ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?

Published : Aug 09, 2026, 07:53 AM IST

ತಮಿಳುನಾಡಿನಲ್ಲಿ ವರ್ಷದ 365 ದಿನವೂ ಹರಿಯುವ ಏಕೈಕ ಜೀವ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು, ತನ್ನ ನೀರಿನಲ್ಲಿನ ತಾಮ್ರದ ಅಂಶದಿಂದ ಹೆಸರುವಾಸಿಯಾಗಿದ್ದು, ಹಲವು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.

PREV
15
ತಮಿಳುನಾಡಿನ ಪ್ರಮುಖ ನದಿ

ತಮಿಳುನಾಡಿನ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ಸಹ ಒಂದಾಗಿದೆ. ಕರ್ನಾಟಕದಿಂದ ಬರುವ ಕಾವೇರಿಗಾಗಿ ತಮಿಳುನಾಡು ಕಾಯುತ್ತಿರುತ್ತದೆ. ಆದ್ರೆ ಈ ಬಾರಿ ಮಳೆಯ ಕೊರತೆ ಹಿನ್ನೆಲೆ ರಾಜ್ಯ ಸರ್ಕಾರ ಸಮಯೋಚಿತವಾಗಿ ನೀರು ಬಿಡುಗಡೆ ಮಾಡುತ್ತಿದೆ. ಆದರೆ ತಮಿಳುನಾಡಿನಲ್ಲಿ ವರ್ಷವಿಡೀ ಹರಿಯುವ ಒಂದು ಜೀವ ನದಿಯೂ ಇದೆ. ಈ ನದಿ 365 ದಿನಗಳಲ್ಲಿ ಹರಿಯುತ್ತದೆ.

25
365 ದಿನವೂ ಹರಿಯುವ ನದಿ

ತಮಿಳುನಾಡಿನಲ್ಲಿ 365 ದಿನವೂ ಒಂದು ನದಿ ಹರಿಯುತ್ತದೆಯೇ? ಎಂದು ನಿಮಗೆ ಆಶ್ಚರ್ಯವಾಗಬಹುದು. ಹೌದು, ತಮಿಳುನಾಡಿನಲ್ಲಿ ವರ್ಷಪೂರ್ತಿ ಹರಿಯುವ ಏಕೈಕ ವತ್ತದ ಜೀವ ನದಿ ತಾಮಿರಬರಣಿ. ಬೇರೆ ನದಿಗಳು ನೀರಿಗಾಗಿ ನೆರೆ ರಾಜ್ಯಗಳನ್ನು ಅವಲಂಬಿಸಿದ್ದರೆ, ತಾಮಿರಬರಣಿ ಯಾರ ಸಹಾಯವೂ ಇಲ್ಲದೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಬೇಸಿಗೆಯಲ್ಲಿ ಬೇರೆ ನದಿಗಳು ಬತ್ತಿ ಹೋದರೆ, ತಾಮಿರಬರಣಿ ನದಿ ಹರಿಯುತ್ತಿರುತ್ತದೆ.

35
ತಾಮಿರಬರಣಿ ಹುಟ್ಟುವ ಸ್ಥಳ

ಈ ನದಿ ಹರಿಯುವ ಪೊಟ್ಟಿಗೈ ಮಲೆ ಪ್ರದೇಶವು ನೈಋತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಮತ್ತು ಈಶಾನ್ಯ ಮುಂಗಾರು ಎರಡರ ಮಳೆಯನ್ನೂ ನೇರವಾಗಿ ಪಡೆಯುತ್ತದೆ. ಅಲ್ಲದೆ, ತಾಮಿರಬರಣಿ ಹುಟ್ಟುವ ಸ್ಥಳದಲ್ಲಿರುವ ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳು ನೀರನ್ನು ಹಿಡಿದಿಟ್ಟುಕೊಂಡು, ಮಳೆ ಇಲ್ಲದಿದ್ದಾಗಲೂ ಸಣ್ಣ ಸಣ್ಣ ಬುಗ್ಗೆಗಳ ಮೂಲಕ ವರ್ಷಪೂರ್ತಿ ನದಿಗೆ ನೀರು ಬಿಡುತ್ತವೆ. ಈ ನದಿ ಪಶ್ಚಿಮ ಘಟ್ಟಗಳ ಪೊಟ್ಟಿಗೈ ಮಲೆಯಲ್ಲಿ (ಅಗಸ್ತ್ಯ ಕೂಟ) ಸುಮಾರು 1,725 ಮೀಟರ್ ಎತ್ತರದಲ್ಲಿ ಹುಟ್ಟುತ್ತದೆ.

45
ನದಿಯಲ್ಲಿ ತಾಮ್ರದ (Copper) ಅಂಶ

ಪೊಟ್ಟಿಗೈ ಬೆಟ್ಟದಲ್ಲಿ ತನ್ನ ಪಯಣ ಆರಂಭಿಸುವ ತಾಮಿರಬರಣಿ, ಸುಮಾರು 128 ಕಿ.ಮೀ ಹರಿದು ತೂತುಕುಡಿ ಜಿಲ್ಲೆಯ ಪುನ್ನಕ್ಕಾಯಲ್ ಬಳಿ ಮನ್ನಾರ್ ಖಾರಿಯಲ್ಲಿ ಸಮುದ್ರ ಸೇರುತ್ತದೆ. ಈ ನದಿಯ ನೀರಿನಲ್ಲಿ ತಾಮ್ರದ (Copper) ಅಂಶ ಹೆಚ್ಚಾಗಿರುವುದರಿಂದ, ನೀರು ತಾಮ್ರದ ಬಣ್ಣದಲ್ಲಿ ಕಾಣುತ್ತದೆ. ಇದೇ ಕಾರಣಕ್ಕೆ 'ತಾಮಿರಂ' + 'ಪರಣಿ' ಸೇರಿ 'ತಾಮಿರಬರಣಿ' ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಕಾರೈಯಾರ್, ಸರ್ವಲಾರ್, ಮಣಿಮುತ್ತಾರು, ಕಡನಾನದಿ, ಪಚ್ಚೈಯಾರ್ ಮತ್ತು ಚಿತ್ತಾರ್ ಇದರ ಪ್ರಮುಖ ಉಪನದಿಗಳು. ಇದರ ನದಿಗೆ ಪಾಪನಾಸಂ ಅಣೆಕಟ್ಟು, ಮಣಿಮುತ್ತಾರು ಅಣೆಕಟ್ಟು, ಸರ್ವಲಾರ್ ಅಣೆಕಟ್ಟು ಮತ್ತು ಕಡನಾನದಿ ಅಣೆಕಟ್ಟು ಸೇರಿದಂತೆ ಹಲವು ಪ್ರಮುಖ ಅಣೆಕಟ್ಟುಗಳಿವೆ.

55
ಆಣೆಕಟ್ಟು

ವರ್ಷಪೂರ್ತಿ ಹರಿಯುವ ತಾಮಿರಬರಣಿ ಮತ್ತು ಅದರ ಉಪನದಿಗಳಿಂದ ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೇರವಾಗಿ ನೀರಾವರಿ ಸೌಲಭ್ಯ ಸಿಗುತ್ತದೆ. ತಾಮಿರಬರಣಿ ಕುಡಿಯುವ ನೀರಿನ ಯೋಜನೆಗಳ ಮೂಲಕ ತಿರುನಲ್ವೇಲಿ, ತೂತುಕುಡಿ, ತೆಂಕಾಸಿ, ವಿರುದುನಗರ್ ಮತ್ತು ರಾಮನಾಥಪುರಂ ಸೇರಿ 5 ದಕ್ಷಿಣ ಜಿಲ್ಲೆಗಳ ಜನರ ದಾಹವನ್ನು ಈ ನದಿ ನೀಗಿಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories