ಜವರಪ್ಪ ಎಂಬುವವರ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿತ್ತು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು, ಮೃತನ ಪತ್ನಿ ಅಮೃತಾ ಹಾಗೂ ಆಕೆಯ ಪ್ರಿಯಕರ ಸಿದ್ದೇಶ್ ಈ ಕೃತ್ಯದ ಹಿಂದಿದ್ದಾರೆ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಸಿದ್ದೇಶ್‌ನನ್ನು ಬಂಧಿಸಲಾಗಿದೆ.
ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೆಗಾಲ ಗ್ರಾಮದ ನಿವಾಸಿ ಜವರಪ್ಪ ಎಂಬವರ ಕೊಲೆ ಪ್ರಕರಣದ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿ ಸಿದ್ದೇಶ್ ಎಂಬಾತನನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
25
ಮನೆಗೆ ಕರೆದುಕೊಂಡು ಬಂದಿದ್ದ!
ಆರೋಪಿ ಸಿದ್ದೇಶ್ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಕೊಲೆಯಾದ ಜವರಪ್ಪ ಕೂಲಿ ಕೆಲಸ ಮಾಡಿಕೊಂಡಿದ್ದರು. ಒಂದು ದಿನ ಆರೋಪಿ ಸಿದ್ದೇಶ್ ನನ್ನು ಜವರಪ್ಪ ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು.ಈ ವೇಳೆ ಜವರಪ್ಪನ ಹೆಂಡತಿ ಅಮೃತಾಳ ಪರಿಚಯ ಸಿದ್ದೇಶ್‌ಗೆ ಆಗುತ್ತದೆ. ಈ ಭೇಟಿ ಬಳಿಕ ಇಬ್ಬರು ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದರು.
35
ಕೊಲೆಗೆ ಪ್ಲಾನ್
ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುವ ವಿಷಯವಾಗಿಯೇ ಅಮೃತಾ ಮತ್ತು ಜವರಪ್ಪ ನಡುವೆ ಜಗಳ ನಡೆಯುತ್ತಿತ್ತು. ಏಪ್ರಿಲ್ 14ರಂದು ಅಮೃತಾ ಮಕ್ಕಳೊಂದಿಗೆ ತವರಿಗೆ ಹೋಗಿದ್ದಳು. ಈ ವೇಳೆ ಮಕ್ಕಳನ್ನು ನೋಡಲು ಬರುತ್ತೇನೆ ಎಂದು ಅಮೃತಾಳಿಗೆ ಜವರಪ್ಪ ತಿಳಿಸಿದ್ದರು. ಇತ್ತ ಸಿದ್ದೇಶ್‌ಗೆ ಗಂಡನ ಚಲನವಲನದ ಮಾಹಿತಿಯನ್ನು ಅಮೃತಾ ನೀಡುತ್ತಿದ್ದಳು. ಜವರಪ್ಪ ಇದ್ರೆ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಎಂದು ಇಬ್ಬರು ಸೇರಿ ಜವರಪ್ಪನ ಕೊಲೆಗೆ ಪ್ಲಾನ್ ಮಾಡಿದ್ದರು ಎಂದು ಎಸ್‌ಪಿ ಹೇಳಿದ್ದಾರೆ.
ಮಕ್ಕಳನ್ನು ನೋಡಲು ಹೊರಟಿದ್ದ ಜವರಪ್ಪ ಅವರಿಗೆ ಮಾರ್ಗಮಧ್ಯೆ ಭೇಟಿಯಾದ ಸಿದ್ದೇಶ್, ತನ್ನ ಕಾರಿನಲ್ಲಿ ಬಾರ್‌ಗೆ ಕರೆದುಕೊಂಡು ಹೋಗಿದ್ದಾನೆ. ಕಂಠ ಪೂರ್ತಿ ಕುಡಿಸಿ ಮನೆಗೆ ಬಿಡುವುದಾಗಿ ಹೇಳಿ ಮಾರ್ಗಮಧ್ಯೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತ ದೇಹವನ್ನು ರಸ್ತೆಯಲ್ಲಿ ಬಿಸಾಡಿ ಅಪಘಾತ ಎಂದು ಬಿಂಬಿಸಲು ಮುಂದಾಗುತ್ತಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹದ ಮೇಲಿನ ಗಾಯದ ಗುರುತನ್ನ ಗಮನಿಸಿ ಕೊಲೆ ಶಂಕೆ ವ್ಯಕ್ತಪಡಿಸುತ್ತಾರೆ.
ಕೊಲೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆಹೆ ಎರಡು ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆ ಅವಧಿಯಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಆರೋಪಿ ಸಿದ್ದೇಶ್ ನನ್ನ ಬಂದಿಸಲಾಗಿದೆ. ಈ ಕೊಲೆಯ ಸಂಚಿನಲ್ಲಿ ಅಮೃತಾಳ ಕೈವಾಡವು ಇದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ. ಇತ್ತ ಜವರಪ್ಪ ಸೋದರ ರವಿ ಸಹ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.