ಗೋವಾ ಇನ್ನು ರಾಮಮಯ: ವಿಶ್ವದ ಅತಿ ಎತ್ತರದ ಪ್ರತಿಮೆ ಪ್ರಧಾನಿಯಿಂದ ಅನಾವರಣ- ರೋಚಕ ಮಾಹಿತಿ ಇಲ್ಲಿದೆ

Published : Nov 27, 2025, 12:07 PM IST

ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ ಮಠದ 550ನೇ ಸಂಸ್ಥಾಪನಾ ವಾರ್ಷಿಕೋತ್ಸವದ ಅಂಗವಾಗಿ, ವಿಶ್ವದ ಅತ್ಯಂತ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯು ಅನಾವರಣಗೊಳ್ಳಲಿದೆ.  ಗೋವಾ ಮತ್ತು ಶ್ರೀರಾಮಚಂದ್ರನ ನಡುವಿನ ಅವಿನಾಭಾವ ಸಂಬಂಧ ಹೊಂದಿದೆ. 

PREV
17
ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ

ಅಯೋಧ್ಯೆ ಶ್ರೀರಾಮ ಮಂದಿರದ ಸ್ವರ್ಣ ಶಿಖರದ ಮೇಲೆ ಮೊನ್ನೆಯಷ್ಟೇ ಪ್ರಧಾನಿ ಧರ್ಮ ಧ್ವಜಾರೋಹಣ ನೆರವೇರಿಸಿ ರಾಮಭಕ್ತರನ್ನು ಪುಳಕಿತರನ್ನಾಗಿ ಮಾಡಿದ ನಡುವೆಯೇ ಇದೀಗ ಗೋವಾ ಕೂಡ ರಾಮಮಯವಾಗ ಹೊರಟಿದೆ. ವಿಶ್ವದ ಅತ್ಯಂತ ಎತ್ತರದ ಶ್ರೀರಾಮಚಂದ್ರನ ಪ್ರತಿಮೆ ನಾಳೆ ಗೋವಾದಲ್ಲಿ ಅನಾವರಣಗೊಳ್ಳಲಿದೆ.

27
ಸಂಸ್ಥಾಪನಾ ವಾರ್ಷಿಕೋತ್ಸವ

ಗೋವಾದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ ಮಠದಲ್ಲಿ ನಾಳೆ ಅಂದರೆ ನವೆಂಬರ್ 28ರಂದು ಪ್ರಧಾನಿ, ಇದನ್ನು ಉದ್ಘಾಟಿಸಲಿದ್ದಾರೆ. ಮಠದ 550ನೇ ಸಂಸ್ಥಾಪನಾ ವಾರ್ಷಿಕೋತ್ಸವದ 11 ದಿನಗಳ ಆಚರಣೆಯ ಭಾಗವಾಗಿ ಈ ಉದ್ಘಾಟನೆ ನಡೆಯಲಿದೆ.

37
550 ವರ್ಷ ಪೂರ್ಣ

ಮಠ ಸಂಪ್ರದಾಯದ 550 ವರ್ಷಗಳನ್ನು ಗುರುತಿಸಲು ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗೋವಾದಲ್ಲಿರುವ ಮಠದ ಆವರಣವನ್ನು 370 ವರ್ಷಗಳ ಹಿಂದೆ ಕೆನಕೋನಾದ (ದಕ್ಷಿಣ ಗೋವಾ ಜಿಲ್ಲೆ) ಪಾರ್ಟಗಲ್ ಗ್ರಾಮದಲ್ಲಿ ನಿರ್ಮಿಸಲಾಗಿದೆ.

47
ಕಂಚಿನ ಲೋಹ

ಈ ಪ್ರತಿಮೆಯನ್ನು ಕಂಚಿನ ಲೋಹದಿಂದ ಮಾಡಲಾಗಿದ್ದು, ಗುಜರಾತ್‌ನಲ್ಲಿ ಏಕತಾ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ಸುತಾರ್ ಅವರು ಶ್ರೀರಾಮನ ಪ್ರತಿಮೆಯನ್ನು ರೆಡಿ ಮಾಡಿದ್ದಾರೆ.

57
ಗೋವಾಕ್ಕೂ ರಾಮನಿಗೂ ಏನು ಸಂಬಂಧ?

ಹಾಗೆ ನೋಡಿದರೆ, ಗೋವಾಕ್ಕೂ ಶ್ರೀರಾಮಚಂದ್ರನಿಗೂ ಅವಿನಾಭಾವ ಸಂಬಂಧವಿದೆ. ಗೋವಾದಲ್ಲಿನ 'ಕಬೋ ಡಿ ರಾಮ' ಕೋಟೆಯು ಭಗವಾನ್ ರಾಮ ಮತ್ತು ಸೀತೆಯು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಆಶ್ರಯ ಪಡೆದಿದ್ದರು ಎಂಬ ನಂಬಿಕೆಯೊಂದಿಗೆ ಸಂಬಂಧ ಹೊಂದಿದೆ.

67
ಕಬೋ ಡಿ ರಾಮ

ದಕ್ಷಿಣ ಗೋವಾದ ಈ ಕೋಟೆಯು ಹಿಂದೂ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿತು. ಇದು ಕರಾವಳಿ ತೀರದಲ್ಲಿರುವ ಸಾಲ್ ನದಿಯ ಮುಖಭಾಗದಲ್ಲಿದೆ.

77
ಋಷಿ ವಿಶ್ವಾಮಿತ್ರ

ಋಷಿ ವಿಶ್ವಾಮಿತ್ರರ ಆಧ್ಯಾತ್ಮಿಕ ವಂಶಸ್ಥರು ಗೋವಾದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೌಶಿಕ ಗೋತ್ರದ ಕುಶಸ್ಥಲಿ ಮತ್ತು ಕೆಲೋಶಿ ಗ್ರಾಮಗಳಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಗೋವಾದ ಕೊಂಕಣ ಮರಾಠರ ಗುರುತಿನೊಂದಿಗೆ ಗಣನೀಯ ಪಾತ್ರ ವಹಿಸಿದ್ದಾರೆ ಮತ್ತು ಅವರು ಕೌಶಿಕ ಗೋತ್ರಕ್ಕೆ ಸೇರಿದವರಾಗಿದ್ದಾರೆ.

Read more Photos on
click me!

Recommended Stories