Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ

Published : Feb 08, 2026, 10:06 AM IST

ಬಳ್ಳಾರಿಯ ಸಿರುಗುಪ್ಪದಲ್ಲಿ ಅಪರೂಪದ ವಿವಾಹವೊಂದು ಜರುಗಿದೆ. ಹುಟ್ಟಿನಿಂದಲೇ ಮಾತು ಬಾರದ, ಕಿವಿ ಕೇಳದ ಸಿರುಗುಪ್ಪದ ವೆಂಕಟ್ ಅಯ್ಯಪ್ಪ ಮತ್ತು ಶಿವಮೊಗ್ಗದ ಕೀರ್ತನಾ ಅವರು ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಮೌನ ಹೃದಯಗಳ ಮದುವೆಗೆ ನೂರಾರು ಜನರು ಸಾಕ್ಷಿಯಾಗಿದ್ದಾರೆ.

PREV
14
ಅಪರೂಪದ ಮದುವೆ

ದೇವರು ಗಂಡಿಗೊಂಡು ಹೆಣ್ಣು ಮತ್ತು ಹೆಣ್ಣಿಗೊಂದು ಗಂಡನ್ನು ಸೃಷ್ಟಿಸಿರುತ್ತಾನೆ ಎಂಬ ಮಾತಿದೆ. ಜೀವನದಲ್ಲಿ ಮದುವೆಯೇ ಅಗಲ್ಲ ಎಂಬ ಜಿಗುಪ್ಸೆಯಲ್ಲಿರುವ ಜನರಿಗೆ ಇಂತಹ ಮಾತೊಂದನ್ನು ಹೇಳಲಾಗುತ್ತದೆ. ಬಳ್ಳಾರಿಯ ಸಿರುಗುಪ್ಪದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ.

24
ಮೌನವೇ ಇವರ ಸಂಭಾಷಣೆ

ಸಿರುಗುಪ್ಪದ ಎ.ವಿ.ಎಸ್. ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ವಿವಾಹ ನೆರವೇರಿದೆ. ಅಪರೂಪದ ಮದುವೆಯ ಜೋಡಿಗಳಾದ ಕೆ.ಎಚ್‌.ವೆಂಕಟ್ ಅಯ್ಯಪ್ಪ ಮತ್ತು ಡಿ.ಆರ್.ಕೀರ್ತನಾ ಅವರಿಗೆ ಮಾತು ಬರಲ್ಲ ಮತ್ತು ಕಿವಿಯೂ ಕೇಳಲ್ಲ. ಹಾಗಾಗಿ ಇಬ್ಬರ ನಡುವೆ ಹೃದಯದ ಭಾಷೆ ಮಾತನಾಡಿದ್ರೆ, ಮೌನವೇ ಇವರ ಸಂಭಾಷಣೆಯಾಗಿದೆ.

34
ವೆಂಕಟ್ ಅಯ್ಯಪ್ಪ Weds ಕೀರ್ತನಾ

ಕೆ.ಎಚ್.ವೆಂಕಟ್ ಅಯ್ಯಪ್ಪ ಅವರು ಸಿರಗುಪ್ಪ ಮೂಲದವರಾದ್ರೆ, ಕೀರ್ತನಾ ಶಿವಮೊಗ್ಗ ಜಿಲ್ಲೆಯ ನಿವಾಸಿ. ಹುಟ್ಟಿನಿಂದಲೇ ಇಬ್ಬರಿಗೂ ಮಾತು ಬರುತ್ತಿರಲಿಲ್ಲ ಮತ್ತು ಕಿವಿಯೂ ಕೇಳಿಸುತ್ತಿರಲಿಲ್ಲ. ಇವರ ಸಮಸ್ಯೆ ತಿಳಿದ ಸ್ನೇಹಿತರು ಮತ್ತು ಸಂಬಂಧಿಕರನ್ನು ಇಬ್ಬರನ್ನು ಒಂದು ಮಾಡಿದ್ದಾರೆ.

ಇದನ್ನೂ ಓದಿ: Bengaluru: ಅಸಭ್ಯ ಸನ್ನೆ, ಅವಾಚ್ಯ ಪದ; ಕೈಗೆ ಚೈನ್ ಸುತ್ಕೊಂಡು ಯುವತಿಯರಿಂದ ಚಾಲಕನ ಮೇಲೆ ಹಲ್ಲೆ

44
ಮದುವೆಗೆ ನೂರಾರು ಜನರು ಸಾಕ್ಷಿ

ಕಳೆದೊಂದು ವರ್ಷದಿಂದ ವೆಂಕಟ್ ಅಯ್ಯಪ್ಪ ಮತ್ತು ಕೀರ್ತನ ಮದುವೆ ಬಗ್ಗೆ ಇಬ್ಬರ ಕುಟುಂಬದಲ್ಲಿ ಮದುವೆ ಮಾತುಕತೆ ನಡೆಯುತ್ತಿತ್ತು. ಇದೀಗ ಎರಡು ಕುಟುಂಬಗಳ ಸಮ್ಮುಖದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಹೃದಯದ ಭಾಷೆ ಮೌನವೇ ಸಂಭಾಷಣೆಯಾಗಿರೋ ಮದುವೆಗೆ ನೂರಾರು ಜನರು ಸಾಕ್ಷಿಯಾಗಿದ್ದಾರೆ. ತೃತೀಯ ಲಿಂಗಿಗಳು ಸಹ ಆಗಮಿಸಿ ನವದಂಪತಿಗೆ ಆಶೀರ್ವದಿಸಿದ್ದಾರೆ.

ಇದನ್ನೂ ಓದಿ: ಊರನ್ನೇ ಬೆಚ್ಚಿ ಬೀಳಿಸಿದ 37ರ ಮಹಿಳೆ, 17ರ ಹುಡುಗನ ಲವ್ ಸ್ಟೋರಿ; ಆಂಟಿ ಎಸ್ಕೇಪ್, ಪೋರ ಲಾಕ್

Read more Photos on
click me!

Recommended Stories