ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ, ಅವನ ಜೊತೆಯಲ್ಲಿದ್ದವರೇ ಹಲ್ಲೆ ಮಾಡಿದ್ದಾರೆ ಎಂದು ಮೃತನ ಅಜ್ಜ ಹನುಮಂತಪ್ಪ ಆರೋಪಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.
ಬೆಳಗ್ಗೆ ಪೂಜೆ ಮಾಡ್ತಿದ್ದಾಗ ಮೊಮ್ಮಗ ಬಂದು ಕೈಮುಗಿದು ಹೋಗಿದ್ದನು. ರಾತ್ರಿ 9 ಆದರೂ ರಸ್ತೆಯಲ್ಲಿ ಕಾಯ್ತಿದ್ರು. ಯಾರಿಗೆ ಕಾಯ್ತಾ ಇದ್ದೀಯಾ ಅಂದೆ, ಮೊಮ್ಮಗ ಬಂದಿಲ್ಲ ಅಂದ್ರು. ನನ್ನ ಮೊಮ್ಮಗ ಯಾರ ತಂಟೆಗೂ ಹೋಗಲ್ಲ. ಜೊತೆಲಿಯದ್ದವರೂ ಹೊಡೆದಿದ್ದಾರೆ ತನಿಖೆ ನಡೆಯಲಿ ಎಂದು ಮೃತ ಸಂಕೇತ್ ಅಜ್ಜ ಹನುಮಂತಪ್ಪ ಹೇಳಿದ್ದಾರೆ.
25
ಸ್ಪೆಷಲ್ ಕ್ಲಾಸ್
ಶಾಲೆಯಿಂದ ಹತ್ತಿರದಲ್ಲೇ ಮನೆ ಇರೋದರಿಂದ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಅವರೇ ಬರುತ್ತಿದ್ದರು. ನನ್ನ ಮೊಮ್ಮಗ ಯಾರಿಗೂ ತೊಂದರೆ ಮಾಡಲ್ಲ. ಶಾಲೆಗೆ ಹೋದವನು ಅರ್ಧ ಗಂಟೆ ಹೆಚ್ಚು-ಕಡಿಮೆ ಬರಬಹುದು ಎಂದುಕೊಂಡಿದ್ದೀವಿ. ರಾತ್ರಿ 9ರ ವೇಳೆ ಕೆಲವರು ಬಂದು ನಿಮ್ಮ ಮೊಮ್ಮಗನಿಗೆ ಹೊಡೆದಿದ್ದಾರೆ ಬನ್ನಿ ಎಂದು ಕರೆದುಕೊಂಡು ಹೋದರು. ಪ್ರಕರಣದ ಸಂಪೂರ್ಣ ತನಿಖೆ ಆಗ್ಬೇಕು ನಮಗೆ ನ್ಯಾಯ ಸಿಗಬೇಕು ಎಂದು ಹನುಮಂತಪ್ಪ ಆಗ್ರಹಿಸಿದ್ದಾರೆ.
35
ಹನುಮಂತಪ್ಪ ಕಣ್ಣೀರು
ಈ ಭಾಗದಲ್ಲಿ ಗಾಂಜಾ ಹೊಡಿಯೋರು ಜಾಸ್ತಿ ಇದ್ದಾರೆ ಕಂಟ್ರೋಲ್ ಯಾರು ಮಾಡಬೇಕು ನಾವು ಮಾಡಲಿಕ್ಕೆ ಬರುತ್ತಾ ಎಂದು ಪ್ರಶ್ನೆ ಮಾಡಿದ ಹನುಮಂತಪ್ಪ, ಎಣ್ಣೆ ಹಾವಳಿ ಹೆಚ್ಚಾಗಿದೆ ಕೇಳಲಿಕ್ಕೆ ಹೋದರೆ ಯಾರು ಬರಲ್ಲ . ಸಣ್ಣ ಮಕ್ಕಳು ಯಾರು ತಂಟೆಗೂ ಹೋಗುವುದಿಲ್ಲ. ಈ ಭಾಗದಲ್ಲಿ ಎರಡು ಗಂಟೆ ರಾತ್ರಿಯಾದರೂ ಗಾಂಜಾ ಇಸ್ಪೀಟು ಎಣ್ಣೆ ಎಲ್ಲವೂ ಇದೆ.
ನನ್ನ ಮೊಮ್ಮಗನ ಮೇಲೆ ಜೊತೆಯಲ್ಲಿರುವ ಹುಡುಗರೇ ಅಟ್ಯಾಕ್ ಮಾಡಿದ್ದಾರೆ. ಮಕ್ಕಳ ನಡುವೆ ಸಣ್ಣಪುಟ್ಟ ಕಿರಿಕ್ ನಡೆಯುತ್ತವೆ ಅವುಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಚೆನ್ನಾಗಿ ಮಾರ್ಕ್ಸ್ ತೆಗೆದ್ರೆ ಬೈಕ್ ಕೊಡಸ್ತೀನಿ ಎಂದಿದ್ದೆ. ಇತರ ಮಾಡಿಬಿಟ್ಟರೆ ಎಷ್ಟು ಹೊಟ್ಟೆ ಉರಿಯುತ್ತೆ ನೋಡಿ ಎಂದು ಹನುಮಂತಪ್ಪ ಕಣ್ಣೀರು ಹಾಕಿದರು.
ಸಂಕೇತ್ ತಂದೆ ಕುಮಾರ್ ಪ್ರತಿಕ್ರಿಯಿಸಿ, 9 ಗಂಟೆವರೆಗೂ ಸ್ಕೂಲ್ ಇದೆ ಎಂದು ಮನೆಯಿಂದ ಹೋಗಿದ್ದ. ಯಾರೋ ಮುಸ್ಲಿಂ ಹುಡುಗರು ಹೊಡೆದಿದ್ದಾರೆ ಎಂದು ಜನರು ಹೇಳಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ನನ್ನ ಮಗನನ್ನು ಕೊಂದದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಒಂಬತ್ತು ಗಂಟೆ ಅವರಿಗೂ ಸ್ಪೆಷಲ್ ಕ್ಲಾಸ್ ಇತ್ತು ಆ ಸಂದರ್ಭದಲ್ಲಿ ನಡೆದಿದೆ. ಬೆಳಗ್ಗೆ 8:30 ಕ್ಕೆ ಶಾಲೆಗೆ ಹೋಗಿದ್ದ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ ಅಷ್ಟ. ಅಶೋಕ್ ಎಂಬುವರ ಮಗ ಗಿರೀಶ್ ಮೇಲೆಯೂ ಹಲ್ಲೆ ಮಾಡಿದ್ದಾರೆ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಮ್ಮ ಹುಡುಗ ಜಗಳ ಮಾಡುವ ಅಲ್ಲ ಆತ ತುಂಬಾ ಸೈಲೆಂಟ್. ಶಾಲೆ ಮತ್ತು ಮನೆ ಆಯ್ತು. ಮನೆಯಿಂದ ಎಲ್ಲಿಯೂ ಹೊರಗೆ ಹೋಗಲ್ಲ ಎಂದು ಹೇಳಿದರು.