ಬಿಸಿಬಿಸಿ ಚಪಾತಿ, ರೊಟ್ಟಿ ಬಾಕ್ಸ್​ನಲ್ಲಿ ಹೀಗೆ ಇಟ್ರೆ ಎಷ್ಟೊತ್ತಾದ್ರೂ ಬೆವರೋದೇ ಇಲ್ಲ: ಈಸಿ ಟಿಪ್ಸ್​ ನೋಡಿ

Published : Jul 18, 2026, 02:36 PM IST

ಹಾಟ್‌ಬಾಕ್ಸ್‌ನಲ್ಲಿ ಇಟ್ಟ ಚಪಾತಿ ಅಥವಾ ರೊಟ್ಟಿಗಳು ಹಬೆಯಿಂದಾಗಿ ಬೆವತು ನೀರಾಗುವುದನ್ನು ತಡೆಯಲು ಈ ಲೇಖನದಲ್ಲಿ ಸುಲಭ ಉಪಾಯವನ್ನು ವಿವರಿಸಲಾಗಿದೆ. ಡಬ್ಬದೊಳಗೆ ಸ್ಟ್ಯಾಂಡ್ ಮತ್ತು ಬಟ್ಟೆಯನ್ನು ಬಳಸಿ, ಚಪಾತಿಗಳನ್ನು ದೀರ್ಘಕಾಲ ಬಿಸಿಯಾಗಿ ಮತ್ತು ಬೆವತು ಹೋಗದಂತೆ ಇಡುವುದು ಹೇಗೆಂದು ತಿಳಿಸಲಾಗಿದೆ.

PREV
16
ಬೆವತು ಹೋಗುವ ರೊಟ್ಟಿ, ಚಪಾತಿ

ಸಾಮಾನ್ಯವಾಗಿ ಚಪಾತಿ ಅಥವಾ ರೊಟ್ಟಿ ಮಾಡಿದಾಗ, ಅದನ್ನು ಬಳಸುವುದು ಲೇಟ್​ ಆಗಿದ್ದರೆ ಹಾಟ್​ಬಾಕ್ಸ್​ನಲ್ಲೋ ಅಥವಾ ಇನ್ನಾವುದಾದರೂ ಡಬ್ಬದಲ್ಲಿ ಇಡುವುದು ಸರ್ವೇ ಸಾಮಾನ್ಯ.

26
ಮಹಿಳೆಯರ ಸಮಸ್ಯೆ

ಆದರೆ, ಹೀಗೆ ಮಾಡಿದಾಗ, ಎಷ್ಟೋ ಮಹಿಳೆಯರು ರೊಟ್ಟಿ ಅಥವಾ ಚಪಾತಿಯನ್ನು ತಣ್ಣಗೆ ಮಾಡಿ ಡಬ್ಬದಲ್ಲಿ ಹಾಕಿಡಬೇಕಾದ ಸನ್ನಿವೇಶ ಬರುತ್ತದೆ. ಇದಕ್ಕೆ ಕಾರಣ, ಬಿಸಿಬಿಸಿಯಾಗಿ ಬಾಕ್ಸ್​ನಲ್ಲಿ ಇಟ್ಟರೆ, ಚಪಾತಿ ಅಥವಾ ರೊಟ್ಟಿ ಅದರಲ್ಲಿಯೂ ಹೆಚ್ಚಾಗಿ ಕೆಳಗೆ ಇದ್ದ ಚಪಾತಿ ಅಥವಾ ರೊಟ್ಟಿ ಬೆವರಿ ನೀರು ನೀರಾಗಿ ಬಿಡುತ್ತದೆ.

36
ಬೆವರದೇ ಇರಲು ಟಿಪ್ಸ್​

ಅಧಿಕ ಸಮಯದವರೆಗೆ ಬಿಸಿಬಿಸಿಯಾಗಿಯೇ ಇರಬೇಕು ಹಾಗೂ ಯಾವುದೇ ಚಪಾತಿ ಅಥವಾ ರೊಟ್ಟಿ ಬೆವರಬಾರದು ಎಂದರೆ ಅದಕ್ಕೊಂದು ಸುಲಭದ ಟಿಪ್ಸ್​ ಇದೆ. ಈ ಟಿಪ್ಸ್​ ಫಾಲೋ ಮಾಡಿದ್ರೆ ತಿನಿಸುಗಳು ಬೆವರೋದೇ ಇಲ್ಲ.

46
ಹೀಗೆ ಮಾಡಿ

ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಡಬ್ಬದಲ್ಲಿ ಅದರ ಸೈಜ್​ಗೆ ತಕ್ಕಂಥ ಒಂದು ಸ್ಟ್ಯಾಂಡ್​ ಇಡಿ. (ಇದನ್ನು ಚಿತ್ರದಲ್ಲಿ ತೋರಿಸಲಾಗಿದೆ). ಆ ಬಳಿಕ ಒಂದು ಬಿಳಿಯ ವಸ್ತ್ರವನ್ನು ಅದರ ಮೇಲೆ ಇಟ್ಟು, ಅದರ ಮೇಲೆ ರೊಟ್ಟಿ, ಚಪಾತಿ ಏನೇ ಇಟ್ಟರೂ ಅದು ಬೆವರುವುದೇ ಇಲ್ಲ.

56
ಚಮಚದ ಟಿಪ್ಸ್​

ಇನ್ನು ಕೆಲವೊಬ್ಬರು ಡಬ್ಬದ ಮೇಲುಗಡೆ ಇರುವ ಚಪಾತಿ ಅಥವಾ ರೊಟ್ಟಿಯ ಮೇಲೆ ಎರಡು ಚಮಚಗಳನ್ನು ಕ್ರಾಸ್​​ನಲ್ಲಿ ಇಡುತ್ತಾರೆ. ಇದರಿಂದ ತಿನಿಸು ಬೆವರುವುದಿಲ್ಲವಾದರೂ, ಹೆಚ್ಚು ಸಮಯ ಬಿಸಿ ಇರುವುದಿಲ್ಲ.

66
ಬಿಸಿಬಿಸಿ ಚಪಾತಿ

ಆದ್ದರಿಂದ ಸ್ಟ್ಯಾಂಡ್​ ಇಡುವ ಟಿಪ್ಸ್​ ತುಂಬಾ ಉಪಯೋಗವಾಗಿದ್ದು, ಹಾಟ್​ ಬಾಕ್ಸ್​ನಲ್ಲಿ ಇಟ್ಟರೆ ಹೆಚ್ಚು ಕಾಲ ಬಿಸಿಬಿಸಿಯಾಗಿಯೂ ಇರುತ್ತದೆ, ಜೊತೆಗೆ ಬೆವರುವುದೂ ಇಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories