ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಭಾರತೀಯ ಸಶಸ್ತ್ರ ಪಡೆಗಳಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರು ಭಾರತೀಯ ಯೋಧರ ಧೈರ್ಯ ಮತ್ತು ದೃಢತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರೂ ಸುರಕ್ಷಿತರಾಗಿರಲೆಂದು, ನಾವು ಮಾರ್ಗಸೂಚಿಗಳನ್ನು ಅನುಸರಿಸೋಣ. ಜೈ ಹಿಂದ್, ಜೈ ಇಂಡಿಯಾ, ಜೈ ಆರ್ಮಿ ಎಂದು ಟ್ವೀಟ್ ಮಾಡಿದ್ದಾರೆ. ನೀರಜ್ ಚೋಪ್ರಾ ಭಾರತದ ಸೇನೆಯಲ್ಲಿ 4ನೇ ರಜಪೂತ ರೈಫಲ್ಸ್ ಘಟಕದಲ್ಲಿದ್ದು, 2018 ರಲ್ಲಿ ಸುಬೇದಾರ್ ಆಗಿ ಭಡ್ತಿ ಪಡೆದಿದ್ದಾರೆ.