ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿ ಪ್ರಮುಖ ನಗರಕ್ಕೆ ಹೈಸ್ಪೀಡ್ ಡೈಮಂಡ್ ಕಾರಿಡಾರ್ ರೈಲು

Published : May 04, 2026, 10:22 PM IST

ಬೆಂಗಳೂರು ಹೈದರಾಬಾದ್, ಬೆಂಗಳೂರು ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ಹೊಸ ಹೈಸ್ಪೀಡ್ ಡೈಮಂಡ್ ಕಾರಿಡಾರ್ ರೈಲು ಸಾರಿಗೆ ಸಂಪರ್ಕಕ್ಕೆ ಹೊಸ ಮುನ್ನಡಿ ಬರೆಯಲಿದೆ. 1 ಗಂಟೆ, 2 ಗಂಟೆಯಲ್ಲಿ ತಲುಪುವ ಹೊಸ ರೈಲು ನಗರಗಳನ್ನು ಮತ್ತಷ್ಟು ಹತ್ತಿರಗೊಳಿಸಲಿದೆ.

PREV
15
ಹೈಸ್ಪೀಡ್ ಡೈಮಂಡ್ ಕಾರಿಡಾರ್

ಭಾರತೀಯ ರೈಲ್ವೇ ಹಲವು ಮಹತ್ತರ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹೊಸ ರೈಲು ಯೋಜನೆ, ವಂದೇ ಭಾರತ್, ರೈಲ್ವೇ ನಿಲ್ದಾಣಗಳ ಉನ್ನತೀಕರಣ ಸೇರಿದಂತೆ ಹಲವು ಅಮೂಲಾಗ್ರ ಬದಲಾವಣೆಯಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಇದೀಗ ಹೈಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆ ಆರಂಭಿಸುತ್ತಿದೆ.

25
ಬೆಂಗಳೂರು ಸೇರಿ 6 ನಗರಗಳಿಗೆ ಹೈಸ್ಪೀಡ್ ಸಂಪರ್ಕ

ಹೈಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆಯಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಮುಂಬೈ ಹಾಗೂ ಅಮರಾವತಿ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ. ಅತೀ ವೇಗ ಹಾಗೂ ತ್ವರಿತ ಸಂಪರ್ಕ ಸಾರಿಗೆ ಇದಾಗಿದೆ. ಈ ನಗನರಗಳ ನಡುವಿನ ಸಮಯದ ಅಂತರವನ್ನು ಈ ಯೋಜನೆ ಕಡಿತಗೊಳಿಸಲಿದೆ.

35
ಬೆಂಗಳೂರು-ಚೆನ್ನೈ 73 ನಿಮಿಷ

ಹೊಸ ಯೋಜನೆಯಡಿಯಲ್ಲಿ ಬೆಂಗಳೂರು ಚೆನ್ನೈ ನಡುವಿನ ಪ್ರಯಾಣ ಸಮಯ ಕೇವಲ 73 ನಿಮಿಷ, ಇನ್ನು ಬೆಂಗಳೂರು ಹೈದರಾಬಾದ್ 2 ಗಂಟೆ 8 ನಿಮಿಷ, ಅಮರಾವತಿ ಹೈದರಾಬಾದ್ 70 ನಿಮಿಷ, ಅಮರಾವತಿ ಚೆನ್ನೈ 112 ನಿಮಿಷ, ಪುಣೆ ಮುಂಬೈ 48 ನಿಮಿಷ, ಹೈದರಾಬಾದ್ ಪುಣೆ 1 ಗಂಟೆ 55 ನಿಮಿಷಗಲ್ಲಿ ಸಂಪರ್ಕ ಕಲ್ಪಿಸಲಿದೆ.

45
ಯೋಜನೆ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ಹೊಸ ಯೋಜನೆ ಕುರಿತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿದ್ದಾರೆ. ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಡೈಮಂಡ್ ಕಾರಿಡಾರ್ ಯೋಜನೆ ಕೂಡ ಒಂದಾಗಿದೆ. ಶೀಘ್ರದಲ್ಲೇ ಹೊಸ ಯೋಜನೆಗಳು ಆರಂಭಗೊಳ್ಳಲಿದೆ. ರೂಪುರೇಶೆ ಪೂರ್ಣಗೊಂಡಿದೆ ಎಂದಿದ್ದಾರೆ.

55
ಹೊಸ ರೈಲು ಸೇವೆ

ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿ ರೈಲುಗಳ ಸೇವೆಯನ್ನು ನೀಡಲಾಗುತ್ತಿದೆ. ಇದರ ನಡುವೆ 500 ಹೊಸ ರೈಲುಗಳು ಸೇವೆಗೆ ಸಜ್ಜಾಗುತ್ತಿದೆ. ಶೀಘ್ರದಲ್ಲೇ ಹೊಸ ರೈಲುಗಳು ಸೇವೆ ಆರಂಭಿಸಲಿದೆ. ಇನ್ನು ಎಲ್ಲಾ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದಿದ್ದಾರೆ.

ಹೊಸ ರೈಲು ಸೇವೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories