ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದೆ ಎರಡನೇ ಮದುವೆಗೆ ಸಿದ್ಧನಾಗಿದ್ದ ಹರಿಪ್ರಸಾದ್‌ಗೆ ಆತನ ಮೊದಲ ಪತ್ನಿ ಲೇಪಾಕ್ಷಿ ಶಾಕ್ ನೀಡಿದ್ದಾರೆ. ತಾಳಿ ಕಟ್ಟುವ ಸಮಯದಲ್ಲಿ ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಆಗಮಿಸಿದ ಆಕೆ, ನಡೆಯುತ್ತಿದ್ದ ಮೋಸದ ಮದುವೆಯನ್ನು ತಡೆದಿದ್ದಾರೆ.
ಮದುವೆಯನ್ನು ಕಾನೂನಾತ್ಮಕವಾಗಿ ಇತ್ಯರ್ಥ ಮಾಡಿಕೊಳ್ಳದೇ ಎರಡನೇ ಕಲ್ಯಾಣಕ್ಕೆ ಸಿದ್ಧವಾಗಿದ್ದ ವರನಿಗೆ ಮೊದಲ ಪತ್ನಿ ಶಾಕ್ ಕೊಟ್ಟಿದ್ದಾಳೆ. ತಾಳಿ ಕಟ್ಟುವ ಸಮಯಕ್ಕೆ ಬಂದ ಪತ್ನಿ ಮದುವೆ ನಿಲ್ಲಿಸಿದ್ದಾರೆ. ನಡೆಯುತ್ತಿದ್ದ ಮೋಸದ ಮದುವೆಯನ್ನು ನಿಲ್ಲಿಸಿದ್ದರಿಂದ ಇಡೀ ಕಲ್ಯಾಣಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
25
8ನೇ ಕ್ಲಾಸ್‌ನಿಂದಲೇ ಲವ್
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಹರಿಪ್ರಸಾದ್, 2014ರಲ್ಲಿ ಲೇಪಾಕ್ಷಿ ಎಂಬವರನ್ನು ಮದುವೆಯಾಗಿದ್ದನು. 8ನೇ ಕ್ಲಾಸ್‌ನಿಂದಲೇ ಲೇಪಾಕ್ಷಿ ಮತ್ತು ಹರಿಪ್ರಸಾದ್ ಪ್ರೀತಿಸುತ್ತಿದ್ದರು. ನಂತರ ಮದುವೆಯಾಗಿದ್ದ ಇಬ್ಬರು, 10 ವರ್ಷ ಸಂಸಾರ ನಡೆಸಿದ್ದರು. ನಂತರ ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರು ಬೇರೆಯಾಗಿದ್ದರು.
35
ಎರಡನೇ ಮದುವೆ
ಇದೀಗ ಡಿವೋರ್ಸ್ ಪಡೆದುಕೊಳ್ಳದೇ ಹರಿಪ್ರಸಾದ್ ಎರಡನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಪುಣ್ಯಶ್ರೀ ಎಂಬಾಕೆ ಜೊತೆ ಹರಿಪ್ರಸಾದ್ ಸಪ್ತಪದಿ ತುಳಿಯಲು ಸಿದ್ಧತೆ ಮಾಡಿಕೊಂಡಿದ್ದನು. ಇಂದು ಎಡೆಯೂರಿನ ಎಸ್‌ಎಲ್ ಎನ್ ಕಲ್ಯಾಣ ಮಂಟಪದಲ್ಲಿ ಹರಿಪ್ರಸಾದ್ ಮದುವೆ ನಡೆಯುತ್ತಿತ್ತು.
ಹರಿಪ್ರಸಾದ್ ಮದುವೆಯ ವಿಷಯ ತಿಳಿದ ಲೇಪಾಕ್ಷಿ ಕಲ್ಯಾಣಮಂಟಪಕ್ಕೆ ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸರ ಜೊತೆ ಆಗಮಿಸಿದ್ದರು. ತಮಗೆ ಡಿವೋರ್ಸ್ ನೀಡದೇ ಮದುವೆಯಾಗುತ್ತಿರುವ ವಿಷಯವನ್ನು ವಧುವಿನ ಪೋಷಕರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ವಧುವಿನ ಪೋಷಕರು ಸಹ ಮದುವೆ ನಿಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಲೇಪಾಕ್ಷಿ, ಕೌಟುಂಬಿಕ ಕಲಹ ಹಿನ್ನೆಲೆ ಹರಿಪ್ರಸಾದ್‌ನಿಂದ ದೂರವಾಗಿದ್ದೆ. ಆದ್ರೆ ಇದೀಗ ನನಗೆ ಡಿವೋರ್ಸ್ ನೀಡದೇ ಎರಡನೇ ಮದುವೆಯಾಗಲು ಮುಂದಾಗಿದ್ದರು. ಇಂದು ಮದುವೆಯನ್ನು ನಿಲ್ಲಿಸಿ ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಮದುವೆ ನಿಂತಿದ್ದರಿಂದ ಬಂದಿದ್ದ ಅತಿಥಿಗಳೆಲ್ಲಾ ಹಿಂದಿರುಗಿದ್ದಾರೆ.