ಆರೋಗ್ಯಕರ ತಿಂಡಿಗಳಲ್ಲಿ ಇಡ್ಲಿ ಸಹ ಒಂದಾಗಿದೆ. ಭಾರತದ ಮೂಲೆ ಮೂಲೆಯಲ್ಲೂ ಇಡ್ಲಿ ಪರಿಮಳ ಹರಡಿದೆ. ಹೋಟೆಲ್ ರೀತಿ ಮನೆಯಲ್ಲಿ ಮಾಡುವ ಇಡ್ಲಿ ಸಾಫ್ಟ್ ಆಗಲ್ಲ ಎಂಬುವುದು ಬಹುತೇಕ ಗೃಹಿಣಿಯರ ಟೆನ್ಷನ್. ಕೆಲವರು ಇಡ್ಲಿ ಮೃದುವಾಗಿಸಲು ಬೇಕಿಂಗ್ ಸೋಡಾ ಬಳಕೆ ಮಾಡುತ್ತಾರೆ. ಆದ್ರೆ ಈ ಲೇಖನದಲ್ಲಿ ಬೇಕಿಂಗ್ ಸೋಡಾ ಬಳಸದೇ ಮೃದುವಾಗಿ ಮಲ್ಲಿಗೆ ಇಡ್ಲಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
25
ಮೃದುವಾದ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಇಡ್ಲಿ ಅಕ್ಕಿ: 4 ಕಪ್, ಉದ್ದಿನ ಬೇಳೆ: 1 ಕಪ್, ಸಾಬುದಾನ: ಅರ್ಧ ಕಪ್, ಸಾಮಾನ್ಯ ಅಕ್ಕಿ: 1 ಕಪ್, ರುಚಿಗೆ ತಕ್ಕಷ್ಟು ಉಪ್ಪ
35
ಮಲ್ಲಿಗೆ ಇಡ್ಲಿ ಮಾಡುವ ವಿಧಾನ
ಮೊದಲು ಇಡ್ಲಿ ಅಕ್ಕಿ, ಅನ್ನ ಮಾಡಲು ಬಳಸುವ ಅಕ್ಕಿ ಮತ್ತು ಸಾಬುದಾನವನ್ನು ಎರಡರಿಂದ ಮೂರು ಬಾರಿ ನೀರಿನಲ್ಲಿ ತೊಳೆದುಕೊಂಡು ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಮೂರರಿಂದ ನಾಲ್ಕು ಗ್ಲಾಸ್ ನೀರು ಸೇರಿಸಿಕೊಂಡು ಕನಿಷ್ಠ 8 ಗಂಟೆಯಾದ್ರೂ ನೆನೆಸಿಟ್ಟುಕೊಳ್ಳಿ. 8 ಗಂಟೆಗಿಂತಲೂ ಕಡಿಮೆಯಾದ್ರೂ ಇಡ್ಲಿ ಸಾಫ್ಟ್ ಆಗಲ್ಲ.
8 ಗಂಟೆ ನಂತರ ಮೂರು ಪದಾರ್ಥವನ್ನು ಸಣ್ಣದಾಗಿ ರುಬ್ಬಿಕೊಂಡು ಒಂದೇ ಪಾತ್ರೆಗೆ ಸೇರಿಸಿಕೊಳ್ಳಿ. ತದನಂತರ ಮೂರು ಹಿಟ್ಟನ್ನು ಕೈಯಿಂದಲೇ ಮೂರರಿಂದ ಐದು ನಿಮಿಷಗಳ ಕಾಲ ಚೆನ್ನಾಗಿ ಕಲಿಸಿಕೊಳ್ಳಿ. ಹಿಟ್ಟನ್ನು ಚೆನ್ನಾಗಿ ಬೀಟ್ ಮಾಡಿಕೊಂಡ್ರೆ ಅಡುಗೆಸೋಡಾ ಹಾಕುವ ಅವಶ್ಯಕತೆ ಇರಲ್ಲ. ಇದೇ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಸಹ ಸೇರಿಸಿಕೊಳ್ಳಿ. ಈಗ ಮುಚ್ಚಳ ಮುಚ್ಚಿ ಇಡೀ ರಾತ್ರಿ ಹಿಟ್ಟು ನೆನೆಸಿಕೊಳ್ಳಿ. ಇದ ಸಹ ಕನಿಷ್ಠ 8 ಗಂಟೆಯಾಗಿರಬೇಕು ಅನ್ನೋದನ್ನು ನೆನೆಪಿಟ್ಟುಕೊಳ್ಳಿ.
55
8:8 ಸೂತ್ರ
ಅಕ್ಕಿ, ಉದ್ದಿನಬೇಳೆ ಮತ್ತು ಸಾಬುದಾನ ಕನಿಷ್ಠ 8 ಗಂಟೆ ನೆನೆಯಬೇಕು ಮತ್ತು ರುಬ್ಬಿದ ಹಿಟ್ಟು ಸಹ 8 ಗಂಟೆ ನೆನೆಸಿಕೊಳ್ಳಬೇಕು. ಇಡ್ಲಿ ಮಾಡುವ ಮುನ್ನ ಹುದುಗಿದ ಹಿಟ್ಟನ್ನು ಮತ್ತೊಮ್ಮೆ ಕೈಯಿಂದಲೇ 2 ರಿಂದ 3 ನಿಮಿಷ ಕಲಿಸಿಕೊಳ್ಳಬೇಕು. ಆನಂತರವೇ ಇಡ್ಲಿ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ರೆ ಇಡ್ಲಿ ಅಡುಗೆ ಸೋಡಾದ ಅವಶ್ಯಕತೆಯೇ ಇರಲ್ಲ. ಕೆಲವರು ಸಾಬುದಾನ ಬದಲಾಗಿ ಅವಲಕ್ಕಿ ಅಥವಾ ಮಂಡಕ್ಕಿ ಬಳಸುತ್ತಾರೆ.