"200 ಕೋಟಿ ಸಂಬಳ ಪಡೆಯುವ ವ್ಯಕ್ತಿ ಅಧಿಕಾರದಲ್ಲಿದ್ರೆ ಭ್ರಷ್ಟರಾಗಲ್ಲ" ವಿಜಯ್ ಬಗ್ಗೆ ನಟನ ಮಾತು

Published : May 05, 2026, 10:35 AM IST

ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ದೊಡ್ಡ ಸಂಚಲನ ಸೃಷ್ಟಿಸಿದೆ. 200 ಕೋಟಿ ಸಂಬಳ ಪಡೆಯುವ ವ್ಯಕ್ತಿ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ನಟ ರೋನಿ ಡೇವಿಡ್ ಹೇಳಿದ್ದು, ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೇ ಅನಿರೀಕ್ಷಿತ ಸೋಲು ಕಂಡಿದ್ದಾರೆ.

PREV
15
200 ಕೋಟಿ ರೂಪಾಯಿ ಸಂಬಳ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಹೊಸ ಇತಿಹಾಸ ಬರೆದಿದೆ. ಈ ವೇಳೆ ನಟ ಮತ್ತು ಚಿತ್ರಕಥೆಗಾರ ರೋನಿ ಡೇವಿಡ್ ಅವರು ವಿಜಯ್ ಅವರನ್ನು ಹಾಡಿ ಹೊಗಳಿದ್ದಾರೆ. "200 ಕೋಟಿ ರೂಪಾಯಿ ಸಂಬಳ ಪಡೆಯುವ ವ್ಯಕ್ತಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಇರಲು ಸಾಧ್ಯವಿಲ್ಲ" ಎಂದು ರೋನಿ ಡೇವಿಡ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

25
ರೋನಿ ಡೇವಿಡ್ ಹೇಳಿದ್ದೇನು?

ಪ್ರಚಾರದ ಸಮಯದಲ್ಲಿ ವಿಜಯ್, ಆಡಳಿತಾರೂಢ ಡಿಎಂಕೆ ಪಕ್ಷವನ್ನೇ ನೇರವಾಗಿ ಟೀಕಿಸಿದ್ದರು. ಇದನ್ನು ನೋಡಿ ಈ ಮನುಷ್ಯನಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು ಎಂದು ನಾನು ಹಲವು ಬಾರಿ ಯೋಚಿಸಿದ್ದೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯ ಆರ್ಥಿಕತೆಯ ಬಹುಪಾಲು ವಿಜಯ್ ಅವರ ಸಿನಿಮಾಗಳಿಂದಲೇ ಬರುತ್ತದೆ ಎಂಬುದನ್ನು ಅವರ ವಿರೋಧಿಗಳು ಕೂಡ ಒಪ್ಪಿಕೊಳ್ಳುತ್ತಾರೆ" ಎಂದು ರೋನಿ ಡೇವಿಡ್ ಹೇಳಿದ್ದಾರೆ.

35
ಎಕ್ಸಿಟ್ ಪೋಲ್‌

ಎಲ್ಲಾ ಎಕ್ಸಿಟ್ ಪೋಲ್‌ಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ ವಿಜಯ್ ಅವರ ಟಿವಿಕೆ ಪಕ್ಷ, ಚುನಾವಣೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ತಮಿಳುನಾಡಿನ ಒಟ್ಟು 234 ಕ್ಷೇತ್ರಗಳ ಪೈಕಿ, ವಿಜಯ್ ಅವರ ಪಕ್ಷ 108 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಎಐಎಡಿಎಂಕೆ ಮೈತ್ರಿಕೂಟ 53 ಸ್ಥಾನ, ಡಿಎಂಕೆ ಮೈತ್ರಿಕೂಟ 73 ಸ್ಥಾನಗಳನ್ನು ಗೆದ್ದಿದೆ.

45
ತಮಿಳುನಾಡು ವಿಧಾನಸಭಾ ಚುನಾವಣೆ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲೇ ಅನಿರೀಕ್ಷಿತ ಸೋಲು ಕಂಡಿದ್ದಾರೆ. ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಅವರು ಸ್ಟಾಲಿನ್ ಅವರನ್ನೇ ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ. 2021ರಲ್ಲಿ ಇದೇ ಕ್ಷೇತ್ರದಲ್ಲಿ ಸ್ಟಾಲಿನ್ 70,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಮುಖ್ಯಮಂತ್ರಿಯ ಸೋಲು ತಮಿಳುನಾಡು ರಾಜಕೀಯ, ಡಿಎಂಕೆ ವಲಯ ಹಾಗೂ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದು ಸ್ಟಾಲಿನ್ ಅವರ ಚುನಾವಣಾ ಇತಿಹಾಸದಲ್ಲಿ ನಾಲ್ಕನೇ ಸೋಲಾಗಿದೆ.

55
ಸ್ಟಾಲಿನ್ ಸೋಲು

ಸ್ಟಾಲಿನ್ ಅವರನ್ನೇ ಸೋಲಿಸಿದ ವಿ.ಎಸ್. ಬಾಬು, ಹಿಂದೆ ಸ್ಟಾಲಿನ್ ಅವರ ಆಪ್ತರಾಗಿದ್ದವರು ಮತ್ತು ಡಿಎಂಕೆ ಪಕ್ಷದ ಮಾಜಿ ಶಾಸಕರೂ ಹೌದು. 2011ರಲ್ಲಿ ಸ್ಟಾಲಿನ್ ಕೊಳತ್ತೂರಿನಲ್ಲಿ ಸ್ಪರ್ಧಿಸಿದಾಗ, ಆಗ ಡಿಎಂಕೆ ಉತ್ತರ ಚೆನ್ನೈ ಕಾರ್ಯದರ್ಶಿಯಾಗಿದ್ದ ಬಾಬು ಅವರೇ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿದ್ದರು. ಆದರೆ, ಆ ಚುನಾವಣೆಯಲ್ಲಿ ಸ್ಟಾಲಿನ್ ಕೇವಲ 2700 ಮತಗಳ ಅಂತರದಿಂದ ಗೆದ್ದಿದ್ದರಿಂದ, ಬಾಬು ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಸ್ಟಾಲಿನ್ ಜೊತೆಗಿನ ಮುನಿಸಿನಿಂದ ಡಿಎಂಕೆ ತೊರೆದು ಎಐಎಡಿಎಂಕೆ ಸೇರಿದ್ದ ಬಾಬು, ಕಳೆದ ಫೆಬ್ರವರಿಯಲ್ಲಿ ವಿಜಯ್ ಅವರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories