ಭಾರತದ ಒಂದೇ ಸಿಟಿ, ಎರಡು ರಾಜ್ಯಗಳಿಗೆ ರಾಜಧಾನಿ! ಯಾವುದು ಆ ನಗರ? ಇದರ ಹಿಂದಿನ ಕಥೆಯೇನು?

Published : Aug 20, 2026, 04:18 PM IST

ನಮ್ಮ ದೇಶದಲ್ಲಿ ಎರಡು ರಾಜ್ಯಗಳಿಗೆ ಒಂದೇ ರಾಜಧಾನಿ ಇದೆ. ಆ ರಾಜ್ಯಗಳು ಯಾವುವು? ಒಂದೇ ನಗರವನ್ನು ಎರಡು ರಾಜ್ಯಗಳು ರಾಜಧಾನಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಹಾಗಾದರೆ ಆಡಳಿತ ಯಾರ ಕೈಯಲ್ಲಿದೆ?

PREV
15
ಭಾರತದ ಒಂದೇ ನಗರ, ಎರಡು ರಾಜ್ಯಗಳ ರಾಜಧಾನಿ

ಎರಡು ಬೇರೆ ಬೇರೆ ರಾಜ್ಯಗಳು, ಎರಡು ಬೇರೆ ಬೇರೆ ಸರ್ಕಾರಗಳು. ಆದರೆ ರಾಜಧಾನಿ ಮಾತ್ರ ಒಂದೇ. ಇದು ಬೇರೆಲ್ಲೂ ಅಲ್ಲ, ನಮ್ಮ ದೇಶದಲ್ಲೇ ಇದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳೆರಡಕ್ಕೂ ಚಂಡೀಗಢ ಒಂದೇ ರಾಜಧಾನಿಯಾಗಿದೆ. ಅಷ್ಟಕ್ಕೂ, ಎರಡು ರಾಜ್ಯಗಳಿಗೆ ಒಂದೇ ನಗರ ರಾಜಧಾನಿಯಾಗಿದ್ದು ಹೇಗೆ? ಭಾರತದ ಮೊದಲ ಯೋಜಿತ ನಗರವೆಂದು ಕರೆಯಲ್ಪಡುವ ಚಂಡೀಗಢದ ಕಥೆಯೇನು? ಈ ನಗರ ಯಾಕೆ ಇಷ್ಟು ವಿಶೇಷ? ಈ ಬಗ್ಗೆ ಈಗ ತಿಳಿಯೋಣ.

25
ದೇಶ ವಿಭಜನೆಯ ನಂಟು

ಈ ಪ್ರದೇಶದಲ್ಲಿ ಪ್ರಸಿದ್ಧ ಚಂಡಿ ಮಂದಿರ (ದುರ್ಗಾ ದೇವಿಯ ದೇವಸ್ಥಾನ) ಮತ್ತು ಒಂದು 'ಗಢ' (ಕೋಟೆ) ಇದೆ. ಇವೆರಡನ್ನೂ ಸೇರಿಸಿ 'ಚಂಡೀಗಢ' ಎಂದು ಹೆಸರಿಡಲಾಗಿದೆ. 1947ರಲ್ಲಿ ದೇಶ ವಿಭಜನೆಯಾದಾಗ, ಪಂಜಾಬ್‌ನ ಹಳೆಯ ರಾಜಧಾನಿ 'ಲಾಹೋರ್' ಪಾಕಿಸ್ತಾನಕ್ಕೆ ಸೇರಿತು. ಆಗ ಪಂಜಾಬ್‌ಗೆ ಹೊಸ ರಾಜಧಾನಿ ಬೇಕಾಯಿತು. ಆಗಲೇ ಚಂಡೀಗಢವನ್ನು ರಾಜಧಾನಿಯಾಗಿ ನಿರ್ಮಿಸಲು ತೀರ್ಮಾನಿಸಲಾಯಿತು.

35
ಚಂಡಿಗಢ ಪಂಡಿತ್ ಜವಹರ್‌ಲಾಲ್ ನೆಹರು ಅವರ ಕನಸಿನ ಕೂಸು

ಅಂದಿನ ಪ್ರಧಾನಿ ಜವಾಹರಲಾಲ್ ನೆಹರು, ಸ್ವತಂತ್ರ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವಂತಹ ಒಂದು ಆಧುನಿಕ ನಗರವನ್ನು ಕಟ್ಟಲು ಬಯಸಿದ್ದರು. ಫ್ರೆಂಚ್ ವಾಸ್ತುಶಿಲ್ಪಿ ಲೀ ಕಾರ್ಬೂಸಿಯೆ ಈ ನಗರಕ್ಕೆ ಯೋಜನೆ ರೂಪಿಸಿದರು. ಮನುಷ್ಯನ ದೇಹದ ಆಧಾರದ ಮೇಲೆ ಈ ನಗರವನ್ನು ವಿನ್ಯಾಸಗೊಳಿಸಿರುವುದು ವಿಶೇಷ. ಕ್ಯಾಪಿಟಲ್ ಕಾಂಪ್ಲೆಕ್ಸ್ ತಲೆಯಂತಿದ್ದರೆ, ಸಿಟಿ ಸೆಂಟರ್ ಹೃದಯದಂತಿದೆ. ಪಾರ್ಕ್‌ಗಳು ಮತ್ತು ಮರಗಳನ್ನು ಶ್ವಾಸಕೋಶಗಳಿಗೆ ಹೋಲಿಸಲಾಗಿದೆ. ನಗರವನ್ನು 'ಸೆಕ್ಟರ್'ಗಳಾಗಿ ವಿಂಗಡಿಸಿದ್ದು, ಪ್ರತಿ ಸೆಕ್ಟರ್‌ನಲ್ಲೂ ಶಾಲೆ, ಮಾರುಕಟ್ಟೆ, ಪಾರ್ಕ್‌ಗಳಿವೆ.

45
ಪಂಜಾಬ್‌ನಿಂದ ಪ್ರತ್ಯೇಕಗೊಂಡ ಹರ್ಯಾಣ

1966ರಲ್ಲಿ ಪಂಜಾಬ್‌ನಿಂದ 'ಹರಿಯಾಣ' ಪ್ರತ್ಯೇಕ ರಾಜ್ಯವಾಗಿ ರಚನೆಯಾಯಿತು. ತೆಲುಗು ರಾಜ್ಯಗಳಂತೆ, ಪಂಜಾಬ್ ಮತ್ತು ಹರಿಯಾಣ ಕೂಡ ವಿಭಜನೆಗೊಂಡವು. ಆಗ ಚಂಡೀಗಢ ತಮಗೇ ಬೇಕೆಂದು ಎರಡೂ ರಾಜ್ಯಗಳು ಪಟ್ಟು ಹಿಡಿದವು. ಆಗ ಕೇಂದ್ರ ಸರ್ಕಾರ, ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶ (UT) ಎಂದು ಘೋಷಿಸಿ, ಎರಡೂ ರಾಜ್ಯಗಳಿಗೆ ಉಭಯ ರಾಜಧಾನಿಯನ್ನಾಗಿ ಮಾಡಿತು. ಪಂಜಾಬ್ ಗವರ್ನರ್ ಅವರೇ ಚಂಡೀಗಢದ ಆಡಳಿತಾಧಿಕಾರಿಯಾಗಿರುತ್ತಾರೆ.

55
ಚಂಡೀಗಢದಲ್ಲಿ ನೋಡಬೇಕಾದ ಸ್ಥಳಗಳು:

ರಾಕ್ ಗಾರ್ಡನ್: 'ನೇಕ್ ಚಂದ್' ಅವರು ತ್ಯಾಜ್ಯ ವಸ್ತುಗಳಿಂದ ಈ ಅದ್ಭುತ ಉದ್ಯಾನವನ್ನು ನಿರ್ಮಿಸಿದ್ದಾರೆ.

ಸುಖ್ನಾ ಲೇಕ್: ಸಂಜೆಯ ಹೊತ್ತು ಕಾಲ ಕಳೆಯಲು ಈ ಸರೋವರ ಅತ್ಯುತ್ತಮ ಸ್ಥಳ.

ಓಪನ್ ಹ್ಯಾಂಡ್ ಶಿಲ್ಪ: ಲೀ ಕಾರ್ಬೂಸಿಯೆ ವಿನ್ಯಾಸಗೊಳಿಸಿದ ಈ ಶಿಲ್ಪ ಶಾಂತಿ ಮತ್ತು ಏಕತೆಯ ಸಂಕೇತವಾಗಿದೆ.

ಗ್ರೀನ್ ಸಿಟಿ: ಇದು ದೇಶದ ಅತ್ಯಂತ ಹಸಿರು, ಸ್ವಚ್ಛ ಮತ್ತು ಶಿಸ್ತುಬದ್ಧ ನಗರಗಳಲ್ಲಿ ಒಂದಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories