ಕೇರಳಂ BJP ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್‌ಗೆ ಜಯ; ನೇಮಂ ಕ್ಷೇತ್ರದಲ್ಲಿ ಅರಳಿದ ಕಮಲ

Published : May 04, 2026, 04:25 PM IST

ಕೇರಳದ ಪ್ರತಿಷ್ಠಿತ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ 3,800 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಲ್‌ಡಿಎಫ್‌ನ ವಿ. ಶಿವನ್‌ಕುಟ್ಟಿ ಮತ್ತು ಯುಡಿಎಫ್‌ನ ಕೆ.ಎಸ್. ಶಬರಿನಾಥನ್ ವಿರುದ್ಧದ ಈ ತ್ರಿಕೋನ ಸ್ಪರ್ಧೆಯು ತೀವ್ರ ಕುತೂಹಲ ಕೆರಳಿಸಿತ್ತು.

PREV
16
ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಗೆಲುವು

ಕೇರಳದ ಪ್ರತಿಷ್ಠಿತ ನೇಮಂ ವಿಧಾನಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ 3,800 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಕ್ಷೇತ್ರ ಇದಾಗಿತ್ತು. ಕೇರಳ ವಿಧಾನಸಭೆಗೆ ಬಿಜೆಪಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದೇ ಇದೇ ಕ್ಷೇತ್ರದಿಂದ ಅನ್ನೋದು ವಿಶೇಷ.

26
ಬಿಜೆಪಿ ಮುನ್ನಡೆ

ಮತ ಎಣಿಕೆ ಶುರುವಾದಾಗಿನಿಂದಲೂ ನೇಮಂನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಪ್ರಮುಖ ಎದುರಾಳಿಯಾಗಿದ್ದ ಎಲ್‌ಡಿಎಫ್‌ನ ವಿ. ಶಿವನ್‌ಕುಟ್ಟಿ ಅವರಿಗೆ 39,147 ಮತಗಳು ಸಿಕ್ಕರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ 23,099 ಮತಗಳನ್ನು ಪಡೆದರು.

36
ನೇಮಂನಲ್ಲಿ ತ್ರಿಕೋನ ಸ್ಪರ್ಧೆ

ಕೇರಳದ ಪಿಣರಾಯಿ ವಿಜಯನ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿರುವ ವಿ. ಶಿವನ್‌ಕುಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಯುಡಿಎಫ್‌ನಿಂದ ಕೆ.ಎಸ್. ಶಬರಿನಾಥನ್ ಕಣಕ್ಕಿಳಿದಿದ್ದರಿಂದ ನೇಮಂನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈ ಕ್ಷೇತ್ರ ತಿರುವನಂತಪುರ ಕಾರ್ಪೊರೇಷನ್‌ನ 23 ವಾರ್ಡ್‌ಗಳನ್ನು ಒಳಗೊಂಡಿದೆ. 2025ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಈ ವಾರ್ಡ್‌ಗಳಲ್ಲಿ 6,000ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿತ್ತು. ಇದೇ ಆತ್ಮವಿಶ್ವಾಸದಿಂದ ಬಿಜೆಪಿ ತನ್ನ ರಾಜ್ಯಾಧ್ಯಕ್ಷರನ್ನೇ ಕಣಕ್ಕಿಳಿಸಿತ್ತು.

46
ಕೇರಳ ವಿಧಾನಸಭೆಯಲ್ಲಿ ಬಿಜೆಪಿ ಖಾತೆ

2016ರಲ್ಲಿ ಇದೇ ಕ್ಷೇತ್ರದಿಂದ ಗೆಲ್ಲುವ ಮೂಲಕ ಓ. ರಾಜಗೋಪಾಲ್ ಅವರು ಕೇರಳ ವಿಧಾನಸಭೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದರು. ಆಗ ಯುಡಿಎಫ್ ಮಿತ್ರಪಕ್ಷದ ಅಭ್ಯರ್ಥಿ ವಿ. ಸುರೇಂದ್ರನ್ ಪಿಳ್ಳೈ ಕೇವಲ 9.70% ಮತಗಳನ್ನು ಪಡೆದಿದ್ದರು. ಯುಡಿಎಫ್‌ಗೆ ಸಿಗಬೇಕಿದ್ದ ಮತಗಳು ಬಿಜೆಪಿಗೆ ವರ್ಗಾವಣೆಯಾದ ಕಾರಣ ರಾಜಗೋಪಾಲ್ 47.46% ಮತಗಳನ್ನು ಪಡೆದು ಗೆದ್ದರು ಎಂದು ಎಲ್‌ಡಿಎಫ್ ಆರೋಪಿಸಿತ್ತು. 

2016ರಲ್ಲಿ ಶಿವನ್‌ಕುಟ್ಟಿ ಅವರಿಗೆ 41.39% ಮತಗಳು ಬಂದಿದ್ದವು. ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲು ಯುಡಿಎಫ್ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿದ್ದೇ ಬಿಜೆಪಿಯ ಗೆಲುವಿಗೆ ಕಾರಣವಾಯಿತು ಎಂಬುದು ಎಲ್‌ಡಿಎಫ್ ವಾದವಾಗಿತ್ತು.

56
ಹೊಸ ನೇಮಂ ಕ್ಷೇತ್ರದ ಚುನಾವಣೆ

ಹೊಸ ನೇಮಂ ಕ್ಷೇತ್ರದಲ್ಲಿ ಇದುವರೆಗೆ ಮೂರು ವಿಧಾನಸಭಾ ಚುನಾವಣೆಗಳು ನಡೆದಿವೆ. ಮೂರೂ ಬಾರಿಯೂ ಎಲ್‌ಡಿಎಫ್‌ನಿಂದ ವಿ. ಶಿವನ್‌ಕುಟ್ಟಿ ಅವರೇ ಸ್ಪರ್ಧಿಸಿದ್ದರು. 2011ರಲ್ಲಿ ಓ. ರಾಜಗೋಪಾಲ್ ಅವರನ್ನು ಸೋಲಿಸಿದ್ದ ಶಿವನ್‌ಕುಟ್ಟಿ, 2016ರಲ್ಲಿ ಅವರಿಂದಲೇ ಸೋಲನುಭವಿಸಿದ್ದರು. ಬಿಜೆಪಿಯ ಈ ಗೆಲುವು ಐದು ವರ್ಷಗಳ ಕಾಲ ಸಿಪಿಎಂ ಅನ್ನು ಕಾಡಿತ್ತು. ಆದರೆ 2021ರಲ್ಲಿ, ರಾಜಗೋಪಾಲ್ ಬದಲು ಸ್ಪರ್ಧಿಸಿದ್ದ ಕುಮ್ಮನಂ ರಾಜಶೇಖರನ್ ಅವರನ್ನು ಸೋಲಿಸಿ ಶಿವನ್‌ಕುಟ್ಟಿ ಬಿಜೆಪಿ ಖಾತೆಯನ್ನು ಬಂದ್ ಮಾಡಿಸಿದ್ದರು. ಕಳೆದ ಸ್ಥಳೀಯ ಚುನಾವಣೆಯಲ್ಲಿ ಸಿಕ್ಕ ಮುನ್ನಡೆಯೇ ಈ ಬಾರಿ ಬಿಜೆಪಿಯ ನಿರೀಕ್ಷೆಯಾಗಿತ್ತು.

66
ನೇಮಂ ಫಲಿತಾಂಶ

ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರದಲ್ಲಿ ಎರಡನೇ ಸ್ಥಾನ ಪಡೆದಿದ್ದ ರಾಜೀವ್ ಚಂದ್ರಶೇಖರ್ ಅವರನ್ನು ನೇಮಂ ಜನರಿಗೆ ಹೊಸದಾಗಿ ಪರಿಚಯಿಸುವ ಅಗತ್ಯ ಬಿಜೆಪಿಗೆ ಇರಲಿಲ್ಲ. ಮೊದಲ ಎರಡು ಚುನಾವಣೆಗಳಲ್ಲಿ ಮಿತ್ರಪಕ್ಷಕ್ಕೆ ಸೀಟು ಬಿಟ್ಟುಕೊಡದೆ ಕಾಂಗ್ರೆಸ್ ಸ್ಪರ್ಧಿಸಿದ್ದರೆ, ನೇಮಂ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 2011ರಲ್ಲಿ 17.4% ಮತ್ತು 2016ರಲ್ಲಿ 9.7% ಮತಗಳನ್ನು ಮಾತ್ರ ಪಡೆದಿದ್ದ ಯುಡಿಎಫ್, 2021ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದಾಗ ತನ್ನ ಮತಗಳಿಕೆಯನ್ನು 25%ಕ್ಕೆ ಹೆಚ್ಚಿಸಿಕೊಂಡಿತ್ತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories