ಕಾಶಿಯಲ್ಲಿ ಇವರ ದೇಹಗಳನ್ನು ದಹನ ಮಾಡುವುದಿಲ್ಲ? ಯಾಕೆ?
ಕಾಶಿಯಲ್ಲಿ ಗರ್ಭಿಣಿಯರು, ಸಾಧುಗಳು, ಚಿಕ್ಕ ಮಕ್ಕಳು, ಹಾವು ಕಚ್ಚಿ ಸತ್ತವರು, ಚರ್ಮ ರೋಗದಿಂದ ಬಳಲುತ್ತಿರುವವರು ಮತ್ತು ಅಮ್ಮನ ಕಾಯಿಲೆಯಿಂದ ಸತ್ತವರ ದೇಹಗಳನ್ನು ದಹನ ಮಾಡಲಾಗುವುದಿಲ್ಲ. ಇದಕ್ಕೆ ನಿರ್ದಿಷ್ಟ ಕಾರಣಗಳಿವೆ.
ಕಾಶಿಯಲ್ಲಿ ಗರ್ಭಿಣಿಯರು, ಸಾಧುಗಳು, ಚಿಕ್ಕ ಮಕ್ಕಳು, ಹಾವು ಕಚ್ಚಿ ಸತ್ತವರು, ಚರ್ಮ ರೋಗದಿಂದ ಬಳಲುತ್ತಿರುವವರು ಮತ್ತು ಅಮ್ಮನ ಕಾಯಿಲೆಯಿಂದ ಸತ್ತವರ ದೇಹಗಳನ್ನು ದಹನ ಮಾಡಲಾಗುವುದಿಲ್ಲ. ಇದಕ್ಕೆ ನಿರ್ದಿಷ್ಟ ಕಾರಣಗಳಿವೆ.
ಗರ್ಭಿಣಿ ಸ್ತ್ರೀಯರನ್ನು ಸಹ ಕಾಶಿಯಲ್ಲಿ ದಹನ ಮಾಡಲಾಗುವುದಿಲ್ಲ. ಗರ್ಭಿಣಿಯರ ದೇಹವನ್ನು ಸುಟ್ಟರೆ ಹೊಟ್ಟೆ ಉಬ್ಬಿಕೊಳ್ಳುತ್ತದೆ ಮತ್ತು ಚಿತೆಯಲ್ಲಿ ಹೊಟ್ಟೆ ಸಿಡಿಯುವ ಪರಿಸ್ಥಿತಿ ಉಂಟಾಗಬಹುದು. ಅದು ಚೆನ್ನಾಗಿರುವುದಿಲ್ಲವಾದ್ದರಿಂದ ಗರ್ಭಿಣಿ ಸ್ತ್ರೀಯರ ದೇಹಗಳನ್ನು ಸುಡುವುದಿಲ್ಲ.
ಕಾಶಿಯಲ್ಲಿ ಸಾಧುಗಳ ದೇಹವನ್ನು ಸುಡುವುದಿಲ್ಲ. ಅವರ ದೇಹ ನೀರಿನಲ್ಲಿ ಬಿಡುತ್ತಾರೆ ಅಥವಾ ಹೂಳುತ್ತಾರೆ. ಕಾಶಿಯಲ್ಲಿ ಚಿಕ್ಕ ಮಕ್ಕಳ ದೇಹಗಳನ್ನು ಸಹ ಸುಡಲು ಸಾಧ್ಯವಿಲ್ಲ. ಒಂದು ಮಗು ಹನ್ನೆರಡು ವರ್ಷದೊಳಗಿದ್ದರೆ, ಅದನ್ನು ದಹನ ಮಾಡುವುದಿಲ್ಲ. ಹನ್ನೆರಡು ವರ್ಷದೊಳಗಿನ ಮಕ್ಕಳನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಅವುಗಳನ್ನು ಸುಡುವುದಕ್ಕೆ ನಿಷೇಧವಿದೆ.
ಹಾವು ಕಚ್ಚಿ ಸತ್ತವರ ದೇಹವನ್ನು ಕಾಶಿಯಲ್ಲಿ ದಹನ ಮಾಡಲಾಗುವುದಿಲ್ಲ. ಹಾವು ಕಚ್ಚಿ ಸತ್ತವರ ಮೆದುಳು 21 ದಿನಗಳವರೆಗೆ ಜೀವಂತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಮೃತ ದೇಹವನ್ನು ಬಾಳೆ ದಿಂಡಿನಲ್ಲಿ ಕಟ್ಟಿ ನೀರಿನಲ್ಲಿ ತೇಲಲು ಬಿಡಲಾಗುತ್ತದೆ. ಈ ದೇಹವು ತಾಂತ್ರಿಕನ ಕಣ್ಣಿಗೆ ಬಿದ್ದರೆ, ಅವನು ಈ ದೇಹಗಳನ್ನು ಮತ್ತೆ ಬದುಕಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.
ಚರ್ಮ ರೋಗ ಅಥವಾ ಕುಷ್ಠರೋಗದಿಂದ ಬಳಲುತ್ತಿರುವ ರೋಗಿಯು ಸತ್ತರೂ, ಅವರ ದೇಹವನ್ನು ಕಾಶಿಯಲ್ಲಿ ದಹನ ಮಾಡಲಾಗುವುದಿಲ್ಲ. ಅವರ ದೇಹಗಳನ್ನು ದಹನ ಮಾಡಿದರೆ, ರೋಗದ ಬ್ಯಾಕ್ಟೀರಿಯಾ ಗಾಳಿಯಲ್ಲಿ ಹರಡಿ, ಇತರರು ಸಹ ಈ ರೋಗಕ್ಕೆ ಬಲಿಯಾಗಬಹುದು ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಕಾಶಿಯಲ್ಲಿ ಅವರ ಮೃತ ದೇಹಗಳನ್ನು ಸುಡುವುದಕ್ಕೆ ನಿಷೇಧವಿದೆ.
ಅಮ್ಮನ ಕಾಯಿಲೆ ಕಂಡು ಸತ್ತವರ ದೇಹವನ್ನು ಸಹ ದಹನ ಮಾಡಲಾಗುವುದಿಲ್ಲ. ಆ ದೇಹಗಳನ್ನು ಮಾ ದೇವಿಯೇ ತೆಗೆದುಕೊಂಡಿರುವುದರಿಂದ ಅವುಗಳನ್ನು ಸುಡುವುದಿಲ್ಲ.