ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದ ಗಾಯಕಿ, ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ

Published : Apr 12, 2026, 02:45 PM IST

ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದ ಗಾಯಕಿ, ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅಶಾ ಭೋಸ್ಲೆ ಜೊತೆ ನಡೆಸಿದ ಮಾತುಕತೆಗಳನ್ನು ನೆನಪಿಸಿಕೊಂಡಿದ್ದಾರೆ. 

PREV
15
ಆಶಾ ಭೋಸ್ಲೆ ನಿಧನ

ಬಾಲಿವುಡ್ ಖ್ಯಾತ ಗಾಯಕಿ ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯಗಳಿಂದ ಇಂದು (ಏ.12) ನಿಧನಾಗಿದ್ದಾರೆ. ಶ್ವಾಸಕೋಶದ ಇನ್‌ಫೆಕ್ಷನ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಉಲ್ಭಿಣಿಸಿ ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ದಾಖಲಾಗಿದ್ದರು. ಆಶಾ ಭೋಸ್ಲೆ ನಿಧನಕ್ಕೆ ಬಾಲಿವುಡ್ ರಂಗ ಕಂಬನಿ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಆಶಾ ಭೋಸ್ಲೆ ನಿಧನ ಅತೀವ ನೋವುಂಟು ಮಾಡಿದೆ ಎಂದಿದ್ದಾರೆ.

25
ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ

ಭಾರತದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ನಿಧನ ಅತೀವ ದುಃಖ ತಂದಿದೆ. ತಮ್ಮ ಸುಮುಧುರ ಕಂಠದಿಂದ ದಶಕಗಳ ಕಾಲ ಸಂಗೀತ ಪಯಣದ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಗಾಯಕಿ. ಅಶಾ ಭೋಸ್ಲೆ ಹಾಡು ದೇಶ ವಿವದೇಶಗಳಲ್ಲಿ ಸಂಗೀತ ಹೃದಯ ಹಾಗೂ ಮನಸ್ಸುಗಳನ್ನು ತಲುಪಿದೆ. ಭಾವಪೂರ್ಣ ಗೀತೆಗಳಿಂದ ಹಿಡಿದು ಎಲ್ಲಾ ಹಂತಗಳ ಗೀತೆಗಳು ಅಶಾ ಭೋಸ್ಲೆ ಧ್ವನಿಯಲ್ಲಿ ಕಲಾತೀತವಾಗಿ ಹೊಳೆಯುತ್ತಿತ್ತು ಎಂದು ಮೋದಿ ಹೇಳಿದ್ದಾರೆ.

35
ಸಂಭಾಷಣೆ ನೆನಪಿಸಿದ ಮೋದಿ

ಅಶಾ ಭೋಸ್ಲೆ ಕುರಿತು ಮಾಡಿದ ಎಕ್ಸ್ ಪೋಸ್ಟ್‌ನಲ್ಲಿ ಮೋದಿ, ಗಾಯಕಿ ಜೊತೆಗೆ ನಡೆಸಿದ ಸಂಭಾಷಣೆಗಳನ್ನು ನೆನೆಪಿಸಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕತೆಗಳನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ಅಶಾ ಭೋಸ್ಲೆ ಕುಟುಂಬ, ಅಭಿಮಾನಗಳು, ಸಂಗೀತ ಪ್ರೇಮಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿದೆ. ಅಶಾ ಭೋಸ್ಲೆ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ. ಅವರ ಹಾಡುಗಳು ಸದಾ ಜನರ ಮನಸ್ಸಿನಲ್ಲಿ ಅನರಣಿಸುತ್ತವೆ ಎಂದಿದ್ದಾರೆ.

45
ಆರೋಗ್ಯದ ಕುರಿತು ಕಾಳಜಿ ವಹಿಸಿದ್ದ ಮೋದಿ

ಗಾಯಕಿ ಆಶಾ ಭೋಸ್ಲೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಪ್ರಧಾನಿ ಮೋದಿ ಆರೋಗ್ಯ ಕುರಿತು ಕಾಳಜಿ ವಹಿಸಿದ್ದರು. ಆಶಾ ಭೋಸ್ಲೆ ಆಸ್ಪತ್ರೆ ದಾಖಲಾಗಿರುವ ಮಾಹಿತಿ ತಿಳಿದು ಕಳವಳವಾಗಿದೆ. ಖ್ಯಾತ ಗಾಯಕಿ ಆರೋಗ್ಯ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಎಕ್ಸ್ ಪೋಸ್ಟ್ ಮಾಡಿದ್ದರು.

55
ನಾಳೆ ಅಂತಿಮ ವಿಧಿ ವಿಧಾನ

92 ವರ್ಷ ವಯಸ್ಸಿನ ಆಶಾ ಭೋಸ್ಲೆ ಅಂತಿಮ ವಿಧಿ ವಿಧಾನ ನಾಳೆ ನಡೆಯಲಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಶಾ ಭೊಸ್ಲೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಆಶಾ ಭೋಸ್ಲೆ ಪುತ್ರ ಆನಂದ್ ಭೋಸ್ಲೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories