ಪ್ರಯಾಣಿಕರ ಜಾತಿ ನಿಂದನೆಗೆ ಆಕ್ಷೇಪ ವ್ಯಕ್ತಪಡಿಸಿದ ರಾಪಿಡೋ ಚಾಲಕ ಅಂಕಿತ್ ಕುಮಾರ್ ಅವರನ್ನು ಸಂಸ್ಥೆಯು ಸುಮಾರು 100 ವರ್ಷಗಳ ಕಾಲ ನಿಷೇಧಿಸಿದೆ. ತನ್ನ ಸ್ಪಷ್ಟನೆ ಪಡೆಯದೆ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಲಕ ಆರೋಪಿಸಿದ್ದಾರೆ.
Rapido ಸಂಸ್ಥೆ ತನ್ನ ಚಾಲಕನ ಮೇಲೆ ಬರೋಬ್ಬರಿ 100 ವರ್ಷ ನಿಷೇಧ ಹಾಕಿದೆ. ಜಾತಿಗೆ ಸಂಬಂಧಿಸಿದಂತೆ ಪ್ರಯಾಣಿಕರ ಜೊತೆ ನಡೆದ ವಾಗ್ವಾದದ ಬಳಿಕ ಚಾಲಕನ Rapido ಅಪ್ಲಿಕೇಷನ್ ಸ್ಥಗಿತಗೊಳಿಸಲಾಗಿದೆ. ಈ ಸಂಘರ್ಷದಲ್ಲಿ ಕ್ಯಾಬ್ ಚಾಲಕ ನಾಲ್ವರು ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿದ್ದರು. ಪ್ರಯಾಣಿಕರ ದೂರಿನ ಅನ್ವಯ ಸಂಸ್ಥೆ ಚಾಲಕನ ಮೇಲೆ ಈ ಕ್ರಮ ತೆಗೆದುಕೊಂಡಿದೆ.
25
ಅಂಕಿತ್ ಕುಮಾರ್ ನಿಷೇಧಕ್ಕೊಳಗಾದ ಚಾಲಕ
ಲಕ್ನೋ ನಗರದ ಅಂಕಿತ್ ಕುಮಾರ್ ನಿಷೇಧಕ್ಕೊಳಗಾದ ಚಾಲಕ. ನನ್ನಿಂದ ಯಾವ ಸ್ಪಷ್ಟನೆಯನ್ನು ಪಡೆಯದೇ Rapido ಸಂಸ್ಥೆ ಈ ಕ್ರಮ ತೆಗೆದುಕೊಂಡಿದೆ ಎಂದು ಅಂಕಿತ್ ಕುಮಾರ್ ಆರೋಪಿಸಿದ್ದಾರೆ. ಹಾಗಾದ್ರೆ ಪ್ರಯಾಣಿಕರು ಮತ್ತು ಚಾಲಕನ ನಡುವಿನ ಸಂಘರ್ಷಕ್ಕೆ ಕಾರಣ ಏನು ಎಂದು ನೋಡೋಣ ಬನ್ನಿ.
35
ಜಾತಿ ಸಂಬಂಧಿತ ನಿಂದನೆಯ ಪದ
ಉತ್ತರಾಥಿಯಾ ರೈಲು ನಿಲ್ದಾಣದಿಂದ ನಾಲ್ವರು ಅಂಕಿತ್ ಕುಮಾರ್ ಕ್ಯಾಬ್ ಹತ್ತಿಕೊಳ್ಳುತ್ತಾರೆ. ಪ್ರಯಾಣದ ವೇಳೆ ನಾಲ್ವರು ಹಿರಿಯ ರೈಲ್ವೆ ಅಧಿಕಾರಿಯ ಸಾಮರ್ಥ್ಯದ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಈ ವೇಳೆ ಪದೇ ಪದೇ ಜಾತಿ ಸಂಬಂಧಿತ ನಿಂದನೆಯ ಪದಗಳನ್ನು ನಾಲ್ವರು ಬಳಕೆ ಮಾಡುತ್ತಿರುತ್ತಾರೆ. ಅಂಕಿತ್ ಕುಮಾರ್ ಅವರು ದಲಿತ ಸಮುದಾಯಕ್ಕೆ ಸೇರಿದ್ದವರಾಗಿದ್ದರಿಂದ ಪದ ಬಳಕೆ ಬಗ್ಗೆ ಆಕ್ಷೇಪಿಸಿ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪ್ರಯಾಣಿಕರು ಮತ್ತು ಅಂಕಿತ್ ಕುಮಾರ್ ನಡುವೆ ಸಂಘರ್ಷ ಏರ್ಪಟ್ಟಿದೆ. ಕೋಪಗೊಂಡ ಅಂಕಿತ್ ಕುಮಾರ್, ನಾಲ್ವರು ಪ್ರಯಾಣಿಕರನ್ನು ತೆಲಿಬಾಗ್ ಬಜಾರ್ ಪೊಲೀಸ್ ಠಾಣೆ ಬಳಿ ಇಳಿಸಿದ್ದಾರೆ. ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆರಂಭದಲ್ಲಿ ತಾನು ಮಧ್ಯಪ್ರವೇಶಿಸಲಿಲ್ಲ . ಆದರೆ ಸಂಭಾಷಣೆ ಜಾತಿ ಆಧಾರಿತವಾದಾಗ ನಾನು ಆಕ್ಷೇಪ ವ್ಯಕ್ತಪಡಿಸಿದೆ ಎಂದು ಅಂಕಿತ್ ಕುಮಾರ್ ಹೇಳುತ್ತಾರೆ.
55
99 ವರ್ಷ 11 ತಿಂಗಳವರೆಗೆ ನಿಷೇಧ
ಈ ಘಟನೆ ಬಗ್ಗೆ ಪ್ರಯಾಣಿಕರು ಅಂಕಿತ್ ಕುಮಾರ್ ವಿರುದ್ದ Rapido ಸಂಸ್ಥೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಬೆನ್ನಲ್ಲೇ ಅಂಕಿತ್ ಕುಮಾರ್ ಖಾತೆಯನ್ನು Rapido ಸಂಸ್ಥೆ 99 ವರ್ಷ 11 ತಿಂಗಳವರೆಗೆ ನಿಷೇಧ ಹೇರಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರುವ ಅಂಕಿತ್ ತಮ್ಮ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದಾರೆ. ನಿಷೇಧದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ ಅಂಕಿತ್ ಕುಮಾರ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ