ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ ಹತ್ಯೆ ಪ್ರಕರಣ ಟ್ವಿಸ್ಟ್, ಹತ್ಯೆ ಮಾಡಿದ್ದು ಬೇರೆ ಯಾರು ಅಲ್ಲ ಸ್ವತಃ ಪತಿ. ಈ ರೋಚಕ ಮಾಹಿತಿ ಕೊನೆಯ ಫೋನ್ ಕಾಲ್‌ನಲ್ಲಿ ಬಯಲಾಗಿದೆ. ಅಷ್ಟಕ್ಕೂ ಏನಿದು ಘಟನೆ?
ದೆಹಲಿಯ ಸ್ಪೆಷಲ್ ವೆಪನ್ಸ್ ಆ್ಯಂಡ್ ಟಾಕ್ಟಿಸ್ (SWAT) ಪೊಲೀಸ್ ಕಮಾಂಡೋ ಕಾಜಲ್ ದುರಂತ ಅಂತ್ಯಕಂಡಿದ್ದಾರೆ. ಕಾಜಲ್ ಹತ್ಯೆ ಡೆಲ್ಲಿ ಪೊಲೀಸ್ ಕಮಾಂಡೋ ವಿಭಾಗವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣದ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಈ ಹತ್ಯೆ ಮಾಡಿದ್ದು ಬೇರೆ ಯಾರು ಅಲ್ಲ ಅದು ಸ್ವತಃ ಕಾಜಲ್ ಪತಿ ಅಂಕುರ್ ಚೌಧರಿ ಎಂದು ವರದಿಗಳು ಹೇಳಿದೆ.
26
ಕಾಜಲ್ ಕತೆ ಮುಗಿಸಿದ ಪತಿ
ಕಾಜಲ್ ದೆಹಲಿ SWAT ವಿಭಾಗದಲ್ಲಿ ದಕ್ಷ ಮಹಿಳಾ ಕಮಾಂಡೋ ಅಧಿಕಾರಿಯಾಗಿದ್ದರು. ಆದರೆ ಮನೆಯಲ್ಲಿ ಗಂಡನ ಟಾರ್ಚರ್‌ಗೆ ಬೇಸತ್ತಿದ್ದಳು. ವರದಕ್ಷಿಣೆ ಕಿರುಕುಳ, ಹಲ್ಲೆಗಳಿಂದ ಪ್ರತಿ ದಿನ ನೋವು ಅನುಭವಿಸುತ್ತಿದ್ದಳು. ಆದರೂ ತಾಳ್ಮೆಯಿಂದ ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದ ಕಾಜಲ್ ಮೇಲೆ ಗಂಡ ವರದಕ್ಷಿಣ ವಿಚಾರದಲ್ಲಿ ಮತ್ತೆ ಜಗಳವಾಡಿದ್ದಾನೆ. ಕಮಾಂಡೋ ಅಧಿಕಾರಿಯಾಗಿದ್ದ ಕಾರಣ ಫಿಸಿಕಲ್ ಫಿಟ್ನೆಸ್‌ಗೆ ಕಾಜಲ್ ಡಂಬೆಲ್ಸ್ ಸೇರಿದಂತೆ ಇತರ ಕೆಲ ವ್ಯಾಯಮಗಳನ್ನು ಮನೆಯಲ್ಲೇ ಮಾಡುತ್ತಿದ್ದರು. ಇದೇ ಡಂಬಲ್ಸ್ ತೆಗೆದು ಕಾಜಲ್ ತಲೆಗೆ ಹಲ್ಲೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಗಳು ಹೇಳುತ್ತಿದೆ.
36
ಸಹೋದರನ ಜೊತೆಗೆ ಫೋನ್‌ನಲ್ಲಿರುವಾಗಲೇ ಹಲ್ಲೆ
ಕಾಜಲ್ ತನ್ನ ಸಹೋದರ ನಿಖಿಲ್‌ಕೆ ಕರೆ ಮಾಡಿ ಗಂಡನ ಕಿರುಕುಳ ಕುರಿತು ಹೇಳಿದ್ದಾಳೆ. ಅಷ್ಟರಲ್ಲೇ ಕಾಜಲ್ ಬಳಿ ಬಂದ ಗಂಡ ಅಂಕುರ್ ಚೌಧರಿ ಡಂಬಲ್ಸ್ ಮೂಲಕ ಹಲ್ಲೆ ಮಾಡಿದ್ದಾನೆ. ಎರಡೇ ಏಟಿಗೆ ಕಾಜಲ್ ನೆಲಕ್ಕುರುಳಿ ಬಿದ್ದಿದ್ದಾಳೆ, ಚೀರಾಟ ಕೇಳಿಸಿದೆ. ಸಹೋದರ ನಿಖಿಲ್ ಆಘಾತಗೊಂಡಿದ್ದಾನೆ. ಏನಾಯಿತು ಏನಾಯಿತು ಎಂದು ಕೇಳುತ್ತಿದ್ದಾನೆ. ಪತ್ನಿಯ ಕೈಯಲ್ಲಿದ್ದ ಫೋನ್ ತೆಗೆದು ಸಹೋದರಿಯನ್ನು ಹತ್ಯೆ ಮಾಡಿದ್ದೇನೆ ಎಂದು ಫೋನ್ ಕಟ್ ಮಾಡಿದ್ದಾನೆ ಎಂದು ನಿಖಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಹೋದರಿ ಕರೆ ಕಡಿತಗೊಳ್ಳುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ನಿಖಿಲ್ ಸ್ಥಳಕ್ಕೆ ಧಾವಿಸಿದ್ದಾನೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲೆ ಸಹೋದರಿ ಕಾಜಲ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
56
ಪತಿ ಅರೆಸ್ಟ್ ಮಾಡಿದ ಪೊಲೀಸ್
ಅಂಕುರ್ ಚೌಧರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತ ಅಂಕುರ್ ಚೌಧರಿ ತಾಯಿ ಸೇರಿದಂತೆ ಕಟುಂಬಸ್ಥರ ವಿರುದ್ಧ ನಿಖಿಲ್ ದೂರು ದಾಖಲಿಸಿದ್ದಾರೆ. ಅಂಕುರ್ ಚೌಧರಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರು. ಸಹೋದರಿ ಪೊಲೀಸ್ ಕಮಾಂಡೋ ಆಗಿದ್ದ ಕಾರಣ ಪ್ರತಿ ದಿನ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು ಎಂದು ನಿಖಿಲ್ ಆರೋಪಿಸಿದ್ದಾನೆ. ಬಿಟ್ಟು ಬರವಂತೆ ಸಹೋದರಿಗೆ ಸೂಚಿಸಿದ್ದರು. ಆದರೆ ತಾಳ್ಮೆಯಿಂದ ಇರುತ್ತೇನೆ. ಸಂಸಾರ ಹಾಳಾಗುವುದು ಬೇಡ ಎಂದು ಅಲ್ಲೇ ಉಳಿದುಕೊಂಡಿದ್ದಳು ಎಂದು ನಿಖಿಲ್ ಆರೋಪಿಸಿದ್ದಾರೆ.
66
ಬಿಕ್ಕಿ ಬಿಕ್ಕಿ ಅತ್ತ ನಿಖಿಲ್
ಸಹೋದರಿ ಕರೆ ಮಾಡಿ ಪತಿಯ ಹಲ್ಲೆ ಕುರಿತು ಹೇಳಿದ್ದಳು. ಪತಿ ಹಲ್ಲೆ ಆರಂಭಿಸಿದ ಕೆಲವೇ ನಿಮಿಷದಲ್ಲಿ ನನಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ನಾನು ಸಹೋದರಿ ಜೊತೆ ಮಾತನಾಡುತ್ತಿರುವಾಗಲೇ ಬಲವಾಗಿ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎಂದು ನಿಖಿಲ್ ಕಣ್ಮೀರಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ