ಒದ್ದೆ ಕಸ, ತರಕಾರಿ ಸಿಪ್ಪೆ, ಉಳಿದ ಆಹಾರ ಇತ್ಯಾದಿಗಳಿಂದ ಡಸ್ಟ್ಬಿನ್ನಲ್ಲಿ ಸ್ವಲ್ಪ ನೀರು ಅಥವಾ ರಸ ಉಳಿಯಬಹುದು. ಇದು ಕೆಳಭಾಗ ಅಥವಾ ಬದಿಗಳಿಗೆ ಅಂಟಿಕೊಂಡಿರುತ್ತದೆ. ಸಾಮಾನ್ಯವಾಗಿ ನೀರು ಹಾಕಿ ತೊಳೆದರೂ ಇವೆಲ್ಲ ಸಂಪೂರ್ಣವಾಗಿ ಹೋಗದೆ ಇರಬಹುದು. ನಂತರ ಇದೇ ಕೊಳೆತು ವಾಸನೆ ಬರಲು ಶುರುವಾಗುತ್ತದೆ. ಹಾಗಾಗಿ ನೀವು ಡಸ್ಟ್ ಬಿನ್ ಬದಿಗಳನ್ನು ಕ್ಲೀನ್ ಮಾಡೋದು ಮುಖ್ಯ.
25
ಡಸ್ಟ್ ಬಿನ್ ಮುಚ್ಚಳದ ಸ್ವಚ್ಛತೆ
ಡಸ್ಟ್ಬಿನ್ ಒಳಭಾಗವನ್ನು ಮಾತ್ರ ತೊಳೆದು ಮುಚ್ಚಳವನ್ನು ಮರೆತರೆ ವಾಸನೆ ಕಡಿಮೆ ಆಗೋದಿಲ್ಲ. ಮುಚ್ಚಳದ ಕೆಳಭಾಗ, ಅದರ ಅಂಚುಗಳು ಮತ್ತು ಜಾಯಿಂಟ್ ಮಾಡಿರುವ ಜಾಗಗಳಲ್ಲಿ ಕಸದ ಕಣಗಳು ಹಾಗೂ ವಾಸನೆ ಉಳಿದುಕೊಳ್ಳಬಹುದು. ಆದ್ದರಿಂದ ಮುಚ್ಚಳವನ್ನೂ ಸಾಬೂನು ಅಥವಾ ಡಿಶ್ವಾಶ್ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.
35
ತೊಳೆದ ತಕ್ಷಣ ಹೀಗೆ ಮಾಡ್ಬೇಡಿ
ಡಸ್ಟ್ಬಿನ್ ತೊಳೆದ ಬಳಿಕ ಅದರೊಳಗೆ ನೀರು ಉಳಿದಿದ್ದರೆ, ತಕ್ಷಣ ಅದರ ಮುಚ್ಚಳ ಮುಚ್ಚಬೇಡಿ. ಒಳಗೆ ತೇವಾಂಶವಿದ್ದರೆ ದುರ್ವಾಸನೆ ಹೆಚ್ಚು ಕಾಲ ಉಳಿಯಬಹುದು. ಆದ್ದರಿಂದ ತೊಳೆದ ನಂತರ ಡಸ್ಟ್ಬಿನ್ ಅನ್ನು ತೆರೆದಿಟ್ಟು ಸಂಪೂರ್ಣವಾಗಿ ಒಣಗಿಸಿ. ಬಿಸಿಲಿನಲ್ಲಿ ಒಣಗಿಸಿದರೆ ಒಳ್ಳೆಯದು.
ಪ್ಲಾಸ್ಟಿಕ್ ಮೇಲ್ಮೈಯಲ್ಲಿ ಆಹಾರ ಮತ್ತು ಕಸದ ವಾಸನೆ ಕೆಲವೊಮ್ಮೆ ಹೆಚ್ಚು ಕಾಲ ಉಳಿಯುತ್ತದೆ. ಅದರಲ್ಲೂ ಒದ್ದೆ ಅಥವಾ ತೀವ್ರ ವಾಸನೆಯ ಕಸವನ್ನು ಬಹಳ ಹೊತ್ತು ಇಟ್ಟಿದ್ದರೆ, ತೊಳೆದ ಬಳಿಕವೂ ಸ್ವಲ್ಪ ವಾಸನೆ ಕಾಣಿಸಿಕೊಳ್ಳಬಹುದು. ನೀವು ಪ್ಲಾಸ್ಟಿಕ್ ಡಸ್ಟ್ ಬಿನ್ ಬಳಸುತ್ತಿದ್ದರೆ ಅದನ್ನು ಬದಲಿಸಿ.
55
ದುರ್ವಾಸನೆ ಕಡಿಮೆ ಮಾಡಲು ಏನು ಮಾಡಬೇಕು?
ಡಸ್ಟ್ಬಿನ್ ಖಾಲಿ ಮಾಡಿದ ನಂತರ ಒಳಭಾಗ ಮತ್ತು ಹೊರಭಾಗ ಎರಡನ್ನೂ ಸ್ವಚ್ಛಗೊಳಿಸಿ. ಸಾಬೂನು ಅಥವಾ ಡಿಶ್ವಾಶ್ ಬಳಸಿ ತೊಳೆದು, ಸ್ವಚ್ಛ ನೀರಿನಿಂದ ಮತ್ತೆ ತೊಳೆಯಿರಿ. ನಂತರ ಸಂಪೂರ್ಣವಾಗಿ ಒಣಗಿಸಿ. ವಾಸನೆ ಪದೇಪದೇ ಬರುತ್ತಿದ್ದರೆ ಕೆಳಭಾಗ, ಅಂಚುಗಳು, ಮುಚ್ಚಳ ಮತ್ತು ಸಣ್ಣ ಜೋಡಣೆಯ ಜಾಗಗಳನ್ನು ಒಮ್ಮೆ ಪರಿಶೀಲಿಸಿ. ಮುಖ್ಯವಾಗಿ, ಒದ್ದೆ ಕಸವನ್ನು ಡಸ್ಟ್ಬಿನ್ನಲ್ಲಿ ಹೆಚ್ಚು ಸಮಯ ಇಡಬೇಡಿ. ಇದೇ ದುರ್ವಾಸನೆ ಹೆಚ್ಚಾಗಲು ಪ್ರಮುಖ ಕಾರಣವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.