಳ ಕೆಳಗೆ ಪೇಪರ್ ಟವೆಲ್‌ಗಳನ್ನು ಇಡುತ್ತಾರೆ. ಈ ಪೇಪರ್ ಟವೆಲ್ ಫ್ರಿಡ್ಜ್‌ನಲ್ಲಿನ ತೇವಾಂಶ ಹೀರಿಕೊಳ್ಳುತ್ತದೆ.

55
ಕ್ಲೀನಿಂಗ್

ರೆಫ್ರಿಜರೇಟರ್‌ನಲ್ಲಿ ಹೆಚ್ಚಿನ ಪ್ರಮಾಣದ ಆಹಾರ ಚೆಲ್ಲಿದ್ದರೆ ಅಥವಾ ದೊಡ್ಡ ಅವ್ಯವಸ್ಥೆ ಉಂಟಾಗಿದ್ದರೆ, ಆ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಈ ಸಂದರ್ಭದಲ್ಲಿ ರೋಲ್ ಪೇಪರ್ ಬದಲಾಗಿ ಒಣಬಟ್ಟೆಯನ್ನು ಬಳಸಬೇಕು. ಹಾಗೆಯೇ ಫ್ರಿಡ್ಜ್ ಡೀಪ್ ಕ್ಲೀನಿಂಗ್ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories