ಬಂಗಾಳಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತ; ನವೆಂಬರ್‌ನಲ್ಲಿ 4ನೇ ಸೈಕ್ಲೋನ್ ಎಚ್ಚರಿಕೆ

Published : Nov 29, 2026, 09:36 AM IST

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ 'ಕಾನಿ' ಸೃಷ್ಟಿಯಾಗುವ ಎಚ್ಚರಿಕೆ ಇದೆ. ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಡಿಸೆಂಬರ್‌ನಲ್ಲಿ ಚಂಡಮಾರುತವಾಗಿ ಬಲಗೊಳ್ಳಲಿದ್ದು, ಮಳೆ ಮತ್ತು ಬಿರುಗಾಳಿಯ ಭೀತಿ ಎದುರಾಗಿದೆ.

PREV
15
Kaani ಎಂಟ್ರಿ

ಅರ್ನಬ್, ಮುರಸು, ಅಕ್ವಾನ್ ನಂತಹ ಚಂಡಮಾರುತಗಳ ನಂತರ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಸೈಕ್ಲೋನ್ ಸೃಷ್ಟಿಯಾಗುವ ಎಚ್ಚರಿಕೆ ರವಾನೆಯಾಗಿದೆ. ಈ ಚಂಡಮಾರುತಗಳ ಆರ್ಭಟದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ Kaani ಎಂಟ್ರಿ ಕೊಡುತ್ತಿದೆ.

25
ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಈಗಾಗಲೇ ದಕ್ಷಿಣ ಅಂಡಮಾನ್ ಸಮುದ್ರದ ಸುತ್ತಮುತ್ತ ಮೇಲ್ಮೈ ಸುಳಿಗಾಳಿ ಏರ್ಪಟ್ಟಿದೆ. ಇದರ ಪ್ರಭಾವದಿಂದ ನವೆಂಬರ್ 30ರ ವೇಳೆಗೆ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಎಪಿ ವಿಪತ್ತು ನಿರ್ವಹಣಾ ಸಂಸ್ಥೆ (APSDMA) ತಿಳಿಸಿದೆ.

ಸಮುದ್ರದಲ್ಲಿನ ಅನುಕೂಲಕರ ವಾತಾವರಣದಿಂದ ಈ ವಾಯುಭಾರ ಕುಸಿತ ಬಲಗೊಂಡು ತೀವ್ರ ವಾಯುಭಾರ ಕುಸಿತವಾಗಿ, ಆ ನಂತರ ವಾಯುಭಾರ ಮಂಡಲವಾಗಿ ಬದಲಾಗಲಿದೆ. ಮುಂಬರುವ ಡಿಸೆಂಬರ್‌ನಲ್ಲಿ ಇದು ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

35
ಚಂಡಮಾರುತ ಸೃ

ಬಂಗಾಳಕೊಲ್ಲಿಯಲ್ಲಿ ಈ ಚಂಡಮಾರುತ ಸೃಷ್ಟಿಯಾದರೆ ಇದನ್ನು 'ಕಾನಿ' ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಮಾಲ್ಡೀವ್ಸ್ ಸೂಚಿಸಿದೆ. ಈ ಚಂಡಮಾರುತ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ತಮಿಳುನಾಡು ಅಥವಾ ಶ್ರೀಲಂಕಾ ಕರಾವಳಿಯತ್ತ ಚಲಿಸುವ ಸಾಧ್ಯತೆಯಿದೆ.

ಕಾನಿ ಚಂಡಮಾರುತ ಡಿಸೆಂಬರ್ 7ರ ವೇಳೆಗೆ ಕರಾವಳಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಚಂಡಮಾರುತ ಸಮುದ್ರದಲ್ಲೇ ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಅಂದರೆ ಕರಾವಳಿ ತಲಪುವ ವೇಳೆಗೆ ಕಾನಿ ಪ್ರಭಾವ ಕಡಿಮೆಯಿರುತ್ತೆ ಎಂದು ಅಂದಾಜಿಸಲಾಗುತ್ತಿದೆ.

45
ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ

ಕಾನಿ ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು, ರಾಯಲಸೀಮೆ, ಉತ್ತರಾಂಧ್ರದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವುದರ ಜೊತೆಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

55
ದಾಖಲೆ ಪ್ರಮಾಣದ ಮಳೆ

ಹೈದರಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಇನ್ನೆರಡು-ಮೂರು ದಿನ ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈಗಾಗಲೇ ಚಳಿ ವಾತಾವರಣವಿರುವ ಪ್ರದೇಶಗಳಲ್ಲಿ ಮಳೆಯಾದರೆ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories