ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರು ಕುಡಿದ ಮತ್ತಿನಲ್ಲಿ ತಮ್ಮ ಸ್ಕೂಟಿಯಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಶ್ನಿಸಿದ ಕಾರ್ ಚಾಲಕನ ಮೇಲೆ ಚೈನ್‌ನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಹುಳಿಮಾವು ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ಮಧ್ಯರಾತ್ರಿ ಬೆಂಗಳೂರಿನಲ್ಲಿ ಯುವತಿಯರಿಬ್ಬರು ನಡುರಸ್ತೆಯಲ್ಲಿ ಕುಡಿದು ರಂಪಾಟ ಮಾಡಿದ್ದಾರೆ. ಕೋರಮಂಗಲದ ಲೀಸಾ ಮತ್ತು ಜೆಪಿ ನಗರದ ಮ್ಯಾಥ್ಯೂ ಎಂಬ ಇಬ್ಬರು ಯುವತಿಯರು ನಶೆಯಲ್ಲಿ ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯಪದಗಳನ್ನು ಬಳಸಿ ನಿಂದಿಸಿದ್ದಾರೆ.
25
ಕಾರ್‌ಗೆ ಡಿಕ್ಕಿ ಹೊಡೆದ ಜಗಳ
ಯುವತಿಯರಿಬ್ಬರು ರಾತ್ರಿ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಬಂದಿದ್ದರು. ಹೋಟೆಲ್‌ನಿಂದ ಹಿಂದಿರುಗಿ ತೆರಳುವಾಗ ಹುಳಿಮಾವು ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಕಾರ್‌ಗೆ ಹಿಂದಿನಿಂದ ತಮ್ಮ ಸ್ಕೂಟಿಯಿಂದ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದ ಕಾರ್ ಚಾಲಕನ ಮೇಲೆಯೇ ಯುವತಿಯರು ಹಲ್ಲೆ ಮಾಡಲು ಮುಂದಾಗಿದ್ದಾರೆ
35
ಕೈಗೆ ಚೈನ್ ಸುತ್ತಿಕೊಂಡು ಕಾರ್ ಚಾಲಕನ ಮೇಲೆ ಹಲ್ಲೆ
ಓರ್ವ ಯುವತಿ ಕೈಗೆ ಚೈನ್ ಸುತ್ತಿಕೊಂಡು ಕಾರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಯುವತಿಯರನ್ನು ತಡೆದಿದ್ದಾರೆ. ನಶೆಯ ಮತ್ತಿನಲ್ಲಿದ್ದ ಯುವತಿಯರು, ಚಾಲಕ ಸೇರಿದಂತೆ ಸ್ಥಳೀಯರನ್ನು ಸಹ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಯುವತಿಯರ ಹಾರಾಟ ಹೆಚ್ಚಾದಂತೆ ಸ್ಥಳೀಯರು ಹುಳಿಮಾವು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯುವತಿಯರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಇಬ್ಬರು ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕ್ಯಾಬ್ ಚಾಲಕ ಅಹ್ಮದ್, ನಾನು ಗ್ರಾಹಕರನ್ನು ಪಿಕಪ್ ಮಾಡೋದ್ದಕ್ಕೆ ಹೋಗ್ತಿದ್ದೆ. ಹಿಂದಿನಿಂದ ಬಂದು ಬೈಕ್ ನಿಂದ ಕ್ಯಾಬ್‌ಗೆ ಟಚ್ ಮಾಡಿದ್ರು. ಇಬ್ಬರು ಯುವತಿಯರು ಬೈಕ್ ನಲ್ಲಿ ಬರ್ತಾ ಇದ್ರು. ಗಾಡಿಗೆ ಡ್ಯಾಮೇಜ್ ಆಗಿದ್ದನ್ನ ಕಟ್ಟಿಕೊಡಿ ಅಂತ ಕೇಳಿದೆ. ಈ ಸಂದರ್ಭದಲ್ಲಿ ಇಬ್ಬರು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋಗೋಕೆ ನೋಡಿದರು. ಕೂಡಲೇ ಸ್ಥಳೀಯರೆಲ್ಲಾ ಸೇರಿ ಅವರನ್ನ ಹಿಡಿದುಕೊಂಡಿದ್ದರು. ನಾನು ಕೀ ತೆಗೆಯಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ರು ಚೈನ್ ಸುತ್ತಿಕೊಂಡು ಮುಖ, ಕೈ, ಬೆನ್ನಿನ ಮೇಲೆ ಹಲ್ಲೆ ಮಾಡಿದ್ರು. ಆ ಸಂದರ್ಭದಲ್ಲಿ ಸ್ಥಳೀಯರೆಲ್ಲಾ ಸೇರಿ ನನಗೆ ಸಪೋರ್ಟ್ ಮಾಡಿದ್ರು. ಈ ಸಂಬಂಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.