ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಐಷಾರಾಮಿತನ, 180 ಕಿಲೋಮೀಟರ್ ಸ್ಪೀಡ್ ಸೇರಿದಂತೆ ಹಲವು ವಿಶೇಷತೆಗಳು ಈ ರೈಲಿನಲ್ಲಿದೆ. ಪ್ರಯಾಣದ ಸಮಯ ಸೇರಿದಂತೆ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರ ಹಲವು ಸಮಸ್ಸೆಗಳಿಗೆ ಉತ್ತರವಾಗಿದೆ. ರೈಲಿನ ಸ್ಲೀಪರ್ ಬರ್ತ್ ಐಷಾರಾಮಿ ಹೊಟೆಲ್ ರೀತಿಯಲ್ಲಿದೆ. ಅಷ್ಟೇ ಲಕ್ಷುರಿ ಫೀಲ್ ನೀಡಲಾಗಿದೆ. ಜೊತೆಗೆ ರೈಲು 180 ಕಿಲೋಮೀಟರ್ ವೇಗದಲ್ಲಿ ಸಾಗಲಿದೆ. ಹೀಗಾಗಿ ಪ್ರಯಾಣಧ ಅವಧಿಯೂ ಕಡಿತಗೊಳ್ಳಲಿದೆ. ಬೆಂಗಳೂರು ಹಾಗೂ ಮುಂಬೈ ಇದೀಗ ಮತ್ತಷ್ಟು ಹತ್ತಿರವಾಗಲಿದೆ.
25
ರೈಲಿನ ವಿಶೇಷತೆ
ರೈಲಿನಲ್ಲಿ ಬಯೋ-ವ್ಯಾಕ್ಯೂಮ್ ಶೌಚಾಲಯಗಳನ್ನು ಅಳವಡಿಸಲಾಗುತ್ತಿದ್ದು, ಇವು ವಾಸನೆ ರಹಿತ ಮತ್ತು ಸ್ವಚ್ಛವಾಗಿರಲಿವೆ. ರೈಲು ಚಲಿಸುವಾಗ ಒಳಗಡೆ ಯಾವುದೇ ಕರ್ಕಶ ಶಬ್ದ ಕೇಳಿಸದಂತೆ ‘ಸೌಂಡ್ ಪ್ರೂಫಿಂಗ್’ ತಂತ್ರಜ್ಞಾನವನ್ನು ಬಳಸಲಾಗಿದೆ.
35
ವಿಮಾನದ ರೀತಿಯ ಸೌಕರ್ಯ
ರೈಲಿನ ಒಳಭಾಗವನ್ನು ಪ್ರೀಮಿಯಂ ಹಾಗೂ ಐಷಾರಾಮಿ ಲುಕ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ದರ್ಜೆಯ ಬರ್ತ್‌ಗಳು (ಮಲಗುವ ಆಸನಗಳು), ರೋಮಾಂಚಕ ಲೈಟಿಂಗ್ ವ್ಯವಸ್ಥೆ ಇರಲಿದೆ.ಪ್ರತಿಯೊಂದು ಕೋಚ್‌ನಲ್ಲಿಯೂ ಸ್ವಯಂಚಾಲಿತ ಸೆನ್ಸಾರ್ ಆಧರಿತ ಒಳಗಿನ ಬಾಗಿಲುಗಳು, ಅಗ್ನಿ ನಿರೋಧಕ ವ್ಯವಸ್ಥೆ ಮತ್ತು ಜಾಗತಿಕ ದರ್ಜೆಯ ‘ಕವಚ್’ (Kavach) ರೈಲು ಅಪಘಾತ ನಿಯಂತ್ರಣ ತಂತ್ರಜ್ಞಾನ ಇರಲಿದೆ.
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧತೆ ನಡೆಯುತ್ತಿದೆ. ಸಾಮಾನ್ಯವಾಗಿ ಸದ್ಯ ಬೆಂಗಳೂರು ಮುಂಬೈ ರೈಲು ಪ್ರಯಾಣಕ್ಕೆ 20 ರಿಂದ 24 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ ವಂದೇ ಭಾರತ್ ಸ್ಲೀಪರ್ ರೈಲು 14 ರಿಂದ 18 ಗಂಟೆ ಸಮಯ ಸಾಕು.
55
ಮಾರ್ಗ ಯಾವುದು
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಅಥವಾ ಯಶವಂತಪುರ ರೈಲು ನಿಲ್ದಾಣದಿಂದ ಈ ಸ್ಲೀಪರ್ ರೈಲು ಹೊರಡಲಿದೆ. ಕರ್ನಾಟಕದ ಪ್ರಮುಖ ನಗರಗಳಾದ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ ಮೂಲಕ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತಲುಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ