ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಇದು ಕ್ಲಾಸ್ ಸೂಚಿಸುತ್ತದೆ. ಅಷ್ಟಕ್ಕೂ ರೈಲಿನ ಬಣ್ಣದ ಹಿಂದಿನ ರಹಸ್ಯ ಇಲ್ಲಿದೆ.
ಭಾರತೀಯ ರೈಲ್ವೇ ಪ್ರತಿ ದಿನ ಕೋಟ್ಯಾಂತ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಬಹುತೇಕರು ರೈಲು ಪ್ರಯಾಣವನ್ನೇ ನೆಚ್ಚಕೊಂಡಿದ್ದರೆ. ಕಳೆದ ಕೆಲ ವರ್ಷಗಳಿಂದ ಭಾರತದ ರೈಲು ವ್ಯವಸ್ಥೆ ಸುಧಾರಣೆಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳು ಲಭ್ಯವಾಗುತ್ತಿದೆ. ನಿಲ್ದಾಣಗಲು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್ ಸೇರಿದಂತೆ ಹೊಸ ರೈಲುಗಳು ಸೇವೆ ನೀಡುತ್ತಿದೆ. ಇದರ ನಡುವೆ ಭಾರತೀಯ ರೈಲುಗಳ ಬಣ್ಣಗಳ ಹಿಂದೆ ಒಂದು ಮಹತ್ವದವಿದೆ.
27
ಕೆಂಪು, ನೀಲಿ, ಹಸಿರು
ಭಾರತೀಯ ರೈಲಿನ ಕೋಚ್‌ಗಳಿಗೆ ಬಣ್ಮ ನೀಡುವಾಗ ಸಿಕ್ಕ ಸಿಕ್ಕ ಬಣ್ಣ ನೀಡಲುವುದಿಲ್ಲ. ಬಳಕೆ, ಕ್ಲಾಸ್ ಸೇರಿದಂತೆ ಹಲವು ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಬಣ್ಣ ನೀಡಲಾಗುತ್ತದೆ. ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ಮಹತ್ವವಿದೆ.ನೀಲಿ, ಕೆಂಪು, ಹಸಿರು ಬಣ್ಣದ ಕೋಚ್‌ಗಳನ್ನು ಹಲವು ರೈಲುಗಳಲ್ಲಿ ಕಾಣಬಹುದು.
37
ನೀಲಿ ಕೋಚ್ ಏನನ್ನು ಸೂಚಿಸುತ್ತದೆ
ಭಾರತೀಯ ರೈಲುಗಳ ಕೋಚ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬಣ್ಣ ನೀಲಿ. ಹವಾನಿಯಂತ್ರಣವಿಲ್ಲದ ಪ್ರಯಾಣವನ್ನು ನೀಲಿ ಬಣ್ಣ ಸೂಚಿಸುತ್ತದೆ. ಜನರಲ್ ಮತ್ತು ಸ್ಲೀಪರ್ ಕೋಚ್‌ಗಳಿಗೆ ನೀಲಿ ಬಣ್ಣ ನೀಡಲಾಗುತ್ತದೆ. ಇದು ಸಾಮಾನ್ಯ ಜನರಿಗೆ ಕೈಗೆಟುಕುವ ದರವನ್ನು ಸಹ ಸೂಚಿಸುತ್ತದೆ.
ಹಿಂದೆ, ಭಾರತೀಯ ರೈಲ್ವೆಯ ಕೋಚ್‌ಗಳ ಮುಖ್ಯ ಬಣ್ಣ ಮೆರೂನ್ ಆಗಿತ್ತು. ಈಗಿನ ನೀಲಿ ಬಣ್ಣ ಬರುವ ಮೊದಲು ಮೆರೂನ್ ಕೋಚ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಇಂದಿಗೂ ಕೆಲವು ಹಳೆಯ ರೈಲುಗಳಲ್ಲಿ ಮೆರೂನ್ ಬಣ್ಣವನ್ನು ಕಾಣಬಹುದು. ಈ ಬಣ್ಣದ ಕೋಚ್‌ಗಳು ಪ್ರಯಾಣಿಕರಿಗೆ ಹಳೆಯ ನೆನಪುಗಳನ್ನು ನೀಡುತ್ತವೆ.
57
ಹಸಿರು ಬಣ್ಣದ ಕೋಚ್
ರೈಲು ಕೋಚ್‌ಗಳಿಗೆ ನೀಡುವ ಹಸಿರು ಬಣ್ಣವನ್ನು ಕೆಲವು ವಿಶೇಷ ಸೇವೆಗಳಲ್ಲಿ ಬಳಸಲಾಗುತ್ತದೆ. ಸಾಮಾನ್ಯರ ರಥ ರೈಲುಗಳಲ್ಲಿ ಹಸಿರು ಬಣ್ಣದ ಕೋಚ್‌ಗಳನ್ನು ಬಳಸಲಾಗುತ್ತದೆ. ರೈಲುಗಳು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಎಸಿ ಪ್ರಯಾಣವನ್ನು ಒದಗಿಸುತ್ತವೆ.
67
ಕೆಂಪು ಬಣ್ಣದ ಕೋಚ್
ಇತ್ತೀಚೆಗೆ ಕೆಂಪು ಬಣ್ಣದ ಕೋಚ್‌ಗಳು ಸಾಮಾನ್ಯವಾಗಿವೆ. ಈ ಬಣ್ಣವು ಹವಾನಿಯಂತ್ರಿತ ಕೋಚ್‌ಗಳನ್ನು ಸೂಚಿಸುತ್ತದೆ. ಇದು ಪ್ರೀಮಿಯಂ ಸೇವೆಗಳನ್ನು ಪ್ರತಿನಿಧಿಸುತ್ತದೆ. ನೀಲಿ ಕೋಚ್‌ಗಳಿಗೆ ಹೋಲಿಸಿದರೆ, ಇವುಗಳಲ್ಲಿ ಉತ್ತಮ ಒಳಾಂಗಣ ಮತ್ತು ಸೌಲಭ್ಯಗಳಿರುತ್ತವೆ.
ಕೆಂಪು ಬಣ್ಣದ ಕೋಚ್
77
ಹಳದಿ ಬಣ್ಣದ ಕೋಚ್
ಹಳದಿ ಬಣ್ಣದ ಕೋಚ್‌ಗಳು ಅತ್ಯಂತ ಕೈಗೆಟುಕುವ ದರದ ಪ್ರಯಾಣವನ್ನು ಸೂಚಿಸುತ್ತವೆ. ಈ ಕೋಚ್‌ಗಳು ಹವಾನಿಯಂತ್ರಿತವಾಗಿರುವುದಿಲ್ಲ.ಜನರಲ್ ಕೆಟಗರಿಯಲ್ಲಿ ಈ ಬಣ್ಣದ ಕೋಚ್‌ಗಳನ್ನು ಬಳಕೆ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ