ಗ್ಯಾಸ್ ಬೇಗ ಖಾಲಿಯಾಗುತ್ತಿದೆಯೇ? ಈ 5 ಸಿಂಪಲ್ ಟ್ರಿಕ್ಸ್ ಪಾಲಿಸಿದ್ರೆ 2 ವಾರ ಎಕ್ಸ್ಟ್ರಾ ಬರುತ್ತೆ

Published : Apr 01, 2026, 08:26 PM IST

Gas saving tips Kannada: ಅಡುಗೆ ಮಾಡುವಾಗ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳಿಂದಾಗಿ ತಿಂಗಳು ಪೂರ್ತಿ ಬರಬೇಕಾದ ಗ್ಯಾಸ್ ಕೇವಲ ಇಪ್ಪತ್ತು ದಿನಕ್ಕೇ ಖಾಲಿಯಾಗುತ್ತಿದೆ. ಆದರೆ ಕೆಲವೇ ಕೆಲವು ಸರಳ ಬದಲಾವಣೆಗಳು ಗ್ಯಾಸ್ ಅನ್ನು ಒಂದಿಷ್ಟು ದಿನಗಳ ಕಾಲ ಉಳಿಸಬಹುದು.

PREV
16
ಸುಲಭ ವಿಧಾನ ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಬೆಲೆ ಏರಿಕೆ ಮತ್ತು ಪೂರೈಕೆಯ ಸಮಸ್ಯೆಯಿಂದಾಗಿ ಗ್ಯಾಸ್ ಅನ್ನು ಮಿತವಾಗಿ ಬಳಸುವುದು ಅನಿವಾರ್ಯವಾಗಿದೆ. ನಿಮ್ಮ ಮನೆಯ ಸಿಲಿಂಡರ್ ಅತಿ ಹೆಚ್ಚು ದಿನ ಬರಬೇಕೆಂದರೆ ಈ ಕೆಳಗಿನ ಸುಲಭ ವಿಧಾನಗಳನ್ನು ಅನುಸರಿಸಿ.

26
ತಿಳಿಯುವುದು ಹೇಗೆ?

ಒಂದು ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಸಿಲಿಂಡರ್ ಸುತ್ತಲೂ 2-3 ನಿಮಿಷ ಸುತ್ತಿಡಿ. ನಂತರ ಬಟ್ಟೆ ತೆಗೆದಾಗ ಸಿಲಿಂಡರ್‌ನ ಯಾವ ಭಾಗ ಬೇಗ ಒಣಗುತ್ತದೆಯೋ ಅಲ್ಲಿ ಗ್ಯಾಸ್ ಖಾಲಿಯಾಗಿದೆ ಎಂದು ಅರ್ಥ. ಎಲ್ಲಿ ತೇವಾಂಶ ಉಳಿದಿದೆಯೋ ಅಲ್ಲಿ ಗ್ಯಾಸ್ ಇದೆ ಎಂದು ನೀವು ಸುಲಭವಾಗಿ ಪತ್ತೆಹಚ್ಚಬಹುದು.

36
ಬರ್ನರ್ ಸ್ವಚ್ಛವಾಗಿರಲಿ

ಗ್ಯಾಸ್ ಸ್ಟೌವ್‌ನ ಬರ್ನರ್ ರಂಧ್ರಗಳಲ್ಲಿ ಕೊಳೆ ಅಥವಾ ಎಣ್ಣೆ ಅಂಶವಿದ್ದರೆ ಉರಿ ಸರಿಯಾಗಿ ಬರುವುದಿಲ್ಲ. ಇದರಿಂದ ಗ್ಯಾಸ್ ವ್ಯರ್ಥವಾಗುತ್ತದೆ. ಆದ್ದರಿಂದ ನಿಯಮಿತವಾಗಿ ಬರ್ನರ್ ಅನ್ನು ಸ್ವಚ್ಛಗೊಳಿಸುತ್ತಿರಿ.

46
ಉರಿಯನ್ನು ಮಿತವಾಗಿಡಿ

ಅಡುಗೆ ಮಾಡುವಾಗ ಯಾವಾಗಲೂ ಗ್ಯಾಸ್ ಉರಿಯನ್ನು ಹೆಚ್ಚಾಗಿ ಇಡಬೇಡಿ. ಸಾಧ್ಯವಾದಷ್ಟು ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಅಡುಗೆ ಮಾಡುವುದರಿಂದ ಗ್ಯಾಸ್ ಉಳಿತಾಯವಾಗುತ್ತದೆ ಮತ್ತು ಆಹಾರವೂ ಚೆನ್ನಾಗಿ ಬೇಯುತ್ತದೆ.

56
ಪಾತ್ರೆ ಮುಚ್ಚಿ ಅಡುಗೆ ಮಾಡಿ

ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಯಾವಾಗಲೂ ತಟ್ಟೆ ಅಥವಾ ಮುಚ್ಚಳವನ್ನು ಮುಚ್ಚಿಡಿ. ಇದರಿಂದ ಹಬೆಯು (Steam) ಒಳಗೇ ಉಳಿದು ಆಹಾರ ಬೇಗ ಬೇಯುತ್ತದೆ, ಇದರಿಂದ ಗ್ಯಾಸ್ ಬಳಕೆಯೂ ಕಡಿಮೆಯಾಗುತ್ತದೆ.

66
ಕೊನೆಯದಾಗಿ..

ಸಿಲಿಂಡರ್ ಖಾಲಿಯಾಗುವ ಹಂತದಲ್ಲಿದ್ದಾಗ ಉರಿ ಸಣ್ಣದಾಗಿ ಬರುತ್ತದೆ. ಅಂತಹ ಸಮಯದಲ್ಲಿ ಒಂದು ಬಕೆಟ್‌ನಲ್ಲಿ ಬಿಸಿ ನೀರು ಹಾಕಿ ಅದರೊಳಗೆ ಸಿಲಿಂಡರ್ ಇಟ್ಟರೆ, ಒಳಗಿರುವ ಗ್ಯಾಸ್ ಪೂರ್ತಿಯಾಗಿ ಬಳಕೆಯಾಗುತ್ತದೆ. ಇದರಿಂದ ಇನ್ನೂ 1-2 ದಿನಗಳ ಕಾಲ ಗ್ಯಾಸ್ ಪಡೆಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories