Kitchen Hacks: ಅಡುಗೆಮನೆ ಗುಟ್ಟು: ಗೃಹಿಣಿಯರಿಗೆ ನೆರವಾಗೋ 9 ಸೂಪರ್ ಕಿಚನ್ ಟಿಪ್ಸ್

Published : Aug 01, 2026, 10:15 AM IST

ಅಡುಗೆಮನೆಯಲ್ಲಿ ದೈನಂದಿನ ಕೆಲಸಗಳನ್ನು ಸುಲಭಗೊಳಿಸಲು ಈ ಲೇಖನವು ಹಲವು ಉಪಯುಕ್ತ ಸಲಹೆಗಳನ್ನು ನೀಡುತ್ತದೆ. ಈರುಳ್ಳಿ-ಆಲೂಗಡ್ಡೆ ಸಂಗ್ರಹಣೆ, ಅಡುಗೆಯಲ್ಲಿ ಉಪ್ಪು ಅಥವಾ ಎಣ್ಣೆ ಹೆಚ್ಚಾದಾಗ ಏನು ಮಾಡಬೇಕು, ಮತ್ತು ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವಂತಹ ಹಲವಾರು ತಂತ್ರಗಳನ್ನು ಇಲ್ಲಿ ವಿವರಿಸಲಾಗಿದೆ.

PREV
111
Kitchen Hacks

ಅಡುಗೆಮನೆಯಲ್ಲಿ ಕೆಲವೊಂದು ಸಣ್ಣಪುಟ್ಟ ಟಿಪ್ಸ್‌ಗಳನ್ನು ತಿಳಿದುಕೊಂಡರೆ, ನಿಮ್ಮ ಅಡುಗೆ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಅಡುಗೆ ಮಾಡುವಾಗ ಇಂತಹ ಸಣ್ಣ ಸಲಹೆಗಳು ತುಂಬಾ ಸಹಾಯಕ್ಕೆ ಬರುತ್ತವೆ. ಇದರಿಂದ ಅಡುಗೆಕೆಲಸಗಳು ಕಡಿಮೆ ಸಮಯದಲ್ಲಿಯೇ ಮುಗಿಯುತ್ತವೆ. ಅದರಲ್ಲೂ ಮನೆಯೊಳಗೂ ಮತ್ತು ಹೊರಗೂ ಕೆಲಸ ಮಾಡುವ ಮಹಿಳೆಯರಿಗೆ ಇಂತಹ ಸಲಹೆಗಳು ತುಂಬಾ ಉಪಯುಕ್ತವಾಗುತ್ತವೆ.

211
ಇವೆರಡನ್ನೂ ಒಟ್ಟಿಗೆ ಇಡಬೇಡಿ

ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ಸಂಗ್ರಹಿಸಬೇಡಿ. ಯಾಕೆಂದರೆ ಎರಡೂ ಅನಿಲವನ್ನು ಉತ್ಪಾದಿಸುತ್ತವೆ. ಇದರಿಂದಾಗಿ ಇವೆರಡರಲ್ಲಿ ಒಂದು ಬೇಗನೆ ಹಾಳಾಗುತ್ತದೆ. ಹಾಗೆಯೇ ಅಲೂಗಡ್ಡೆ ಮತ್ತು ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡದೇ ಗಾಳಿ ಮತ್ತು ಬೆಳಕು ಬರುವ ಪ್ರದೇಶದಲ್ಲಿ ಸ್ಟೋರ್ ಮಾಡಬೇಕು. ಇದರಿಂದ ದೀರ್ಘ ಸಮಯದವರೆಗೆ ಸ್ಟೋರ್ ಮತ್ತು ಪದೇ ಪದೇ ಕ್ಲೀನ್ ಮಾಡುವ ಕೆಲಸ ತಪ್ಪಲಿದೆ.

311
ಶುದ್ಧ ಪಾಮ್ ಎಣ್ಣೆಗಾಗಿ ಹೀಗೆ ಮಾಡಿ

ಪಾಮ್ ಎಣ್ಣೆಯನ್ನು ಬಿಸಿ ಮಾಡುವಾಗ, ಎರಡು ಅಥವಾ ಮೂರು ಕಿತ್ತಳೆ ಎಲೆಗಳನ್ನು ಅದಕ್ಕೆ ಹಾಕಿ. ಎಲೆಗಳು ಕಪ್ಪಾಗುವವರೆಗೆ ಬಿಡಿ. ಈಗ ಪಾಮ್ ಎಣ್ಣೆಯು ಶುದ್ಧ ಶೇಂಗಾ ಎಣ್ಣೆಯಾಗಿ ಬದಲಾಗಿರುತ್ತದೆ. ಅಡುಗೆ ಮಾಡುವ ಸಂದರ್ಭದಲ್ಲಿ ಚಿಕ್ಕದಾದ ಕ್ಯಾನ್ ಅಥವಾ ಪಾತ್ರೆಗೆ ಎಣ್ಣೆಯನ್ನು ಹಾಕಿಕೊಳ್ಳಿ. ಇದರಿಂದ ಎಣ್ಣೆ ಬೀಳುವ ಅಪಾಯ ತುಂಬಾ ಕಡಿಮೆಯಾಗುತ್ತದೆ. ದೊಡ್ಡಕ್ಯಾನ್‌ ಅಥವಾ ಪಾಕೆಟ್‌ನಿಂದ ನೇರವಾಗಿ ಎಣ್ಣೆ ಬಳಸಿದ್ರೆ ಚೆಲ್ಲುವ ಸಾಧ್ಯತೆ ಇರುತ್ತದೆ.

411
ಕೈ ಉರಿ ಕಡಿಮೆ ಮಾಡಲು

ಮೆಣಸಿನಕಾಯಿಯನ್ನು ಬರಿಗೈಯಲ್ಲಿ ಕತ್ತರಿಸಿದ ನಂತರ, ನಿಮ್ಮ ಕೈಯನ್ನು ಉಪ್ಪು ಮತ್ತು ಎಣ್ಣೆಯಿಂದ ಸ್ಕ್ರಬ್ ಮಾಡಿ, ನಂತರ ತೊಳೆಯಿರಿ. ಇದರಿಂದ ಕೈಯಲ್ಲಿ ಉರಿ ಉಂಟಾಗುವುದಿಲ್ಲ. ಹಾಗೆಯೇ ಈರುಳ್ಳಿ ಕತ್ತರಿಸಿದ ನಂತರವೂ ಕೈಗಳನ್ನು ತೊಳೆದುಕೊಳ್ಳಿ. ಬೆಳಗಿನ ತಿಂಡಿಗೆ ಬೇಕಾಗುವ ತರಕಾರಿಯನ್ನು ರಾತ್ರಿಯೇ ತೊಳೆದಿಟ್ಟುಕೊಂಡು ಎತ್ತಿಟ್ಟುಕೊಳ್ಳಿ. ಫ್ರಿಡ್ಜ್ ಇದ್ರೆ ರಾತ್ರಿಯೇ ಕತ್ತರಿಸಿ ಸ್ಟೋರ್ ಮಾಡಿಕೊಳ್ಳಬಹುದು.

511
ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ?

ನೀವು ಮಾಡುವ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ದರೆ, ಸಿಪ್ಪೆ ಸುಲಿದ ಆಲೂಗಡ್ಡೆಯನ್ನು ಅದಕ್ಕೆ ಹಾಕಿ. ಆಲೂಗಡ್ಡೆಯು ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಬೇಕಿದ್ರೆ ಆಲೂಗಡ್ಡೆಯನ್ನು ತೆಗೆಯಬಹುದು ಅಥವಾ ಆಲೂಗಡ್ಡೆಯನ್ನು ಸ್ಮಾಶ್ ಮಾಡಿಕೊಂಡು ಮಿಕ್ಸ್ ಮಾಡಿಕೊಳ್ಳಬಹುದು.

611
ಅಡುಗೆಯಲ್ಲಿ ಎಣ್ಣೆ ಹೆಚ್ಚಾಗಿದೆಯಾ?

ಕೆಲವೊಮ್ಮೆ ಅಡುಗೆಯಲ್ಲಿ ಎಣ್ಣೆ ಹೆಚ್ಚಾದ್ರೆ ಐಸ್‌ ಕ್ಯೂಬ್‌ನಿಂದ ತೆಗೆಯಬಹುದು. ಸಾಂಬಾರ್‌ ಮೇಲೆ ಕೆನೆ ಪದರಿನಂತೆ ತೇಲುವ ಎಣ್ಣೆ ಮೇಲೆ ಐಸ್ ಕ್ಯೂಬ್ ಇರಿಸಿ. ಇದರಿಂದ ಎಣ್ಣೆಯೆಲ್ಲಾ ಐಸ್‌ ಕ್ಯೂಬ್‌ಗೆ ಅಂಟಿಕೊಳ್ಳುತ್ತದೆ. ಇದರಿಂದ ರುಚಿಯಲ್ಲಿ ಯಾವುದೇ ಬದಲಾವಣೆಯಾಗಲ್ಲ.

711
ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ

ಸಿಟ್ರಸ್ ಹಣ್ಣುಗಳು ಅಥವಾ ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಕಡಿಮೆ ತಾಪಮಾನವು ಈ ಹಣ್ಣುಗಳ ಸುವಾಸನೆ ಮತ್ತು ರುಚಿಯನ್ನು ಕಡಿಮೆ ಮಾಡುತ್ತದೆ. ಹಣ್ಣು ತಿನ್ನುವ ಅರ್ಧ ಗಂಟೆ ಮುಂಚೆಯೇ ಫ್ರಿಡ್ಜ್‌ನಿಂದ ಹೊರಗೆ ಎತ್ತಿಡಿ. ಹಣ್ಣು ಕೋಣೆಯ ವಾತಾವರಣಕ್ಕೆ ಬಂದಾಗ ತಿಂದ್ರೆ ರುಚಿ ನಿಮಗೆ ಗೊತ್ತಾಗುತ್ತದೆ.

811
ಬಾಟಲಿಯಲ್ಲಿ ಕೆಟ್ಟ ವಾಸನೆಯೇ?

ಖಾಲಿ, ಗಾಳಿಯಾಡದ ಬಾಟಲಿಗಳನ್ನು ಸಂಗ್ರಹಿಸುವಾಗ, ಅದರಲ್ಲಿ ಕೆಟ್ಟ ವಾಸನೆ ಬರದಂತೆ ತಡೆಯಲು ಒಂದು ಚಿಟಿಕೆ ಉಪ್ಪನ್ನು ಹಾಕಿಡಿ. ಬಳಕೆ ಮಾಡುವ ಮುನ್ನ ಬಾಟೆಲ್‌ಗೆ ಅರ್ಧದಷ್ಟು ನೀರು ಸೇರಿಸಿ ಅಲ್ಲಾಡಿಸಿ ತೊಳೆಯಿರಿ. ಇದರಿಂದ ಬಾಟಲಿಗಳು ಸ್ವಚ್ಚವಾಗುತ್ತವೆ.

911
ಉಪ್ಪು ತೇವವಾಗಿದೆಯಾ?

ಉಪ್ಪು ಗಂಟುಗಂಟಾಗಿದ್ದರೆ, ಅದರಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಕೆಲವು ಅಕ್ಕಿ ಕಾಳುಗಳನ್ನು ಹಾಕಿಡಿ. ಈ ಅಕ್ಕಿಕಾಳುಗಳು ಉಪ್ಪಿನಲ್ಲಿರುವ ನೀರಿನಂಶವನ್ನು ಹೀರಿಕೊಳ್ಳುತ್ತದೆ. ಇಲ್ಲವಾದ್ರೆ ಉಪ್ಪಿನ ಪಾತ್ರೆಯೆಲ್ಲಾ ಉಪ್ಪಿನಂಶದಿಂದ ಒದ್ದೆಯಾಗಿ ಕೈಗೆಲ್ಲಾ ಅಂಟಿಕೊಳ್ಳುತ್ತದೆ.

1011
ಬಳಸಿದ ಎಣ್ಣೆ ಮರುಬಳಕೆ ಹೇಗೆ?

ಈ ಹಿಂದೆ ಅಡುಗೆಗೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಲು, ಆ ಎಣ್ಣೆಗೆ ಕಾಲು ತುಂಡು ಶುಂಠಿಯನ್ನು ಹಾಕಿ ಬಿಸಿ ಮಾಡಿ. ಇದು ಎಣ್ಣೆಯಲ್ಲಿ ಉಳಿದಿರುವ ರುಚಿ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ. ಬಳಕೆಯಾದ ಎಣ್ಣೆಯನ್ನು ಜರಡಿ ಹಿಡಿದು ಸ್ಟೋರ್ ಮಾಡಿಕೊಳ್ಳಿ. ಆದ್ರೆ ಎರಡಕ್ಕಿಂತ ಹೆಚ್ಚು ಬಾರಿ ಎಣ್ಣೆಯನ್ನು ಮರುಬಳಕೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದಲ್ಲ.

1111
ದೋಸೆ, ಇಡ್ಲಿ ಹಿಟ್ಟು

ದೋಸೆ ಅಥವಾ ಇಡ್ಲಿ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ಫ್ರಿಡ್ಜ್‌ನಲ್ಲಿಟ್ರೆ ವಾರವಾದ್ರೂ ಹಿಟ್ಟು ಹುಳಿಯಾಗಲ್ಲ. ಬೇಕಿದ್ದಾಗ ಮಾತ್ರ ದೊಡ್ಡಡಬ್ಬದಿಂದ ಚಿಕ್ಕಪಾತ್ರೆಗೆ ಹಾಕಿ ಬಳಸಿಕೊಳ್ಳಬಹುದು. ಇದರಿಂದ ಪದೇ ಪದೇ ಹಿಟ್ಟು ರುಬ್ಬುವ ಕೆಲಸ ತಪ್ಪಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories