ಕಳೆದ 10 ದಿನಗಳಲ್ಲಿ ಭಾರತವು ಬಾಹ್ಯಾಕಾಶ, ರೈಲ್ವೆ, ಆರ್ಥಿಕತೆ ಮತ್ತು ಕಡಲ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವ ಸಾಧನೆಗಳನ್ನು ಮಾಡಿದೆ. ISRO ಉಪಗ್ರಹ ಉಡಾವಣೆ, ಬುಲೆಟ್ ರೈಲು ಕಾಮಗಾರಿ, ಬಡತನ ಇಳಿಕೆ ಮತ್ತು ಜಿಯೋ ಐಪಿಒ ದಾಖಲೆಗಳು ದೇಶದ ಪ್ರಗತಿಯನ್ನು ಎತ್ತಿ ತೋರಿಸುತ್ತವೆ.
ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ಸ್ವರೂಪದ ಟೀಕೆಗಳನ್ನು ನಡೆಸುತ್ತಿದೆ. ಪ್ರಮುಖವಾಗಿ ಚುನಾವಣಾ ಆಯೋಗದ ನಿರ್ಧಾರಗಳು ಮತ್ತು ಆಡಳಿತಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡುತ್ತಿವೆ. ಆದರೆ ಕಳೆದ 10 ದಿನಗಳಲ್ಲಿ ಭಾರತದಲ್ಲಿ ನಡೆದ ಕೆಲವು ಸಾಧನೆಗಳು, ವಿಶ್ವದ ಗಮನ ಸೆಳೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
210
ಹೈಸ್ಪೀಡ್ ರೈಲು ಕಾರಿಡಾರ್ ಕಾಮಗಾರಿ ತೀವ್ರಗತಿ
ಭಾರತ ಹೈಸ್ಪೀಡ್ ಬುಲೆಟ್ ರೈಲು ಯುಗಕ್ಕೆ ಅಧಿಕೃತ ಹೆಜ್ಜೆ ಇಡುತ್ತಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಮಾದರಿಗಳು ಸಿದ್ಧಗೊಳ್ಳುತ್ತಿದೆ. ಭಾರತ್ ಆರ್ಥ್ ಮೂವರ್ಸ್ ಲಿಮಿಟೆಡ್ ಘಟಕದಲ್ಲಿ ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು ಸಿದ್ಧಗೊಳ್ಳುತ್ತಿದೆ. ಇದೇ ದೇಶದ ರೈಲ್ವೆ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎನಿಸಿದೆ. ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಯೋಜನೆ ಶೇಖಡಾ 80ರಷ್ಟು ಕಾರ್ಯಗಳು ಪೂರ್ಣಗೊಂಡಿದ್ದು, ಸೂರತ್ ಮತ್ತು ಬಿಲಿಮೊರಾ ನಡುವೆ 50 ಕಿಮೀ ಪ್ರಾಥಮಿಕ ವೇಗದಲ್ಲಿ 2027ರ ಆಗಸ್ಟ್ 15ರ ವೇಳೆಗೆ ಮೊದಲ ಬುಲೆಟ್ ರೈಲು ಪ್ರಾಯೋಗಿಕವಾಗಿ ಓಡಿಸುವ ಗುರಿ ಹೊಂದಿದೆ.
310
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ರೈಲು
ಬೆಂಗಳೂರು ಮತ್ತು ಮುಂಬೈ ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ರೈಲು ಅಧಿಕೃತವಾಗಿ ಚಾಲನೆಗೊಂಡಿದೆ. ಈ ರೈಲು ಒಟ್ಟು 16 ಆಧುನಿಕ ಬೋಗಿಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಮತ್ತು ಲೋಕೋ ಪೈಲಟ್ಗಳಿಗೆ ಸುಧಾರಿತ ಸೌಕರ್ಯಗಳನ್ನು ನೀಡಲಾಗಿದೆ. ಮಧ್ಯ ಮತ್ತು ಮೇಲಿನ ಬರ್ತ್ಗಳಿಗೆ ಸುಲಭವಾಗಿ ಹತ್ತಲು ಹೊಸ ಮಾದರಿಯ ಮೆಟ್ಟಿಲು ವಿನ್ಯಾಸಗೊಳಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಹೆಮ್ಮೆ ತಂದುಕೊಟ್ಟಿದೆ. ಜಾಗತಿಕ ಮತ್ತು ಭಾರತದ ಜಿಪಿಎಸ್ ಕ್ಷೇತ್ರದಲ್ಲಿ ಭಾರತದ ಪ್ರಾದೇಶಿಕ ದಿಕ್ಸೂಚಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಮುಂದಿನ ಪೀಳಿಗೆಯ ಎನ್ವಿಎಸ್-01 ಸರಣಿಯ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದರಲ್ಲಿ ಭಾರತದಲ್ಲೇ ತಯಾರಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಬಳಸಲಾಗಿದೆ. ಸಾಮಾನ್ಯ ನಾಗರಿಕರಿಗೆ ಇನ್ನಷ್ಟು ಸ್ಪಷ್ಟ ಲೊಕೇಶನ್ ನೀಡಲು ಹೊಸ ಎಲ್5 ಫ್ರೀಕ್ವೆನ್ಸಿ ಸಿಗ್ನಲ್ಗಳನ್ನು ಜಿಪಿಎಸ್ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದೆ. ಇಸ್ರೋ ತನ್ನ ಉಪಗ್ರಹ ತಂತ್ರಜ್ಞಾನ ಮತ್ತು ನಾಕ್ ಮೂಲಕ ಭವಿಷ್ಯದಲ್ಲಿ ಜಾಗತಿಕ ಬಾಹ್ಯಾಕಾಶ ರಂಗದಲ್ಲಿ ಮತ್ತಷ್ಟು ಪ್ರಮುಖ ಪಾತ್ರ ವಹಿಸಲಿದೆ.
510
ಇರಾನಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ನೌಕಾಪಡೆ
ಅರೇಬಿಯನ್ ಸಮುದ್ರದ ಸೋಮಾಲಿಯಾ ಕರಾವಳಿ ಭಾಗದಲ್ಲಿ ಅಪಹರಣಕ್ಕೊಳಗಾಗಿದ್ದ ಇರಾನ್ನ ಅಜಿನಿ ಎಂಬ ಮೀನುಗಾರಿಕಾ ಧೋಣಿ ಮತ್ತು ಅದರಲ್ಲಿದ್ದ 20 ಇರಾನಿ ಮೀನುಗಾರರನ್ನು ಭಾರತೀಯ ನೌಕಾಪಡೆಯ 48 ಗಂಟೆಗಳ ಸತತ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ. ಇದು ಮಾತ್ರವಲ್ಲದೇ, ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಕಾಯುವಲ್ಲಿ ಭಾರತೀಯ ನೌಕಾಪಡೆಯು ಇತ್ತೀಚೆಗೆ ಇಂತಹ ಹಲವು ಯಶಸ್ವಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದೆ.
610
ದಾಖಲೆಯ ಪ್ರಮಾಣದಲ್ಲಿ ತೀವ್ರ ಬಡತನ ಇಳಿಕೆ
ವಿಶ್ವ ಬ್ಯಾಂಕ್ನ ಅಕ್ಟೋಬರ್ 2026ರ ವರದಿಯ ಅನ್ವಯ, ಪಾವರ್ಟಿ ಅಂಡ್ ಈಕ್ವಿಟಿ ಬ್ರೀಫ್ ವರದಿಯ ಪ್ರಕಾರ ಭಾರತ ಬಡತನ ನಿವಾರಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. 2011ರಲ್ಲಿ ಶೇಕಡಾ 21.1 ರಷ್ಟಿದ್ದ ತೀವ್ರ ಬಡತನದ ಪ್ರಮಾಣ 2023ರ ವೇಳೆಗೆ ಶೇಕಡಾ 2.6ಕ್ಕೆ ಇಳಿಕೆಯಾಗಿದೆ. ಕಳೆದ 12 ವರ್ಷಗಳಲ್ಲಿ ಸುಮಾರು 49.6 ಕೋಟಿ ಜನರು ತೀವ್ರ ಬಡತನದಿಂದ ಹೊರ ಬಂದಿದ್ದಾರೆ. ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ, ಭಾರತದಲ್ಲಿ ಬಡತನದ ಪ್ರಮಾಣವು 2026ರ ವೇಳೆಗೆ ಶೇಕಡಾ 14.2ಕ್ಕೆ ಹಾಗೂ 2028ರ ವೇಳೆಗೆ ಶೇಕಡಾ 12.1ಕ್ಕೆ ಮತ್ತಷ್ಟು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
710
ಫ್ರೆಂಚ್ ಫ್ರೈಸ್ ಸಂಸ್ಕರಣಾ ಘಟಕ
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಬನಸ್ಕಾಂಥಾ ಜಿಲ್ಲೆಯ ಸನಾದಾರ್ನಲ್ಲಿರುವ ಬನಾಸ್ ಡೈಲಿಯ ಫ್ರೆಂಚ್ ಫ್ರೈಸ್ ಸಂಸ್ಕರಣಾ ಘಟಕದ ವಿಸ್ತರಣೆಯನ್ನು ವರ್ಚುವಲ್ ಆಗಿ ಉದ್ಘಾಟನೆ ಮಾಡಿದ್ದರು. ಈ ಘಟಕ ಗಂಟೆಗೆ ಸುಮಾರು 2 ಟನ್ ನಿಂದ 5 ಟನ್ ಫ್ರೆಂಚ್ ಫ್ರೈಸ್ ಸಂಸ್ಕರಣೆ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 51.65 ಕೋಟಿ ವೆಚ್ಚದಲ್ಲಿ ಈ ಘಟಕ ನಿರ್ಮಾಣ ಮಾಡಲಾಗಿದ್ದು, ಭಾರತದಲ್ಲಿ ತಯಾರಿಸಿದ್ದು ಜಗತ್ತಿಗೆ ಸರ್ವ್ ಎಂಬ ಸಂದೇಶವನ್ನು ನೀಡಿದ್ದು, ಬನಸ್ಕಾಂಥಾದ ಆಲೂಗಡ್ಡೆ ಇಂದು ಜಗತ್ತಿನಲ್ಲಿ ಪ್ರಸಿದ್ಧವಾಗಲಿದೆ ಎಂದು ಮೋದಿ ಹೇಳಿದ್ದಾರೆ.
810
ವಾರಣಾಸಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಉದ್ಯಮ
ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಅರ್ವಿಂದ್ ಲಿಮಿಟೆಡ್ ಹೊಸ ಗಾರ್ಮೆಂಟ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಈ ಘಟಕವೂ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಲಿದೆ. 5.5 ಎಕರೆ ಪ್ರದೇಶದಲ್ಲಿ ಸುಮಾರು 150 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡಲಾಗಿದ್ದು, ಇಲ್ಲಿ 1000 ಮಂದಿಗೆ ಉದ್ಯೋಗ ಸಿಗಲಿದ್ದು, ಬಹುತೇಕ ಮಹಿಳೆಯರಿಗೆ ಇಲ್ಲಿ ಕೆಲಸ ನೀಡಲಾಗುತ್ತದೆ. ವಾರಣಾಸಿಯಲ್ಲಿ ತಯಾರಾಗುವ ಗಾರ್ಮೆಂಟ್ಗಳು ಜಾಗತಿಕ ಮಾರುಕಟ್ಟೆಗಳಿಗೆ ರಫ್ತಾಗಲಿದೆ.
One of the best aspects of Arvind Limited’s garment manufacturing facility in Varanasi is the boost it will give to women empowerment! https://t.co/nNSAuka9ne
— Narendra Modi (@narendramodi) October 25, 2026
910
ದಾಖಲೆ ನಿರ್ಮಿಸಿದ ಜಿಯೋ ಪ್ಲಾಟ್ ಫಾರ್ಮ್ಸ್
ಜಿಯೋ ಪ್ಲಾಟ್ ಫಾರ್ಮ್ಸ್ ಐಪಿಒ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಹಲವಾರು ದಾಖಲೆಯನ್ನು ನಿರ್ಮಿಸಿದೆ. ಭಾರತ ಅತಿದೊಡ್ಡ ಐಪಿಒ ಎಂದು ದಾಖಲೆ ಬರೆದಿರುವ ಜಿಯೋ, ಈ ಹಿಂದಿನ ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ದಾಖಲೆಯನ್ನು ಮುರಿದಿದೆ. ಜಿಯೋ ಐಪಿಒ ಅಂತಿಮ ಗಾತ್ರ ಸುಮಾರು 30,188 ಕೋಟಿ ರೂಪಾಯಿ ಇದ್ದು, ಹ್ಯುಂಡೈ ಐಪಿಒ ದರ 27,870 ಕೋಟಿಯನ್ನು ಮೀರಿಸಿದೆ. 1.3 ಕೋಟಿಗೂ ಹೆಚ್ಚು ಭಾರತೀಯರು ನಂಬಿಕೆ ಇಟ್ಟು ಅರ್ಜಿ ಸಲ್ಲಿಕೆ ಸಲ್ಲಿಸಿದ್ದು, ಇದು ದೇಶದ ಆರ್ಥಿಕ ಶಕ್ತಿ ಮತ್ತು ಹೂಡಿಕೆದಾರರ ವಿಶ್ವಾಸವನ್ನು ತೋರಿಸುತ್ತದೆ.
1010
ಏಷ್ಯಾದಲ್ಲಿಯೇ ಭಾರತದ ಮ್ಯೂಸಿಯಂಗೆ ಮೊದಲ ಸ್ಥಾನ
ಉಳಿದಂತೆ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 2026ರಲ್ಲಿ ಭಾರತದ ದಾಖಲೆಯ 114 ಪದಕಗಳನ್ನು ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದದು, ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಪಟ್ನಾದ ಬಿಹಾರ ಮ್ಯೂಸಿಯಂ ವಿಶ್ವದ 100 ಅತ್ಯುತ್ತಮ ಮ್ಯೂಸಿಯಂಗಳಲ್ಲಿ 9ನೇ ಸ್ಥಾನ ಪಡೆದುಕೊಂಡು, ಏಷ್ಯಾದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಇದರೊಂದಿಗೆ ಭಾರತ ಜಗತ್ತಿನ 3ನೇ ಅತಿದೊಡ್ಡ ಆಟೋಮೊಬೈಲ್ ಉದ್ಯಮವಾಗಿದೆ. ತಮಿಳುನಾಡಿನ ವಿಒಸಿ ಪೋರ್ಟ್ನ ತೂತುಕುಡಿ ಇಂಟರ್ ನ್ಯಾಷನಲ್ ಕಂಟೈನರ್ ಟರ್ಮಿನಲ್ ಗ್ರೀನ್ ಟರ್ಮಿನಲ್ ಸ್ಥಾನಮಾನವನ್ನು ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ