ಲುಲು ಮಾಲ್ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ, ಪೊಲೀಸರ ದೌಡು; ನಗರಾದ್ಯಂತ ಬಿಗಿ ಭದ್ರತೆ

Published : Nov 27, 2025, 02:15 PM IST

ಲುಲು ಮಾಲ್‌ ಶೌಚಾಲಯದಲ್ಲಿ ಬಾಂಬ್ ಹಾಕಿ ಸ್ಪೋಟಿಸುವ ಪತ್ರ ಲಭ್ಯವಾದ ಕೂಡಲೇ, ಮಾಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಮಾಲ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಿತು.  ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ.

PREV
15
ಲುಲು ಮಾಲ್ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ

ಲಕ್ನೋ ನಗರದ ಲುಲು ಮಾಲ್‌ನ ವಾಶ್‌ರೂಮ್‌ನಲ್ಲಿ ನವೆಂಬರ್ 24 ರಂದು ಪತ್ತೆಯಾದ ಪತ್ರದಲ್ಲಿ, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.

25
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ದೌಡು
ಬೆದರಿಕೆ ಪತ್ರ ಸಿಕ್ಕಿದ ತಕ್ಷಣ, ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಮಾಲ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಿ, ಯಾವುದೇ ಸ್ಫೋಟಕಗಳಿಲ್ಲ ಎಂದು ಖಚಿತಪಡಿಸಿಕೊಂಡರು.
35
ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಬಿಗಿ ಭದ್ರತೆ
ಬಾಂಬ್ ಬೆದರಿಕೆಯ ನಂತರ, ಲಕ್ನೋದಾದ್ಯಂತ ಜನನಿಬಿಡ ಸ್ಥಳಗಳು, ಸಾರಿಗೆ ಕೇಂದ್ರಗಳು ಮತ್ತು ಪ್ರಮುಖ ಕಟ್ಟಡಗಳಲ್ಲಿ ಭದ್ರತೆಯನ್ನು ಹೆಚ್ಚಿಸಿ, ವ್ಯಾಪಕ ತಪಾಸಣೆ ನಡೆಸಲಾಯಿತು.
45
ದುಷ್ಕರ್ಮಿಗಳ ಪತ್ತೆಗಾಗಿ ಸಿಸಿಟಿವಿ ಪರಿಶೀಲನೆ
ಮಾಲ್ ಆವರಣದಲ್ಲಿ ಬೆದರಿಕೆ ಪತ್ರವನ್ನು ಇಟ್ಟ ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
55
ಕೆಲಕಾಲ ಆತಂಕದ ವಾತಾವರಣ
ಲಕ್ನೋದ ಪ್ರಮುಖ ಶಾಪಿಂಗ್ ತಾಣವಾಗಿರುವ ಲುಲು ಮಾಲ್‌ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Read more Photos on
click me!

Recommended Stories