ಇಲಿಗಳು 7 ಕೋಟಿ ರು. ಮೌಲ್ಯದ 26000 ಟನ್‌ ಭತ್ತ ತಿಂದು ತೇಗಿದವಂತೆ! ಅಕ್ಕಿ ನಾಪತ್ತೆಗೆ ಸರ್ಕಾರದ ಉತ್ತರ

Published : Jan 17, 2026, 08:46 AM IST

ಛತ್ತೀಸ್‌ಗಢದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 7 ಕೋಟಿ ರೂಪಾಯಿ ಮೌಲ್ಯದ 26,000 ಕ್ವಿಂಟಾಲ್ ಭತ್ತ ನಾಶವಾಗಿದೆ. ಇದಕ್ಕೆ ಅಧಿಕಾರಿಗಳು ಇಲಿಗಳನ್ನು ದೂಷಿಸಿದ್ದು, ಇದು ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂದು ವಿಪಕ್ಷಗಳು ಆರೋಪಿಸಿ ಪ್ರತಿಭಟನೆ ಆರಂಭಿಸಿವೆ.

PREV
14
7 ಕೋಟಿ ರು. ಮೌಲ್ಯದ 26000 ಟನ್‌ ಭತ್ತ

ರಾಯ್ಪುರ: ದಾಸ್ತಾನು ಕೇಂದ್ರಗಳಲ್ಲಿರಿಸಿದ್ದ ಸುಮಾರು 7 ಕೋಟಿ ರು. ಮೌಲ್ಯದ 26000 ಟನ್‌ ಭತ್ತ ನಾಶವಾಗಿದ್ದಕ್ಕೆ ಛತ್ತೀಸ್‌ಗಢ ಸರ್ಕಾರ ಇಲಿಗಳನ್ನು ದೂಷಿಸಿ, ಕೈತೊಳೆದುಕೊಳ್ಳುವ ಯತ್ನ ಮಾಡಿದೆ. ಇದು ವಿಪಕ್ಷಗಳನ್ನು ಕೆರಳಿಸಿದ್ದು, ‘ವಾಂಟೆಡ್‌ ರ್‍ಯಾಟ್ಸ್‌’ ಎಂಬ ಅಭಿಯಾನ ಆರಂಭಿಸಿವೆ.

24
2 ಗೋದಾಮುಗಳಲ್ಲಿ ಇರಿಸಲಾಗಿದ್ದ ಭತ್ತ

ಕಬೀರಧಾಮ ಜಿಲ್ಲೆಯ 2 ಗೋದಾಮುಗಳಲ್ಲಿ ಇರಿಸಲಾಗಿದ್ದ 26,000 ಕ್ವಿಂಟಾಲ್‌ ಭತ್ತದಲ್ಲಿ ಒಂದಿಷ್ಟು ಭಾಗ ಕಾಣೆಯಾಗಿದ್ದರೆ, ಉಳಿದದ್ದು ಹಾಳಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಇಂತಹ ಉತ್ತರವನ್ನು ನೀಡಿದ್ದಾರೆ.

34
ಭ್ರಷ್ಟಾಚಾರದ ಆರೋಪ

‘ಇಲಿ ಅಥವಾ ಗೆದ್ದಲು ತಿಂದಿರಬಹುದು. ಇಲ್ಲವೇ ತೇವಾಂಶ ನಷ್ಟದಿಂದಾಗಿ ತೂಕ ಕ್ಷೀಣಿಸಿರಬಹುದು’ ಎನ್ನುವ ಮೂಲಕ ಭ್ರಷ್ಟಾಚಾರದ ಆರೋಪದಿಂದ ಅಧಿಕಾರಿಗಳು ಜಾರಿಕೊಂಡಿದ್ದರು.

ಇದನ್ನೂ ಓದಿ : 25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ: ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ

44
ಇಲಿಗಳು ಬೇಕಾಗಿದ್ದಾವೆ

ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕರು, ‘ಅವು 4 ಕಾಲಿನ ಮೂಷಿಕಗಳೇ ಅಥವಾ 2 ಕಾಲಿನವುಗಳೇ’ ಎಂದು ಪ್ರಶ್ನಿಸಿದ್ದು, ‘30 ಕೋಟಿ ರು. ಭತ್ತದ ಹಗರಣವನ್ನು ಮುಚ್ಚಿಹಾಕಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. ಜತೆಗೆ, ಬಿಜೆಪಿ ನಾಯಕರ ತಲೆ ಮೇಲೆ ಇಲಿಗಳ ಚಿತ್ರವಿರುವ ಪೋಸ್ಟರ್‌ ಪ್ರದರ್ಶಿಸಿ ‘ಇಲಿಗಳು ಬೇಕಾಗಿದ್ದಾವೆ’ ಎಂದು ಪ್ರತಿಭಟಿಸಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್‌ನ 250 ಕೋಟಿಯ 53 ಎಕರೆ ಅಕ್ರಮ ರಿಜಿಸ್ಟರ್‌ ಕೇಸ್‌ನಲ್ಲಿ ರೋಚಕ ತಿರುವು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories