ಆಲೂ ಪರೋಟಾ ಮಾಡುವಾಗ ಸ್ಟಫಿಂಗ್ ಹೊರಬಂದು ಪರೋಟಾ ಹಾಳಾಗುವುದು ಸಾಮಾನ್ಯ. ಆದರೆ ಬೇಯಿಸಿದ ಆಲೂಗಡ್ಡೆಗೆ ಸ್ವಲ್ಪ ಕಡ್ಲೆ ಹಿಟ್ಟು ಸೇರಿಸಿ ಮಿಕ್ಸ್ ಮಾಡುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. ಇದರಿಂದ ಪರೋಟಾ ತುಂಡಾಗದೆ ಸುಂದರವಾಗಿ ಬರುತ್ತದೆ.
ಆಲೂ ಪರೋಟಾ ಎಂದರೆ ಹಲವರ ಬಾಯಲ್ಲಿ ನೀರು ಬರುವುದು ಉಂಟು. ಆಲೂಗಡ್ಡೆ ತಿಂದರೆ ತುಂಬಾ ಗ್ಯಾಸ್ ಆಗುತ್ತದೆ ಎಂದು ಅದನ್ನು ದೂರವಿಟ್ಟವರು ಕೂಡ ಅದರಿಂದ ಮಾಡುವ ಪರೋಟಾ ಎಂದಾಕ್ಷಣ ಒಂದು ಕ್ಷಣ ತುಸು ಯೋಚಿಸಿ, ತಿಂದೇಬಿಡೋಣ ಎನ್ನುತ್ತಾರೆ.
26
ಎಡವಿದರೆ ಕಷ್ಟ
ಆದರೆ, ಆಲೂ ಪರೋಟಾ ಸವಿಯಲು ಎಷ್ಟು ಸೊಗಸಾಗಿ ಇರುತ್ತದೆಯೋ, ಕೆಲವೊಮ್ಮೆ ಎಡವಿ ಬಿಟ್ಟರೆ, ಅದನ್ನು ಲಟ್ಟಿಸುವಾಗ ಅಷ್ಟೇ ಕಷ್ಟವಾಗುವುದು ಉಂಟು.
36
ಆಲೂಗಡ್ಡೆಯ ಸ್ಟಫಿಂಗ್ ಹೊರಕ್ಕೆ
ಸಾಮಾನ್ಯವಾಗಿ ಏನೇ ಟಿಪ್ಸ್ ಫಾಲೋಮಾಡಿದ್ರೂ ಪರೋಟಾದ ಒಳಗೆ ಆಲೂಗಡ್ಡೆಯ ಸ್ಟಫಿಂಗ್ ಮಾಡಿ ಲಟ್ಟಿಸುವಾಗ ಆಲೂಗಡ್ಡೆಯ ಸ್ಟಫಿಂಗ್ ಪರೋಟಾದಿಂದ ಹೊರಕ್ಕೆ ಬರುವುದು ಉಂಟು.
ಇದರಿಂದ ಎಷ್ಟೋ ಸಲ, ಪರೋಟಾದ ಅಂದ ಕೆಡುವುದೂ ಅಲ್ಲದೇ, ತವಾದ ಮೇಲೆ ಬೇಯಿಸಲು ಇಟ್ಟಾಗ ಅದು ಷೇಪ್ಔಟ್ ಆಗುವುದು ಇದೆ.
56
ಆಲೂಗಡ್ಡೆ ಹೊರಕ್ಕೆ ಬರಬಾರದು
ಹಾಗಿದ್ದರೆ ಆಲೂ ಪರೋಟಾ ಮಾಡುವ ಸಮಯದಲ್ಲಿ ಸ್ಟಫಿಂಗ್ನಿಂದ ಆಲೂಗಡ್ಡೆ ಹೊರಕ್ಕೆ ಬರಬಾರದು ಎಂದರೆ ಏನು ಮಾಡಬೇಕು. ಇದಕ್ಕೊಂದು ಸಿಂಪಲ್ ಟ್ರಿಕ್ಸ್ ಇದೆ.
66
ಒಂದೆರಡು ಚಮಚ ಕಡ್ಲೆ ಹಿಟ್ಟು
ಆಲೂಗಡ್ಡೆಯನ್ನು ಸ್ವಲ್ಪ ಬೇಯಿಸಿ ಅದನ್ನು ತುರಿದು, ಅದರ ಮೇಲೆ ಒಂದೆರಡು ಚಮಚ ಕಡ್ಲೆ ಹಿಟ್ಟನ್ನು ಉದುರಿಸಿ ಮಿಕ್ಸ್ ಮಾಡಿ ನಂತರ ಸ್ಟಫಿಂಗ್ ಮಾಡಿ ನೋಡಿ, ಹೀಗೆ ಮಾಡಿದರೆ ಪರೋಟಾ ತುಂಡಾಗದೇ ಚೆನ್ನಾಗಿ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.