ವಿಮಾನ ಪ್ರಯಾಣದಲ್ಲಿ ಮೊಬೈಲ್ ಏರೋಪ್ಲೇನ್ ಮೂಡ್‌ಗೆ ಯಾಕೆ ಹಾಕಬೇಕು? ಸೇಫ್ಟಿ ರೂಲ್

Published : Jan 29, 2026, 07:12 PM IST

ವಿಮಾನ ಪ್ರಯಾಣದಲ್ಲಿ ಮೊಬೈಲ್ ಏರೋಪ್ಲೇನ್ ಮೂಡ್‌ಗೆ ಯಾಕೆ ಹಾಕಬೇಕು? ಸೇಫ್ಟಿ ರೂಲ್ ಏನು ಹೇಳುತ್ತೆ. ವಿಮಾನ ಸಿಬ್ಬಂದಿಗಳು ನೀಡುವ ಸೂಚನೆಯಲ್ಲಿ ಫ್ಲೈಟ್ ಮೂಡ್ ಅಲರ್ಟ್ ಇದ್ದೆ ಇರುತ್ತೆ. ಯಾಕೆ ಮುಖ್ಯ?

PREV
16
ವಿಮಾನ ಪ್ರಯಾಣದ ನಿಯಮ

ವಿಮಾನ ಪ್ರಯಾಣದಲ್ಲಿ ಸುರಕ್ಷತಾ ಫೀಚರ್ಸ್ ಕಡ್ಡಾಯವಾಗಿ ಪಾಲನೆ ಮಾಡಬೇಕು. ವಿಮಾನದಲ್ಲಿ ಬೋರ್ಡಿಂಗ್ ಮಾಡಿದ ಬಳಿಕ ಸಿಬ್ಬಂದಿಗಳು ವಿಮಾನದಲ್ಲಿನ ಸುರಕ್ಷತೆ, ಪಾಲನೆ ಮಾಡಬೇಕಾದ ನಿಯಮಗಳ ಕುರಿತು ಹೇಳುತ್ತಾರೆ. ಸೀಟ್ ಬೆಲ್ಟ್, ತುರ್ತು ಸಂದರ್ಭದಲ್ಲಿ ಏನು ಮಾಡಬೇಕು, ಉಸಿರಾಟ ಸಮಸ್ಯೆಯಾದಾಗ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡುತ್ತಾರೆ. ಈ ವೇಳೆ ಎಲ್ಲಾ ಪ್ರಯಾಣಿಕರು ತಮ್ಮ ಮೊಬೈಲ್ ಫ್ಲೈಟ್ ಮೂಡ್‌ಗೆ ಹಾಕಲು ಸೂಚಿಸುತ್ತಾರೆ.

26
ಫ್ಲೈಟ್ ಮೂಡ್ ಹಿಂದಿನ ಸುರಕ್ಷತೆ

ಫ್ಲೈಟ್ ಮೂಡ್ ಹಿಂದೆ ವಿಮಾನದ ಸುರಕ್ಷತೆ ಅಡಗಿದೆ. ಸದ್ಯದ ನೆಟ್‌ವರ್ಕ್ ಅಷ್ಟಾಗಿ ಫ್ಲೈಟ್ ಮೂಡ್ ಅಪಾಯ ಆಹ್ವಾನಿಸದಿದ್ದರೂ, ಸಣ್ಣ ಸಿಗ್ನಲ್ ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ಅತ್ಯಂತ ಪ್ರಮುಖವಾಗಿದೆ.ಮೊಬೈಲ್ ಫೋನ್‌ನನ್ನು ಏರೋಪ್ಲೇನ್ ಮೂಡ್‌ಗೆ ಹಾಕಿದ ಬಳಿಕ ಬ್ಲೂಟೂತ್ ಹಾಗೂ ವೈಫೈ ಮಾತ್ರ ಕೆಲಸ ಮಾಡುತ್ತದೆ. ಮೊಬೈಲ್ ನೆಟ್‌ವರ್ಕ್ ಸಂಪೂರ್ಣ ಬ್ಲಾಕ್ ಆಗಲಿದೆ.

36
ಫ್ಲೈಟ್ ಮೂಡ್‌ನಿಂದ ಸಮಸ್ಯೆ ಏನು?

ಎವಿಯೇಶನ್ ತಜ್ಞರು ಹೇಳುವ ಪ್ರಕಾರ ಮೊಬೈಲ್ ಸಿಗ್ನಲ್ ಆನ್ ಇದ್ದರೆ, ಅಂದರೆ ಫ್ಲೈಟ್ ಮೂಡ್ ಹಾಕದೇ ಇದ್ದರೆ ಒಂದು ಫೋನ್‌ನಿಂದ ವಿಮಾನಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಆದರೆ ವಿಮಾನದಲ್ಲಿರುವ ಎಲ್ಲರ ಫೋನ್ ನೆಟ್‌ವರ್ಕ್ ಕನೆಕ್ಷನ್ ಏರ್‌ಕ್ರಾಫ್ಟ್ ಕಮ್ಯೂನಿಕೇಶನ್ ಸಿಸ್ಟಮ್ ಮೇಲೆ ಪರಿಣಾಮ ಬೀರಲಿದೆ. ಇದು ವಿಮಾನದ ಟೇಕ್ ಆಫ್ ಹಾಗೂ ಲ್ಯಾಡಿಂಗ್ ವೇಳೆ ಸಮಸ್ಯೆ ತಂದೊಡ್ಡಲಿದೆ.

46
ನೆಟ್‌ವರ್ಕ್ ಕನೆಕ್ಷನ್

ವಿಮಾನ ಪ್ರಯಾಣದ ವೇಳೆ ಫ್ಲೈಟ್ ಮೂಡ್ ಆನ್ ಮಾಡದಿದ್ದರೆ, ಮೊಬೈಲ್ ವಿವಿಧ ನೆಟ್‌ವರ್ಕ್ ಸರ್ಚ್ ಮಾಡಲಿದೆ. ಎಲ್ಲಾ ಮೊಬೈಲ್ ಕೂಡ ಭೂಮಿಯಲ್ಲಿನ ಟವರ್ ಅವಲಂಬಿಸುತ್ತದೆ. ನೆಟ್‌ವರ್ಕ್ ಕನೆಕ್ಷನ್‌ಗೆ ಹುಡುಕಾಟ ನಡೆಸಲಿದೆ. ಎಲ್ಲರ ಫೋನ್ ಇದೇ ರೀತಿ ಸರ್ಚ್ ಮಾಡಿದರೆ ಅದು ಏರ್‌ಕ್ರಾಫ್ಟ್ ಕನೆಕ್ಷನ್ ಮೇಲೆ ಹೊಡೆತ ನೀಡಲಿದೆ. ಏರ್‌ಕ್ರಾಫ್ಟ್ ನ್ಯಾವಿಗೇಶನ್ ಹಾಗೂ ಕಂಟ್ರೋಲ್ ಸಿಸ್ಟಮ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

56
ಪೈಲೆಟ್ ಹಾಗೂ ಟ್ರಾಫಿಕ್ ಕಂಟ್ರೋಲ್ ಸಂಪರ್ಕ

ಪೈಲೆಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ ನಡುವಿನ ಕನೆಕ್ಷನ್‌ಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತಂದೊಡ್ಡಲಿದೆ. ವಿಮಾನ ಪ್ರಯಾಣದಲ್ಲಿ ಟೇಕ್ ಆಫ್ ಹಾಗೂ ಲ್ಯಾಡಿಂಗ್ ಅತ್ಯಂತ ಪ್ರಮುಖ ಹಾಗೂ ಅತೀ ಅಪಾಯದ ಸಂದರ್ಭ. ಮಿಲಿ ಸೆಕೆಂಡ್ ತಪ್ಪು ಕೂಡ ದುರಂತಕ್ಕೆ ಕಾರಣವಾಗಲಿದೆ. ಇದೇ ಕಾರಣದಿಂದ ಫ್ಲೈಟ್ ಮೂಡ್ ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ.

66
ಅಧುನಿಕ ಏರ್‌ಕ್ರಾಫ್ಟ್ ಸಿಸ್ಟಮ್‌ನಲ್ಲಿ ಸಮಸ್ಯೆ ಕಡಿಮೆ

ಆಧುನಿಕ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಈ ವಿಮಾನಗಳ ಕಮ್ಯೂನಿಕೇಶನ್ ನೆಟ್‌ವರ್ಕ್‌ಗೆ ಮೊಬೈಲ್ ಸಿಗ್ನಲ್ ಸರ್ಚ್ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ. ಆದರೂ ಕನಿಷ್ಠ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ಸುರಕ್ಷತಾ ದೃಷ್ಟಿಯಿಂದ ಮೊಬೈಲ್ ಫ್ಲೈಟ್ ಮೂಡ್‌ಗೆ ಹಾಕುವುದು ಉತ್ತಮ.

ಅಧುನಿಕ ಏರ್‌ಕ್ರಾಫ್ಟ್ ಸಿಸ್ಟಮ್‌ನಲ್ಲಿ ಸಮಸ್ಯೆ ಕಡಿಮೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories