ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಆಹಾರಗಳು ತುಂಬಾ ವಿಶೇಷತೆಯನ್ನು ಪಡೆದುಕೊಂಡಿವೆ. ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿ ಪ್ರತಿ ರಾಜ್ಯದಲ್ಲೂ ವಿಭಿನ್ನ ರೀತಿಯ ಆಹಾರ ಪದಾರ್ಥಗಳು ಸ್ಥಳೀಯ ಮಾನ್ಯತೆ ಪಡೆದಿವೆ. ದಕ್ಷಿಣ ಭಾರತೀಯ ಆಹಾರಗಳಲ್ಲಿ ಉಪ್ಪು, ಖಾರ, ಹುಳಿ, ಸಿಹಿ ಸಮನ್ವಯದ ಆಹಾರಗಳ ನಾವು ತರುಚಿಸಬಹುದು.
ಆದರೆ, ವಂದೇ ಭಾರತ್ ರೈಲಿನ ಆಹಾರ ಮೆನುವಿನಲ್ಲಿ ದಕ್ಷಿಣ ಭಾರತದ ತಿನಿಸುಗಳೇ ಇಲ್ಲವೆಂದು ಮಲಯಾಳಂ ಲೇಖಕ ಎನ್.ಎಸ್.ಮಾಧವನ್ ಅಸಮಾಧಾನ ವ್ಯಕ್ತಪಡಿಸಿ, ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ಉತ್ತರ ಭಾರತದ ಹಿಂದಿ ಭಾಷೆ ಹೇರಿಕೆ ನಂತರ ಆಹಾರ ಮತ್ತು ಸಂಸ್ಕೃತಿಯನ್ನೂ ಹೇರಿಕೆ ಮಾಡಲಾಗುತ್ತಿದೆ ಎಂಬ ಚರ್ಚೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗಿದೆ.