ಭಿಕ್ಷುಕನಾದ ಯುಟ್ಯೂಬರ್; 8 ಗಂಟೆಯಲ್ಲಿ ಸಿಕ್ಕ ಹಣ ನೋಡಿ ಇದೇ ಬೆಸ್ಟ್ ಜಾಬ್ ಎಂದ ಜನರು

Published : Aug 20, 2026, 01:18 PM IST

ಪುರುಷೋತ್ತಮ್ ವಶಿಷ್ಠ ಎಂಬ ಯುಟ್ಯೂಬರ್, ಹರಿದ್ವಾರದ ಕನ್ವರ್ ಯಾತ್ರೆಯ ವೇಳೆ ಎಂಟು ಗಂಟೆಗಳ ಕಾಲ ಭಿಕ್ಷುಕರಾಗಿ ಭಿಕ್ಷೆ ಬೇಡಿದ್ದಾರೆ. ಈ ಸಾಮಾಜಿಕ ಪ್ರಯೋಗದಲ್ಲಿ, ಯುಪಿಐ ಕ್ಯೂಆರ್ ಕೋಡ್ ಬಳಸಿ ಅವರು ಗಳಿಸಿದ ಹಣ ಮತ್ತು ಭಿಕ್ಷುಕರ ಆದಾಯದ ಕುರಿತಾದ ಅಚ್ಚರಿಯ ಮಾಹಿತಿಯನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ.

PREV
15
ಭಿಕ್ಷೆ ಬೇಡಿದ ಯುಟ್ಯೂಬರ್

ಯುಟ್ಯೂಬರ್ ಒಬ್ಬರು ಒಂದು ದಿನದ ಮಟ್ಟಿಗೆ ಭಿಕ್ಷುಕರಾಗಿ ಭಿಕ್ಷೆ ಬೇಡಿದ್ದಾರೆ. ಈ ವಿಡಿಯೋ ಮೂಲಕ ಓರ್ವ ಭಿಕ್ಷುಕ ಎಷ್ಟು ಸಂಪಾದನೆ ಮಾಡುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಹರಿದ್ವಾರದ ಕನ್ವರ್ ಯಾತ್ರೆ ವೇಳೆ ಯುಟ್ಯೂಬರ್ ಭಿಕ್ಷುಕರಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

25
ಪುರುಷೋತ್ತಮ್ ವಶಿಷ್ಠ

ಪುರುಷೋತ್ತಮ್ ವಶಿಷ್ಠ ಭಿಕ್ಷುಕನಾದ ಯುಟ್ಯೂಬರ್. ಕನ್ವರ್ ಯಾತ್ರೆಯ ಸಂದರ್ಭ ಹರಿದ್ವಾರದಲ್ಲಿ ಪುರುಷೋತ್ತಮ ಎಂಟು ಗಂಟೆ ಭಿಕ್ಷೆ ಬೇಡಿದ್ದಾರೆ. ಕೈಯಲ್ಲೊಂದು ಪಾತ್ರೆ, ಕೊರಳಲ್ಲಿ UPI QR ಕೋಡ್ ಸ್ಟಿಕರ್ ಹಾಕಿಕೊಂಡು ಭಿಕ್ಷೆ ಬೇಡಿದ್ದಾರೆ. ಈ ಎಂಟು ಗಂಟೆಯಲ್ಲಿ ತಮಗೆ ಸಿಕ್ಕ ಹಣವೆಷ್ಟು ಎಂಬುದನ್ನು ಪುರುಷೋತ್ತಮ್ ವಿವರಿಸಿದ್ದಾರೆ.

35
ಭಿಕ್ಷಾಟನೆ ವೇಳೆ ಆಗಿದ್ದೇನು?

ಭಿಕ್ಷಾಟನೆ ಸಂದರ್ಭದಲ್ಲಿ ಸ್ಥಳೀಯರು ಪುರುಷೋತ್ತಮ್ ಮೇಲೆ ಹಲ್ಲೆ ಮಾಡಲು ಸಹ ಮುಂದಾಗಿರೋದನ್ನು ಕಾಣಬಹುದು. ಒಂದಿಷ್ಟು ಜನರು ಧಾರಾಳವಾಗಿ ಹಣ ನೀಡಿದ್ದಾರೆ. ಕೆಲವರು ಯಾರು ನೀನು? ಇಲ್ಲಿಗ್ಯಾಕೆ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪುರುಷೋತ್ತಮ್ ಉತ್ತಮವಾಗಿಯೇ ಕಲೆಕ್ಷನ್ ಮಾಡಿದ್ದಾರೆ. ಹಾಗಾದ್ರೆ ಪುರುಷೋತ್ತಮ್‌ಗೆ ಸಿಕ್ಕ ಹಣ ಎಷ್ಟು ಗೊತ್ತಾ?

45
8 ಗಂಟೆಯ ಭಿಕ್ಷಾಟನೆಯಲ್ಲಿ ಬಂದ ಹಣ ಎಷ್ಟು?

ಪುರುಷೋತ್ತಮ್ ವಶಿಷ್ಠ ಅವರಿಗೆ 8 ಗಂಟೆಯ ಭಿಕ್ಷಾಟನೆಯಲ್ಲಿ ಬರೋಬ್ಬರಿ 4 ಸಾವಿರ ರೂಪಾಯಿ ಸಿಕ್ಕಿದೆ. ಅಂದ್ರೆ ಗಂಟೆಗೆ 500 ರೂ.ಗಳಷ್ಟು ಸಂಪದಾನೆ ಮಾಡಿದ್ದಾರೆ. ಯಾವುದೇ ಬಂಡವಾಳ ಹೂಡಿಕೆ ಮಾಡದೇ ಪುರುಷೋತ್ತಮ್ 4 ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಪುರುಷೋತ್ತಮ್ ಪ್ರಕಾರ, ಈ ಭಾಗದಲ್ಲಿ ಕೆಲ ಭಿಕ್ಷುಕರು 10 ರಿಂದ 12 ಗಂಟೆಗಳ ಕಾಲ ಭಿಕ್ಷೆ ಬೇಡುತ್ತಾರೆ.

55
ತಿಂಗಳ ಹಣ ಎಷ್ಟು?

10 ರಿಂದ 12 ಗಂಟೆ ಭಿಕ್ಷೆ ಕೇಳುವ ಭಿಕ್ಷುಕರು, 8-10 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ. ತಿಂಗಳಿಗೆ ಇವರ ಸಂಬಳ 2 ರಿಂದ 3 ಲಕ್ಷ ರೂಪಾಯಿ ಆಗುತ್ತದೆ. ಅಂತಿಮವಾಗಿ ತಾವು ಸಂಗ್ರಹಿಸಿದ ಹಣದಿಂದ ಅಗತ್ಯ ಇರೋರಿಗೆ ಆಹಾರ ವಿತರಣೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ 8 ಗಂಟೆಗಳ ಕಾಲ ಭಿಕ್ಷೆ ಕೇಳೋದು ಸಹ ಸುಲಭವಲ್ಲ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories