ಭಾರತದ ಎಲ್‌ಪಿಜಿ ಪೂರೈಕೆಗೆ ಹೊಸ ಭರವಸೆ? ಹರ್ಮೋಜ್ ಜಲಸಂಧಿ ದಾಟಿದ ಜಗ್ ವಿಕ್ರಮ್ ನೌಕೆ

Published : Apr 11, 2026, 08:18 PM IST

ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ಎಲ್‌ಪಿಜಿ ಕೊರತೆಯ ನಡುವೆ, 20,400 ಟನ್ ಎಲ್‌ಪಿಜಿ ಹೊತ್ತ 'ಜಗ್ ವಿಕ್ರಮ್' ನೌಕೆಯು ಹರ್ಮೋಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ನೌಕೆಯು ಭಾರತದತ್ತ ಆಗಮಿಸುತ್ತಿದ್ದು, ದೇಶದ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ನಿರೀಕ್ಷೆ ಮೂಡಿಸಿದೆ.

PREV
15
ಜಗ್ ವಿಕ್ರಮ್ ನೌಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯುಂಟಾಗಿದ್ದು, ಜನರು ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಮೆರಿಕ-ಇರಾನ್ ಕದನ ವಿರಾಮದ ನಡುವೆ ಎಲ್‌ಪಿಜಿ ಹೊತ್ತ ಜಗ್ ವಿಕ್ರಮ್ ನೌಕೆ ಹರ್ಮೋಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ನೌಕೆ ದೇಶದ ಎಲ್‌ಪಿಜಿ ಕೊರತೆ ನೀಗಿಸುತ್ತಾ ಎಂಬ ಪ್ರಶ್ನೆ ಮೂಡಿದೆ.

25
20,400 ಟನ್ ಎಲ್‌ಪಿಜಿ

ಇರಾನ್- ಇಸ್ರೇಲ್ ನಡುವಿನ ಸಂಘರ್ಷದಿಂದ ಜಾಗತಿಕ ಇಂಧನ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ, ಅದರ ಪರಿಣಾಮ ಭಾರತದಲ್ಲೂ ಎಲ್‌ಪಿಜಿ ಪೂರೈಕೆಯ ಮೇಲೆ ಸಾಕಷ್ಟು ಪರಿಣಾಮ ಬಿದ್ದಿದೆ. ಜಗ್ ವಿಕ್ರಮ್ ನೌಕೆ 20,400 ಟನ್ ಎಲ್‌ಪಿಜಿ ಜೊತೆ ಭಾರತದತ್ತ ಆಗಮಿಸುತ್ತಿದೆ. ಜಗ್ ವಿಕ್ರಮ್ ನೌಕೆಯು 24 ನಾವಿಕರನ್ನು ಹೊಂದಿದ್ದು, ಏಪ್ರಿಲ್ 15, 2026 ರಂದು ಮುಂಬೈ ಬಂದರಿಗೆ ಅಗಮಿಸುವ ನಿರೀಕ್ಷೆಗಳಿವೆ.

35
ಕದನ ವಿರಾಮ

ಕದನ ವಿರಾಮಕ್ಕೆ ಕೆಲವು ವಾರಗಳಲ್ಲಿಯೇ ಭಾರತದ ಎಂಟು ಹಡಗುಗಳು ಜಲಸಂಧಿಯನ್ನು ದಾಟಿದ್ದರೆ, 15 ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ. ಜಗ್ ವಿಕ್ರಮ್ ಶಿಪ್ ಇರಾನ್-ಅಮೆರಿಕಾ ಕದನ ವಿರಾಮದ ಬಳಿಕ ಬರುತ್ತಿರುವ ಮೊದಲ ನೌಕೆ ಇದಾಗಿದೆ. ಕದನ ವಿರಾಮ ಘೋಷಣೆಯಾದ್ರೂ ಸಂಪೂರ್ಣವಾಗಿ ಹರ್ಮೋಜ್ ಜಲಸಂಧಿ ನೌಕೆಗಳ ಸಂಚಾರಕ್ಕೆ ಮುಕ್ತವಾಗಿಲ್ಲ.

45
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಪೂರೈಕೆ

ಈ ನಡುವೆ ದೇಶದಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯು ಸಾಮಾನ್ಯವಾಗಿದ್ದು, ಯಾವುದೇ ತರಹದ ಅಡಚಣೆಯುಂಟಾಗಿಲ್ಲ ಎಂದು ತೈಲ ಸಚಿವಾಲಯ ಮಾಹಿತಿ ನೀಡಿದೆ. ಇತ್ತ ಸರ್ಕಾರಗಳು ಎಲ್‌ಪಿಜಿಗೆ ಪರ್ಯಾಯ ಮಾರ್ಗಗಳ ಬಳಕೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತಿವೆ. ಆಂಧ್ರಪ್ರದೇಶ ಸರ್ಕಾರ ನೈಸರ್ಗಿಕ ಅನಿಲ ಬಳಕೆದಾರರಿಗೆ ಸಬ್ಸಿಡಿ ಬೆಂಬಲದ ಅವಧಿಯನ್ನು ವಿಸ್ತರಿಸಿದೆ.

ಇದನ್ನೂ ಓದಿ: Eylon Levy: ಪಾಕಿಸ್ತಾನ ಒಂದು ಆಕ್ರಮಣಕಾರಿ ದೇಶ, ಭಾರತಕ್ಕೂ ಅಪಾಯವಿದೆ: ಇಸ್ರೇಲ್ ಮಾಜಿ ವಕ್ತಾರ ಎಚ್ಚರಿಕೆ

55
ಪಾಕಿಸ್ತಾನದಲ್ಲಿ ಸಭೆ

ಇರಾನ್ ಅಧಿಕಾರಿಗಳು ಒಪ್ಪಿಗೆ ಮತ್ತು ಮೇಲ್ವಿಚಾರಣೆಯಲ್ಲಿ ಹಡಗುಗಳು ಹರ್ಮೋಜ್ ಜಲಸಂಧಿಯನ್ನು ಕ್ರಾಸ್ ಮಾಡುತ್ತಿವೆ. ಸದ್ಯ ಅಮೆರಿಕಾ ಮತ್ತು ಇರಾನ್ ಅಧಿಕಾರಿಗಳು ಪಾಕಿಸ್ತಾನದಲ್ಲಿದ್ದು, ಕದನ ವಿರಾಮದ ಕುರಿತ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಇಡೀ ವಿಶ್ವದ ಗಮನವೆಲ್ಲಾ ಪಾಕಿಸ್ತಾನದ ನಡುವೆ ಇದೆ.

ಇದನ್ನೂ ಓದಿ: ಇರಾನ್ ಕದನ ನಿಲ್ಲಿಸಿದ್ದೇ ನಾನು ಎಂದಿದ್ದ ಪಾಕ್ ಮತ್ತೆ ಬೆತ್ತಲು;‍ ‍ ‍‍ಸಂದೇಶ ಬರೆದುಕೊಟ್ಟಿದ್ದೇ ಅಮೆರಿಕ, ಸ್ಫೋಟಕ ವರದಿ ಬಯಲು!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories