ಪಾಪ ಕಣ್ರೀ, ಅನ್ಯಾಯವಾಗಿ ಆ ಹುಡುಗನ ಸಾಯಿಸಿಬಿಟ್ರು: ಘಟನೆ ವಿವರ ಬಿಚ್ಚಿಟ್ಟ ಮುನ್ನಾ

Published : Feb 24, 2026, 09:16 AM IST

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ನನ್ನು ಸ್ಪೆಷಲ್ ಕ್ಲಾಸ್ ಬಳಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಗಾಂಜಾ ನಶೆಯಲ್ಲಿದ್ದ ಅಪ್ರಾಪ್ತ ಬಾಲಕರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

PREV
15
ಪಾಪ ಕಣ್ರೀ..

ಪಾಪ ಕಣ್ರೀ, ಆ ಹುಡುಗನನ್ನು ಸಾಯಿಸಿಬಿಟ್ರು ಎಂದು ಘಟನೆಯ ವಿವರವನ್ನು ಸ್ಥಳೀಯ ನಿವಾಸಿಯಾಗಿರುವ ಮುನ್ನಾ ಎಂಬವರು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಗಾಂಜಾ ಹೊಡೆದು ತಿರುಗುವ ಅಪ್ರಾಪ್ತ ಹುಡುಗರಿಂದಲೇ ಈ ಕೃತ್ಯ ನಡೆದಿದೆ ಎಂದು ಮುನ್ನಾ ಅನುಮಾನ ವ್ಯಕ್ತಪಡಿಸಿದ್ದಾರೆ.

25
ಆಗಲೇ ಆ ಹುಡುಗ, ಕೈ ಕಾಲು ಬಿಟ್ಟಿದ್ರಿ.

ನಿನ್ನೆ ಸಂಜೆ 4 ಗಂಟೆಯಿಂದಲೇ ಮೂರ್ನಾಲ್ಕು ಹುಡುಗರು ಸ್ಕೂಟಿ ತೆಗೆದುಕೊಂಡು ಓಡಾಡುತ್ತಿದ್ದರು. ಇವರ ಜೊತೆಯಲ್ಲಿ ಸ್ಕೂಲ್ ಹುಡುಗರಿದ್ದರು. ಅವರೇ ಸೇರಿ ಆ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ಸಂಕೇತ್‌ನನ್ನು ನಾನೇ ಶಾಲೆಯವರೆಗೂ ಎತ್ಕೊಂಡು ಬಂದೆ. ಆಗಲೇ ಆ ಹುಡುಗ, ಕೈ ಕಾಲು ಬಿಟ್ಟಿದ್ರಿ. ಸ್ವಲ್ಪ ನೀರು ಕೂಡ ಕುಡಿಯಲು ಆಗಲಿಲ್ಲ. ಶಾಲೆ ಹೆಡ್ ಮಾಸ್ಟರ್ ನಾವೆಲ್ಲ ಸೇರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದೆವು ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ಹೇಳಿದರು.

35
ಏರಿಯಾದಲೆಲ್ಲಾ ದಾಂಧಲೆ

ಮುಂದುವರಿದು ಮಾತನಾಡಿದ ಮುನ್ನಾ, ಈ ಭಾಗದಲ್ಲಿ 14 ರಿಂದ 15 ವರ್ಷದ ಹುಡುಗರು ಗಾಂಜಾ ಸೇವಿಸುತ್ತಾರೆ. ಶಾಲೆಗೆ ಹೋಗ್ತೀವಿ ಅಂತಾರೆ ಆದರೆ ಯಾರು ಶಾಲೆಗೆ ಹೋಗಲ್ಲ . ಗಾಂಜಾ ಸೇವಿಸಿ ಆ ನಶೆಯಲ್ಲಿ ಏರಿಯಾದಲೆಲ್ಲಾ ದಾಂಧಲೆ ಮಾಡ್ತಾರೆ. ಬೇಕಾಬಿಟ್ಟಿ ಬೈಕ್ ಚಲಾಯಿಸುತ್ತಾರೆ ಕೇಳಿದರೆ ನಿಮ್ಮ ಅಪ್ಪಂದ ರಸ್ತೆ ಎಂದು ನಮ್ಮೆಲ್ಲರ ಜೊತೆ ಜಗಳಕ್ಕೆ ಬರ್ತಾರೆ. ಪಾಪ ಕಣ್ರೀ ಆ ಹುಡುಗನನ್ನ ಅನ್ಯಾಯವಾಗಿ ಸಾಯಿಸಿಬಿಟ್ಟ್ರು ಎಂದು ಹೇಳಿದರು.

45
ಮುಖ್ಯೋಪಾಧ್ಯಯ ಶಿವರಾಮ್

ಸಂಕೇತ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯೋಪಾಧ್ಯಯ ಶಿವರಾಮ್, ಪ್ರತಿದಿನ ಸಂಜೆ 6.30ರವರೆಗೆ ಕ್ಲಾಸ್ ತೆಗೆದುಕೊಳ್ಳುತ್ತೇವೆ. SSLC ಪೂರ್ವಸಿದ್ಧತಾ ಪರೀಕ್ಷೆಗಳು ಸಮೀಪದ ಹಿನ್ನೆಲೆ ಪೋಷಕರ ಒಪ್ಪಿಗೆ ಮೇರೆಗೆ ರಾತ್ರಿ 9.30ರವರೆಗೆ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಪೋಷಕರೇ ಬಂದೇ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರ ಎಂದರು.

ಇದನ್ನೂ ಓದಿ: Shivamogga: ಬೆಳಗ್ಗೆ ದೇವರಿಗೆ ಕೈ ಮುಗಿದು ಹೋದವನು ಹಿಂತಿರುಗಲಿಲ್ಲ: ಸಂಕೇತ್ ಪೋಷಕರ ಕಣ್ಣೀರು

55
ಯಾರು ಆ ಮೂವರು?

ನಿನ್ನೆಯ ಗಣಿತ ವಿಷಯದ ಸ್ಪೆಷಲ್ ಕ್ಲಾಸ್‌ನಲ್ಲಿ 33 ವಿದ್ಯಾರ್ಥಿಗಳಿದ್ರು. ಶಾಲೆಯ ಕಾಂಪೌಂಡ್‌ನಿಂದ ಹೊರ ಹೋದ್ಮೇಲೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿದವರ ಪೈಕಿ ಓರ್ವ SSLC ಫೇಲ್ ಆಗಿಲ್ಲ ಮತ್ತೊಮ್ಮೆ ಪರೀಕ್ಷೆಗೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಇನ್ನೊಬ್ಬ 9ನೇ ತರಗತಿ ಫೇಲಾಗಿರುವ ವಿದ್ಯಾರ್ಥಿ. ಮತ್ತೋರ್ವ ನಮ್ಮ ವಿದ್ಯಾರ್ಥಿ ಅಲ್ಲ. ಶಾಲೆಯ ಪಕ್ಕದಲ್ಲಿಯೇ ಮೈದಾನವಿದ್ದು, ಮನೆಗೆ ಸಮೀಪವಾಗುವ ಕಾರಣ ಮಕ್ಕಳು ಇಲ್ಲಿಂದಲೇ ಹೋಗುತ್ತಾರೆ ಎಂದು ಮುಖ್ಯೋಪಾಧ್ಯಯ ಶಿವರಾಂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು

Read more Photos on
click me!

Recommended Stories