ತತ್ಕಾಲ್ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಮಹತ್ತರ ಬದಲಾವಣೆ, ಮಧ್ಯವರ್ತಿಗಳು, ನಕಲಿ ಖಾತೆಗಳ ಮೂಲಕ ತತ್ಕಾಲ್ ಟಿಕೆಟ್ ಬುಕಿಂಗ್ ಪರಿಣಾಮ ಪ್ರಯಾಣಿಕನಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಸಮಸ್ಯೆಗೆ ಸ್ಮಾರ್ಟರ್ ಪರಿಹಾರ ನೀಡಲಾಗಿದೆ.
ಭಾರತೀಯ ರೈಲು ಟಿಕೆಟ್ ಬುಕಿಂಗ್ ಕನ್‌ಫರ್ಮೇಶನ್ ಪ್ರಯಾಸದ ಕೆಲಸ. ಪ್ರಯಾಣದ ದಿನ ಹತ್ತಿರಬರುತ್ತಿದ್ದಂತೆ ಟಿಕೆಟ್ ಬುಕಿಂಗ್ ಮಾಡಿದರೆ ವೈಟಿಂಗ್ ಲಿಸ್ಟ್ ಅಥವಾ ಬುಕಿಂಗ್ ಲಭ್ಯವಿರುವುದಿಲ್ಲ. ಹೀಗಾಗಿ ಪ್ರಯಾಣಿಕರು ತತ್ಕಾಲ್ ಟಿಕೆಟ್ ಬುಕ್ ಮಾಡಲು ಕಾಯಬೇಕಾಗುತ್ತದೆ. ಆದರೆ ತತ್ಕಾಲ್ ಟಿಕೆಟ್ ಬುಕಿಂಗ್ ಓಪನ್ ಆದ ಬೆನ್ನಲ್ಲೇ ಮಧ್ಯವರ್ತಿಗಳು, ನಕಲಿ ಖಾತೆಗಳ ಮೂಲಕ ಟಿಕೆಟ್ ಸೋಲ್ಡ್ ಔಟ್ ಆಗಲಿದೆ. ಇದರಿಂದ ಪ್ರಯಾಣಿಕನಿಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆಗೆ ಇದೀಗ ಸ್ಮಾರ್ಟರ್ ಪರಿಹಾರ ನೀಡಲಾಗಿದೆ.
25
ತತ್ಕಾಲ್ ಟಿಕೆಟ್ ಬುಕಿಂಗ್ ನೀತಿ ಬದಲು
ತತ್ಕಾಲ್ ಕನ್‌ಫರ್ಮ್ ಟಿಕೆಟ್ ಪಡೆಯಲು ಅಸಲಿ ಪ್ರಯಾಣಿಕ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಎಜೆಂಟ್‌ಗಳು, ನಕಲಿ ಖಾತೆಗಳು ಸೇರಿದಂತೆ ಕೆಲ ಮಧ್ಯವರ್ತಿಗಳ ತತ್ಕಾಲ್ ಟಿಕೆಟ್ ಬುಕಿಂಗ್ ಓಪನ್ ಆದ ತಕ್ಷಣವೇ ಬ್ಲಾಕ್ ಮಾಡುತ್ತಿದ್ದರು. ಇದೀಗ ರೈಲ್ವೇ ಇಲಾಖೆಯ IRCTC ವೆರಿಫೈಡ್ ಖಾತೆಗಳಿಂದ ಮಾತ್ರ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯ. ನಕಲಿ ಖಾತೆ, ಎಜೆಂಟ್‌ಗಳ ವೆರಿಫಿಕೇಶನ್ ಇಲ್ಲದ ಖಾತೆಗಳಿಂದ ಟಿಕೆಟ್ ಬುಕಿಂಗ್ ಸಾಧ್ಯವಿಲ್ಲ.
35
ಫಿಲ್ಟರ್ ಜಾರಿಗೊಳಿಸಿದ ಇಲಾಖೆ
ಅಟೋಮ್ಯಾಟಿಕ್ ಆಗಿ, ಆಟೋಮ್ಯಾಟೇಡ್ ಬಾಟ್ಸ್ ಮೂಲಕ ತಕ್ಷಣವೇ ಟಿಕೆಟ್ ಬ್ಲಾಕ್ ಮಾಡುವ ಪದ್ಧತಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇದಕ್ಕಾಗಿ ರೈಲ್ವೇ ಇಲಾಖೆ ಫಿಲ್ಟರ್ಸ್ ಸೇರಿಸಲಾಗಿದೆ. ಹೀಗಾಗಿ ನಕಲಿ ಖಾತೆಗಳ ಮೂಲಕ, ಅಥವಾ ಇತರ ಆಟೋಮೇಟೆಡ್ ಮೂಲಕ ಬುಕಿಂಗ್ ಸಾಧ್ಯವಲ್ಲ.
ತತ್ಕಾಲ್ ಟಿಕೆಟ್ ಬುಕಿಂಗ್ ವೇಳೆ ಮತ್ತೊಂದು ಸಮಸ್ಯೆಯಾಗುವುದು ಪಾವತಿ. ಪಾವತಿ ವೇಳೆ ಕೆಲ ತಾಂತ್ರಿಕ ಕಾರಣಗಳಿಂದ ಪಾವತಿ ಆಗದೆ ಫೈಲ್ಯೂರ್ ಆಗಲಿದೆ. ಈ ವೇಳೆ ಟಿಕೆಟ್ ಕನ್‌ಫರ್ಮೇಶನ್ ಸಮಸ್ಯೆಯಾಗಲಿದೆ. ಇದರಿಂದ ನೈಜ ಪ್ರಯಾಣಿಕರಿಗೆ ಟಿಕೆಟ್ ಕನ್‌ಫರ್ಮೇಶನ್ ಸಿಗದೆ ಪರದಾಡುತ್ತಿದ್ದರು.ಇದೀಗ ಪೇಮೆಂಟ್ ಸಮಸ್ಯೆಗೂ ಪರಿಹಾರ ನೀಡಲಾಗಿದೆ. ತ್ವರಿತ ಹಾಗೂ ಅಡೆ ತಡೆ ಇಲ್ಲದ ಪೇಮೆಂಟ್ ವ್ಯವಸ್ಥೆ ಜಾರಿ ಮಾಡಲಾಗಿದೆ.
55
ಎಜೆಂಟ್‌ಗಳಿಗೆ ನಿರ್ಬಂಧ
ತತ್ಕಾಲ್ ಟಿಕೆಟ್ ಬುಕಿಂಗ್ ವೇಳೆ ಎಜೆಂಟ್ ಸದಸ್ಯರು ತಕ್ಷಣವೇ ಟಿಕೆಟ್ ಬ್ಲಾಕ್ ಮಾಡುವ ಕಾರಣ ಪರಿಹಾರ ನೀಡಲಾಗಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಆರಂಭಗೊಂಡ ತಕ್ಷಣವೇ ಎಜೆಂಟ್ ಟಿಕೆಟ್ ಬುಕಿಂಗ್‌ಗೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ತತ್ಕಾಲ್ ಟಿಕೆಟ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗಲಿದೆ.
ಎಜೆಂಟ್‌ಗಳಿಗೆ ನಿರ್ಬಂಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ