ಮೊದಲ ರಾತ್ರಿಯಂದೇ ವರನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ವಧು ಕೋಣೆಯಲ್ಲಿ ಲೈಟ್ ತರಲು ಕೇಳಿದಾಗ ಹೊರಹೋದ ಮೊಹಸಿನ್ ಎಂಬ ವರ ಮತ್ತೆ ಹಿಂತಿರುಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೊದಲ ರಾತ್ರಿ ಸುಮಾರು 12 ಗಂಟೆಗೆ ಹೊರ ಬಂದ ವರ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮೊಹಸಿನ್ ನಾಪತ್ತೆಯಾಗಿದ್ದು. ಪೊಲೀಸರು ವರನಿಗಾಗಿ ಗಂಗಾ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
25
ಕೋಣೆಯಿಂದ ಹೊರ ಬಂದ ವರ
ಬುಧವಾರ ಮುಜಫರ್ ನಗರ ಖತೌಲಿಯ ಯುವತಿ ಜೊತೆ ಮೊಹಸಿನ್ ಅಲಿಯಾಸ್ ಮೋನು ಮದುವೆಯಾಗಿತ್ತು. ಅದೇ ದಿನ ರಾತ್ರಿ ವಧು ಜೊತೆ ಮೋನು ತನ್ನೂರಿಗೆ ಆಗಮಿಸಿದ್ದನು. ಅದೇ ರಾತ್ರಿ ಫಸ್ಟ್‌ನೈಟ್‌ಗೂ ಸಿದ್ಧತೆ ಮಾಡಲಾಗಿತ್ತು. ಅಂದು ರಾತ್ರಿ 12 ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಮೋನು ಮತ್ತೆ ಹಿಂದಿರುಗಿ ಬಾರದ ಕಾರಣ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
35
ಕೋಣೆಯಿಂದ ಹೊರ ಬಂದಿದ್ಯಾಕೆ?
ಯಾವುದೇ ಅಡೆತಡೆಗಳಿಲ್ಲದೇ ಕುಟುಂಬಸ್ಥರ ಸಮ್ಮುಖದಲ್ಲಿ ಮೋನು ಮದುವೆ ನಡೆದಿತ್ತು. ಕೋಣೆಯಲ್ಲಿ ಹಣ್ಣು-ಹಾಲು ಇರಿಸಲಾಗಿತ್ತು. ಮೋನು ಸಹ ಕೋಣೆಯೊಳಗೆ ಹೋಗಿದ್ದನು. ಕೋಣೆಯಲ್ಲಿನ ಲೈಟ್ಸ್ ತುಂಬಾ ಪ್ರಕಾಶಮಾನವವಾಗಿದ್ದು, ಚಿಕ್ಕದಾದ ಲೈಟ್ ತರುವಂತೆ ವಧು ಕೇಳಿಕೊಂಡಿದ್ದಾಳೆ. ಚಿಕ್ಕ ಪ್ರಕಾಶಮಾನ ಲೈಟ್ ತರೋದಾಗಿ ಹೇಳಿ ಮೋನು ಕೋಣೆಯಿಂದ ಹೊರ ಬಂದಿದ್ದನು ಎಂದು ವರದಿಯಾಗಿದೆ
ಗುರುವಾರ ಬೆಳಗ್ಗೆ ಮೋನು ಸೋದರಿಯರ ಮದುವೆ ನಡೆಯಬೇಕಿತ್ತು. ಆದ್ರೆ ಮೋನು ನಾಪತ್ತೆಯಾದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರು ಸೇರಿದಂತೆ ಆಪ್ತರು ಮೋನುಗಾಗಿ ಹುಡುಕಾಟ ನಡೆಸಿದ್ದಾರೆ. ಮೋನು ಸುಳಿವು ಸಿಗದಿದ್ದಾಗ ಪೊಲೀಸರ ಗಮನಕ್ಕೆ ವಿಷಯವನ್ನು ತಂದಿದ್ದಾರೆ. ಮದುವೆಯಲ್ಲಿ ಅತ್ಯಂತ ಖುಷಿಯಾಗಿದ್ದನು. ಎರಡು ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ದಿಡೀರ್ ವರ ನಾಪತ್ತೆಯಾಗಿದ್ದಕ್ಕೆ ಕುಟುಂಬಸ್ಥರು ಆತಂತಕ್ಕೊಳಗಾಗಿದ್ದಾರೆ.
ಮೊಹಸಿನ್ ಅಲಿಯಾಸ್ ಮೋನು ಎಂಬ ಯುವಕನ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಮೋನು ಕೊನೆಯ ಬಾರಿ ಗಂಗಾನದಿ ದಡದಲ್ಲಿ ಕಾಣಿಸಿಕೊಂಡಿದ್ದಾನೆ. ಹಾಗಾಗಿ ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತದೆ. ಹಾಗೆಯೇ ಮೋನು ಬೇರೆ ಎಲ್ಲಾದ್ರೂ ಹೋಗಿರಬಹುದಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಶುತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.