ನೀಟ್ ಪ್ರತಿಭಟನಾಕಾರರನ್ನು 'ಗಟಾರ ಜನರೇಶನ್' ಎಂದು ಕರೆದು ವಿವಾದ ಸೃಷ್ಟಿಸಿದ್ದ ಬಿಜೆಪಿ ಸಂಸದೆ ಕಂಗನಾ ರಣಾವತ್, ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಬಳಿಕ, ಜೆನ್ ಝೀ ಯುವಜನರೇ ದೇಶದ ದೊಡ್ಡ ಶಕ್ತಿ ಮತ್ತು ಸಾಂಸ್ಕೃತಿಕ ರಾಯಭಾರಿಗಳು ಎಂದು ಹೊಗಳಿದ್ದಾರೆ.
ನವದೆಹಲಿ: ಜಿರಳೆ ಪಕ್ಷದ ಜೆನ್ ಝೀ (ಯುವ) ಪ್ರತಿಭಟನಾಕಾರರನ್ನು ‘ಗಟಾರ ಜನರೇಶನ್’ ಎಂದು ಕರೆದು ದೊಡ್ಡ ವಿವಾದ ಸೃಷ್ಟಿಸಿದ ನಟಿ-ಬಿಜೆಪಿ ಸಂಸದೆ ಕಂಗನಾ ರಾಣಾವತ್ ಈಗ ಉಲ್ಡಾ ಹೊಡೆದಿದ್ದು, ‘ಅವರು ಭಾರತದ ಅತಿದೊಡ್ಡ ಶಕ್ತಿ ಮತ್ತು ದೇಶದ ಸಂಸ್ಕೃತಿ ಮತ್ತು ಗುರುತಿನ ರಾಯಭಾರಿಗಳು’ ಎಂದು ಹೊಗಳಿದರು.
26
ದೇಶದ ಸಾಂಸ್ಕೃತಿಕ ರಾಯಭಾರಿಗಳು: ಬಿಜೆಪಿ ಸಂಸದೆ
ಜನರಲ್ ಝೀಗಳು ರಾಷ್ಟ್ರವಿರೋಧಿಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ ಮರುದಿನ ಸಂಸದೆ ಕಂಗನಾ ರಣಾವತ್ ಈ ಹೇಳಿಕೆ ನೀಡಿದರು. ಸುದ್ದಿಗಾರರ ಜತೆ ಅವರು ಮಾತನಾಡಿ, ‘ಜೆನ್ ಝೀಗಳು ನಮ್ಮ ದೇಶದ ಶಕ್ತಿ ಮತ್ತು ಒಂದು ರೀತಿಯಲ್ಲಿ ನಮ್ಮ ರಾಷ್ಟ್ರಕ್ಕೆ ದೊಡ್ಡ ಆಸ್ತಿ. ನಮ್ಮ ಯುವಜನರು ನಮ್ಮ ಸಂಸ್ಕೃತಿ ಮತ್ತು ಅದರ ಗುರುತಿನ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ’ ಎಂದರು.
36
ಈ ಹಿಂದೆ ಕಂಗನಾ ಹೇಳಿದ್ದೇನು?:
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಕೆಲ ವಿಡಿಯೋಗಳಿಗೆ ಆಕ್ಷೇಪಿಸಿರುವ ಕಂಗನಾ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ‘ಒಂದೇ ಸ್ಥಳದಲ್ಲಿ ಇಷ್ಟೊಂದು ಮಟ್ಟಿಗಿನ ಕೊಳಕನ್ನು ನನ್ನ ಜೀವನದಲ್ಲಿ ಇದುವರೆಗೆ ನೋಡಿಲ್ಲ. ಅವರು ಮಾತಾಡುವ ರೀತಿ, ಅವರು ಬಳಸುತ್ತಿರುವ ಭಾಷೆ ಎಲ್ಲವೂ ಪ್ರತಿಯೊಂದು ಫ್ರೇಮ್‌ನಲ್ಲಿಯೂ ಅಸಹ್ಯಕರವಾಗಿದೆ. ಛೇ ಯಾರು ಇವರಿಗೆ ಜನ್ಮ ನೀಡಿ ಬೆಳೆಸುತ್ತಿದ್ದಾರೆ?’ ಎಂದು ಪಶ್ನಿಸಿದ್ದಾರೆ.
‘ನೀವು ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತೀರಿ ಮತ್ತು ಅವುಗಳಂತೆಯೇ ಕಾಣುತ್ತೀರಿ, ಹಾಗೆಯೇ ವರ್ತಿಸುತ್ತೀರಿ. ಅಲ್ಲಿ ಯಾವುದೇ ವಿರೋಧಾಭಾಸ ಅಥವಾ ಹೋಲಿಕೆ ಇಲ್ಲ, ಕೇವಲ ನಿಮ್ಮ ಕೊಳಕು, ಕಸವನ್ನು ಜಗತ್ತಿಗೆ ಹರಡುತ್ತಿದ್ದೀರಿ’ ಎಂದು ಹೇಳಿದ್ದರು.
56
ಕಂಗನಾಗೆ ಸೌರವ್ ದಾಸ್ ತರಾಟೆ
ನಿಮಗಿಂತ ಜೆನ್‌ಝೀಗಳು ದೇಶಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ನೀವೇನು ಕೊಡುಗೆ ನೀಡಿದ್ದೀರಿ ಎಂಬುದು ನೀವು ಸಂಸದರಾಗಿರುವ ಹಿಮಾಚಲ ಪ್ರದೇಶದ ಜನರಿಗೆ ಗೊತ್ತಿದೆ’ ಎಂದು ಕಂಗನಾರನ್ನು ಒಮ್ಮೆ ಜನ ತರಾಟೆಗೆ ತೆಗೆದುಕೊಂಡ ಪ್ರಸಂಗ ಉಲ್ಲೇಖಿಸಿ ಸೌರವ್ ದಾಸ್ ಚಾಟಿ ಬೀಸಿದ್ದರು.
66
ಹೃತಿಕ್ ರೋಷನ್ ಹೆಸರು ಉಲ್ಲೇಖ
ಸೌರವ್ ದಾಸ್, ‘ನೀನು ಹೃತಿಕ್‌ನಂತೆ ಕಾಣುತ್ತಿರುವೆ. ಹೀಗಾಗಿ ಕಂಗನಾ ನಿನ್ನನ್ನು ನಿಂದಿಸಿರಬೇಕು ಎಂದು ನನ್ನ ಸ್ನೇಹಿತರು ನನಗೆ ಹೇಳಿದ್ದರು’ ಎಂದು ನಟಿಗೆ ಟಾಂಗ್ ನೀಡಿದ್ದರು. ಇದಾದ ಬಳಿಕ ಜಾಲತಾಣದಲ್ಲಿ ‘ಹೃತಿಕ್ ರೋಷನ್ ಅವರಿಗೆ ಜಗತ್ತು ಕ್ಷಮೆಯಾಚಿಸಬೇಕು’ ಎನ್ನುವ ವಿಷಯ ಟ್ರೆಂಡ್ ಆರಂಭವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಹೃತಿಕ್, ‘ಸಂದರ್ಭ ಸರಿಯಿದ್ದಾಗ ಸತ್ಯಗಳಿಗೆ ಕಾಯುತ್ತೇನೆ. ಅದು ನ್ಯಾಯಯುತವಾಗಿರುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ