ಐತಿಹಾಸಿಕ ಆಯೋಧ್ಯೆ ದೀಪಾವಳಿ ಸಂಭ್ರಮದಲ್ಲಿ ಉಪ ರಾಷ್ಟ್ರಪತಿ ಪಾಲ್ಗೊಂಡಿದ್ದಾರೆ. ಸಿಪಿ ರಾಧಾಕೃಷ್ಣನ್ ಸರಯೂ ತಟದಲ್ಲಿ ಆರತಿ ಬೆಳಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಆಯೋಧ್ಯೆ ದೀಪೋತ್ಸವದ ಸಂಭ್ರಮ ಇಲ್ಲಿದೆ.
ಆಯೋಧ್ಯೆಯಲ್ಲಿ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸರಯೂ ನದಿ ತೀರದಲ್ಲಿ ಸಿಪಿ ರಾಧಾಕೃಷ್ಣನ್ ಆರತಿ ಬೆಳಗಿದ್ದಾರೆ. ಆಯೋಧ್ಯೆಯ 10ನೇ ವರ್ಷದ ದೀಪೋತ್ಸವಕ್ಕೆ ಸಿಪಿ ರಾಧಾಕಷ್ಣನ್ ಚಾಲನೆ ನೀಡಿದ್ದಾರೆ.
24
ಗಮನ ಸೆಳೆದ ಸಿಪಿ ರಾಧಾಕೃಷ್ಣನ್ ಆರತಿ
ಸರಯೂ ಘಾಟ್ ಸೇರಿದಂತೆ 56 ಘಾಟ್‌ಗಳಲ್ಲಿ ಆಯೋಧ್ಯೆ ದೀಪೋತ್ಸವ ಸಂಭ್ರಮ ಮನೆ ಮಾಡಿದೆ. ಸಿಪಿ ರಾಧಾಕೃಷ್ಣನ್ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿಪಿ ರಾಧಾಕೃಷ್ಣನ್ ಎಲ್ಲರ ಗಮನಸೆಳೆದಿದ್ದಾರೆ. ಸಿಪಿ ರಾಧಾಕೃಷ್ಣನ್ ಜೊತೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್,ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.
34
ಆಯೋಧ್ಯೆಯೆ ದೀಪಾವಳಿ
ಶ್ರೀರಾಮ ಜನ್ಮಭೂಮಿಯಲ್ಲಿರುವ ಶ್ರೀರಾಮ ಮಂದಿರವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಇಡೀ ಆಯೋಧ್ಯೆ ಸಿಂಗಾರಗೊಂಡಿದೆ. ಸೀತೆಯನ್ನು ಕರೆದುಕೊಂಡು ಶ್ರೀರಾಮ ಆಯೋಧ್ಯೆಗೆ ಮರಳಿದ ದೀಪಾವಳಿ ಸಂಭ್ರಮವನ್ನು ದೇಶಾದ್ಯಂತ ಆಚರಿಸುತ್ತಿದೆ. ಈ ಪೈಕಿ ಶ್ರೀರಾಮನ ಜನ್ಮಭೂಮಿಯಲ್ಲಿ ಈ ಉತ್ಸವ ನೋಡಲು ಎರಡು ಕಣ್ಣುಗಳು ಸಾಲದು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಆಯೋಧ್ಯೆಯಲ್ಲಿ ಬರೋಬ್ಬರಿ 30 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಗುತ್ತಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಕಳೆದ ವರ್ಷ 26 ಲಕ್ಷ ದೀಪಗಳನ್ನು ಬೆಳಗಿಸಿ ವಿಶ್ವದಾಖಲೆ ನಿರ್ಮಾಣಗೊಂಡಿದೆ. ಈ ಬಾರಿ ಈ ದಾಖಲೆಯನ್ನು ಮುರಿದು 30 ಲಕ್ಷ ದೀಪ ಬೆಳಗಲಾಗುತ್ತಿದೆ. 35 ಸಾವಿರ ವಿದ್ಯಾರ್ಥಿಗಳು ಈ ದೀಪೋತ್ಸವ ತಯಾರಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ