ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್ ಸೀಸನ್ 2' ಕಾರ್ಯಕ್ರಮದಲ್ಲಿ ಸಲ್ಮಾ ದಿವಾನಿಯಾಗಿ ಬಂದ ಭಾಗ್ಯಶ್ರೀ ತರ್ಕೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಕಾರ್ಯಕ್ರಮದ ನಡುವೆ ಸಮಯ್ ಕಾಮೆಂಟ್‌ನಿಂದ ತೀರ್ಪುಗಾರ್ತಿ ಹುಮಾ ಖುರೇಷಿ ಕೋಪಗೊಂಡ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಟ್ಯಾಂಡ್ ಅಪ್ ಕಾಮಿಡಿಯನ್, ಸಮಯ್ ರೈನ್ ನಡೆಸಿಕೊಡುವ "Indias got latent" ಕಾರ್ಯಕ್ರಮ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಕ್ರಮದಲ್ಲಿ ಆಗಮಿಸಿದ ರಂಗಭೂಮಿ ಕಲಾವಿದೆ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ವೇದಿಕೆ ಮೇಲೆ ಸಲ್ಮಾ ದಿವಾನಿಯಾಗಿ ಕಾಣಿಸಿಕೊಂಡಿದ್ದ ಕಲಾವಿದೆ, ಮುಸ್ಲಿಂ ಅಲ್ಲ, ಆಕೆ ಹಿಂದೂ ಎಂಬ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.
25
ಸಲ್ಮಾ ದಿವಾನಿಯಾಗಿ ಬಂದ ಭಾಗ್ಯಶ್ರೀ
35 ವರ್ಷದ ರಂಗಭೂಮಿ ಕಲಾವಿದೆಯಾಗಿರುವ ಭಾಗ್ಯಶ್ರೀ ತರ್ಕೆ ಅವರು ಇಂಡಿಯಾಸ್ ಗಾಟ್ ಲ್ಯಾಟೆಂಟ್ ಸೀಸನ್ 2ರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಅತ್ಯುತ್ತಮ ಹಾಸ್ಯಪ್ರಜ್ಞೆಯಿಂದ ತೀರ್ಪುಗಾರರು ಮತ್ತು ವೀಕ್ಷಕರನ್ನು ರಂಜಿಸಿ ಒಂದು ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಈ ಸಮಯದಲ್ಲಿ ಸಮಯ್ ರೈನ್ ಜೊತೆ ಬಾಲಿವುಡ್ ನಟಿ ಹುಮಾ ಖುರೇಷಿ ಜೊತೆಯಲ್ಲಿ ಇನ್ನಿತರರು ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.
35
ಸಮಯ್ ರೈನಾ ಕಮೆಂಟ್!
ವೇದಿಕೆ ಮೇಲಿದ್ದ ಸಲ್ಮಾ ದಿವಾನಿ ಪಾತ್ರಧಾರಿಗೆ ಕಾರ್ಯಕ್ರಮಕ್ಕೆ ನಿಮ್ಮೊಂದಿಗೆ ಯಾರು ಬಂದಿದ್ದಾರೆ ಎಂದು ಕೇಳುತ್ತಾರೆ. ಇದಕ್ಕೆ ಸಲ್ಮಾ ದಿವಾನಿ, ಇಲ್ಲಿಗೆ ನಾನು ಒಬ್ಬಳೇ ಬಂದೆ. ಆದರೆ ಬಂದ್ಮೇಲೆ ನನಗೆ ಸೋದರ ಸಂಬಂಧಿಯೊಬ್ಬರು ಸಿಕ್ಕರು ಅಂತಾರೆ. ಇದಕ್ಕೆ ಸಮಯ್ ರೈನಾ, ನಿಮ್ಮ ಪತಿಯಾ ಅಂತಾರೆ. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ನಟಿ ಹುಮಾ ಖುರೇಷಿ, ವಿರೋಧ ವ್ಯಕ್ತಪಡಿಸುತ್ತಾರೆ. ನಂತರ ಈ ವಿಷಯವನ್ನು ಸಮಯ್ ರೈನಾ ತಮಾಷೆಯಾಗಿ ತೆಗೆದುಕೊಂಡು ಹೋಗುತ್ತಾರೆ.
ಕಸೀನ್ ಎಂಬ ಪದಕ್ಕೆ ಪತಿ ಅರ್ಥ ನೀಡಿದ ಸಮಯ್ ರೈನ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಹುಮಾ ಖುರೇಷಿ ಕಾರ್ಯಕ್ರಮದಿಂದ ಹೊರ ಬಂದಿದ್ದರು ಎಂದು ಹೇಳಲಾಗುತ್ತಿದೆ. ಕಾರ್ಯಕ್ರಮದ ವಿಡಿಯೋದಲ್ಲಿ ಈ ಭಾಗವನ್ನು ಎಡಿಟ್ ಮಾಡಲಾಗಿದೆ. ನಂತರ ಸಮಯ್ ರೈನಾ ಅವರು ಹುಮಾ ಅವರನ್ನು ಸಮಾಧಾನಗೊಳಿಸಿ ಕರೆದುಕೊಂಡು ಬಂದರು ಎಂದು ವೀಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
55
ಒಂದು ಭಾಗ ದಾನ ನೀಡುವೆ!
ಬಹುಮಾನದ 1 ಲಕ್ಷ ರೂಪಾಯಿ ಮೊತ್ತವನ್ನು ಏನು ಮಾಡುತ್ತೀರಿ ಎಂದು ಕೇಳಿದಾಗ, ಜೀವನದ ಮೊದಲ ದೊಡ್ಡ ಸಂಪಾದನೆಯಾಗಿದೆ. ಹಾಗಾಗಿ ಇದರಲ್ಲಿ ಒಂದು ಭಾಗವನ್ನು ನೇಪಾಳಕ್ಕೆ ದಾನವನ್ನಾಗಿ ನೀಡುವೆ ಎಂದರು. ಸಲ್ಮಾ ದಿವಾನಿ/ಭಾಗ್ಯಶ್ರೀ ದಾನ ನೀಡುವ ಕುರಿತು ಹೇಳುತ್ತಿದ್ದಂತೆ ವೀಕ್ಷಕರೆಲ್ಲರೂ ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಈ ಎಲ್ಲದರ ನಡುವೆ, ಸಲ್ಮಾ ದಿವಾನಿಯಾಗಿ ಕಾಣಿಸಿಕೊಂಡ ಭಾಗ್ಯಶ್ರೀ ಬಗ್ಗೆ ಕೆಲ ಟ್ರೋಲ್‌ಗಳು ವೈರಲ್ ಆಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ